Thursday, August 6, 2026
HomeUncategorizedಸಚಿವ ಸ್ಥಾನಕ್ಕಾಗಿ ಪೈಪೋಟಿ: ಕೊನೆಗೂ ಜಿಲ್ಲೆಗೆ ಸಿಕ್ಕಿದ್ದು ಖಾಲಿ ಕೈ …

ಸಚಿವ ಸ್ಥಾನಕ್ಕಾಗಿ ಪೈಪೋಟಿ: ಕೊನೆಗೂ ಜಿಲ್ಲೆಗೆ ಸಿಕ್ಕಿದ್ದು ಖಾಲಿ ಕೈ …

ಉತ್ತರ ಕನ್ನಡ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ನಿರಾಸೆಯಾಗಿದೆ. ಆಡಳಿತಾರೋಡ ಕಾಂಗ್ರೆಸ್ಸಿನ ನಾಲ್ವರು ಶಾಸಕರಿದ್ದರೂ ಜಿಲ್ಲೆಯ ಒಬ್ಬರಿಗೂ ಸಚಿವ ಸ್ಥಾನ ದೊರೆಯದಿರುವುದು ರಾಜಕೀಯ ವಲಯದಲ್ಲಿ ಬಾರೆ ಚರ್ಚೆಗೆ ಕಾರಣವಾಗಿದೆ. ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ಪ್ರತ್ಯೇಕವಾಗಿ ಪ್ರಯತ್ನ ನಡೆಸಿದರು. ಅಂತಿಮವಾಗಿ ಜಿಲ್ಲೆಯ ಪಾಲಿಗೆ ಖಾಲಿ ಕೈ ಉಳಿದಿದೆ.

ಸಚಿವ ಸ್ಥಾನಕ್ಕಾಗಿ ಭಟ್ಕಳ ಶಾಸಕ ಮಂಕಾಳು ವೈದ್ಯ. ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ವಿವಿಧ ಹಂತಗಳಲ್ಲಿ ಲಾಭಿ ನಡೆಸಿದರು. ಎನ್ನಲಾಗಿದೆ. ಶಿರಸಿ ಶಾಸಕ ಭೀಮಣ್ಣ ನಾಯಕ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದರೂ. ಆದರೆ ಅಂತಿಮ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ಶಾಸಕರಿಗೂ ಸ್ಥಾನ ದೊರೆಯಲಿಲ್ಲ.

ಸಚಿವರ ಪಟ್ಟಿ ಆರಂಭಿಕ ಆವೃತ್ತಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಕಾಣಿಸಿಕೊಂಡಿದ್ದರಿಂದ ಭಟ್ಕಳ ಹಾಗೂ ಹೊನ್ನಾವರ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಆದರೆ ಕೆಲವು ಹೊತ್ತಿನಲ್ಲಿ ಪರಿಷ್ಕೃತ ಪಟ್ಟಿಯಲ್ಲಿ ಅವರ ಹೆಸರು ಕೈ ಬಿಡಲಾದ ಹಿನ್ನೆಲೆಯಲ್ಲಿ ಸಂಭ್ರಮ ನಿರಾಸೆಯಾಗಿ ಮಾರ್ಪಟ್ಟಿತು. ಈ ಬೆಳವಣಿಗೆ ಕಾರ್ಯಕರ್ತರಲ್ಲಿ ತ್ರೀವ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಹಲವು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರತಿ ಸರ್ಕಾರದಲ್ಲೂ ಕನಿಷ್ಠ ಒಬ್ಬರಿಗೆ ಸಚಿವ ಸ್ಥಾನ ದೊರೆಯುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಶಾಸಕರು ಸಚಿವ ಹಾಗೂ ವಿಧಾನಸಭಾಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ಆದರೆ ಈ ಬಾರಿ ಆಡಳಿತಾ ಪಕ್ಷದ ನಾಲ್ವರು ಶಾಸಕರಿದ್ದರು ಸಚಿವ ಸಂಪುಟದಲ್ಲಿ ಜಿಲ್ಲೆಯ ಪ್ರತಿನಿಧಿಯ ಇಲ್ಲದಿರುವುದು ವಿಶೇಷವಾಗಿದೆ… ರಾಜಕೀಯ ವಲಯದಲ್ಲಿ ಸಚಿವ ಸ್ಥಾನಕ್ಕಾಗಿ ನಡೆದ ಆಂತರಿಕ ಪೈಪೋಟಿ, ಒಗ್ಗಟ್ಟಿನ ಕೊರತೆ ಹಾಗೂ ಪ್ರತ್ಯೇಕ ಲಾಬಿಯ ಪರಿಣಾಮವೇ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಕಾರಣವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಜಿಲ್ಲೆಯ ಎಲ್ಲಾ ಶಾಸಕರು ಒಗ್ಗಟ್ಟಾಗಿ ಒಬ್ಬರ ಪರವಾಗಿ ನಿಲ್ಲದಿರುವುದು ಹೈಕಮಾಂಡಿಗೆ ತಪ್ಪು ಸಂದೇಶ ರವಾನಿಸಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿ ಜಿಲ್ಲೆಯ ಆಡಳಿತ ಪಕ್ಷದ ನಾಲ್ವರು ಶಾಸಕರಿದ್ದರು ಸಚಿವ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ . ಹಿಂದೆ ಕಡಿಮೆ ಸಂಖ್ಯೆಯ ಶಾಸಕರಿದ್ದಾಗಲೂ ಜಿಲ್ಲೆಗೆ ಪ್ರಾತಿನಿತ್ಯ ಸಿಗುತ್ತಿತ್ತು. ಈ ಬಾರಿ ಒಕ್ಕಟ್ಟಿನ ಕೊರತೆ ಹಾಗೂ ಪ್ರಬಲ ನಾಯಕ ತತ್ವದ ಅಭಾವದಿಂದ ಉತ್ತರ ಕನ್ನಡ ಅವಕಾಶ ಕಳೆದುಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಪುಟ ವಿಸ್ತರಣೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡಕ್ಕೆ ಸಚಿವ ಸ್ಥಾನ ಸಿಗದಿರುವುದು ಜಿಲ್ಲೆಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು . ಮುಂದಿನ ದಿನಗಳಲ್ಲಿ ಹೈಕಮಾಂಡ್ ಜಿಲ್ಲೆಗೆ ಯಾವ ರೀತಿಯ ಪ್ರಾಂತ್ಯ ನಿ ದ್ಯಾ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರದಿ: ಬಿ ಎಸ್ ತೋಟಯ್ಯನವರ

ಹೆಚ್ಚಿನ ಸುದ್ದಿ