Monday, February 9, 2026
HomeUncategorizedಈ ಬಜೆಟ್ ಆಂಧ್ರ ಪ್ರದೇಶ್ ಬಿಹಾರಿ ಪರ ಬಜೆಟ್ : ಬಾಷುಮಿಯಾ ಆರೊಪ

ಈ ಬಜೆಟ್ ಆಂಧ್ರ ಪ್ರದೇಶ್ ಬಿಹಾರಿ ಪರ ಬಜೆಟ್ : ಬಾಷುಮಿಯಾ ಆರೊಪ

ವಡಗೇರಾ : ಕೇಂದ್ರದ ಈ ಬಜೆಟ್ ನ ಆಂಧ್ರ ಪ್ರದೇಶ್ ಮತ್ತು ಬಿಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ದೇಶದಲ್ಲಿಯೇ ತೆರಿಗೆ ಕಟ್ಟುವ ಎರಡನೇ ಸ್ಥಾನದಲ್ಲಿರುವ ನಮ್ಮ ರಾಜ್ಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ರಾಜ್ಯ ಕಾರ್ಯದರ್ಶಿ ಬಾಷುಮಿಯಾ ವಡಗೇರಾ ಆರೋಪಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಕೇಂದ್ರ ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಬಿಹಾರಕ್ಕೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು, ಪಾಟ್ನಾ ಐಐಟಿ ವಿಸ್ತರಣೆಗೆ ಅನುದಾನ ಘೋಷಣೆಯನ್ನು ಮಾಡಿದ್ದಾರೆ.
ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ. ಇದು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣೆಯನ್ನು ಉತ್ತೇಜಿಸುತ್ತದೆ. ಇದರಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಿಜೆಪಿ ತನ್ನ ಎನ್ ಡಿ ಎ ಮೈತ್ರಿ ಪಕ್ಷದ ಮಿತ್ರರಾದ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಂಡಾಯವೇದ್ದು ಬಿಜೆಪಿಗೆ ನೀಡಿದ ಬೆಂಬಲ ಒಂದು ವೇಳೆ ವಾಪಾಸ್ ಪಡೆಯಬಹುದು ಎಂಬ ಭಯದಿಂದ ಈ ಬಜೆಟ್ ನಲ್ಲಿ ಬಹುತೇಕ ಸಿಂಹ ಪಾಲು ಆಂಧ್ರ ಪ್ರದೇಶ್ ಬಿಹಾರಕ್ಕೆ ನೀಡಿ ಸಮಾಧಾನ ಪಡಿಸುವ ಉದ್ದೇಶ ಇವರದಾಗಿದೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ
ಎನ್ನುವ ರೀತಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರ ಪ್ರತಿ ಭಾರಿಯಂತೆ ಈ ಬಾರಿಯು ರಾಜ್ಯದ ಕಾರ್ಮಿಕ, ಯುವ, ರೈತ ಮತ್ತು ಮಹಿಳಾ ಸಮೂಹಕ್ಕೆ ಘನಘೋರ ಅನ್ಯಾಯ ಮಾಡಿದೆ
ಈ ರೀತಿ ಪದೇ ಪದೇ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೋಡಿದರೆ ಮುಂದಿನ ದಿನಗಳಲ್ಲಿ ಈ ಬಿಜೆಪಿ ಅಡಳಿತದಲ್ಲಿ ಕೇಂದ್ರ ಬಜೆಟ್ ಮೇಲಿನ ಜನರ ದೃಷ್ಟಿಕೋನ ಸಂಪೂರ್ಣ ಬದಲಾಗಿ ಬಜೆಟ್ ಮೇಲಿನ ವಿಶ್ವಾಸವೇ ಕಳೆದು ಹೋಗಲಿದೆ ಎಂದಿದ್ದಾರೆ
ಇದರ ಬಗ್ಗೆ ಮುಂದಿನ ದಿನದಲ್ಲಿ ಜನರಿಗೆ ತಿಳಿಸಿ ಕೇಂದ್ರ ಸರಕಾರದ ವಿರುದ್ಧ ದೇಶದ ಪ್ರಗತಿಪರ ಚಿಂತಕರು ಹೋರಾಟಗಾರರು ಬಿದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿಭಾಗದ ರಾಜ್ಯ ಕಾರ್ಯದರ್ಶಿಗಳಾದ ಬಾಷುಮಿಯಾ ವಡಗೇರಾ ಎಚ್ಚರಿಸಿದ್ದಾರೆ

ಜಿಲ್ಲಾ ವರದಿಗಾರರು : ಶಿವು ರಾಠೋಡ

ಹೆಚ್ಚಿನ ಸುದ್ದಿ