ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿ ಸಮೂಹಕ್ಕೆ ಸಂದ ಜಯ: ಮಂಜುನಾಥ್ ಗೌಡ
ಬೆಂಗಳೂರು ಜು.25: ದಪ್ಪ ಚರ್ಮದ ಅಸಮರ್ಥ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ವಿದ್ಯಾರ್ಥಿ ಸಮೂಹಕ್ಕೆ ಸಂದ ಐತಿಹಾಸಿಕ ಜಯ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯಾರ್ಥಿಗಳು ನಿರಂತರ ಮತ್ತು ಇತಿಹಾಸ ಕಂಡು ಕೇಳರಿಯದ ಹೋರಾಟ ನಡೆಸುತ್ತಿದ್ದರೂ ಮೌನತಾಳಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ವಿದ್ಯಾರ್ಥಿಗಳ ಶಕ್ತಿ ಎಂತದ್ದು ಎಂಬುದನ್ನು ಸಾಬೀತುಪಡಿಸಿದೆ. ಅದೇ ಶಕ್ತಿಯಿಂದ ಇತಿಹಾಸ ಕಂಡು ಕೇಳರಿಯದ ಮಹಾ ಮೌನಿ ಪ್ರಧಾನಿಯ ಬಾಯಿ ತೆರೆಸಿತು, ದೇಶದ ಜನರ ಮುಂದೆ ಮಂಡಿಯೂರುವಂತೆ ಮಾಡಿತು. ಆದರೆ, ವಿದ್ಯಾರ್ಥಿಗಳನ್ನೂ ದೇಶದ್ರೋಹಿಗಳು ಎಂದು ನಿಂದಿಸುವ ಕೆಲಸ ನಡೆದಿತ್ತು. ಮುಂದೆಯೂ ನಡೆಯಬಹುದು. ಇದಕ್ಕೆಲ್ಲಾ ವಿದ್ಯಾರ್ಥಿ ಸಮೂಹ ಎದೆಗುಂದಬೇಕಿಲ್ಲ ನಿಮ್ಮ ಬೆಂಬಲಕ್ಕೆ ಯುವ ಕಾಂಗ್ರೆಸ್ ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಅಭಿಯಾನ ನಡೆಸಲಾಯಿತು. ರಾಜ್ಯದಲ್ಲಿ ಆ ಜವಾಬ್ದಾರಿಯನ್ನು ಯುವ ಕಾಂಗ್ರೆಸ್ ಗೆ ವಹಿಸಲಾಗಿತ್ತು. ರಾಜ್ಯ ಮತ್ತು ದೇಶಾದ್ಯಂತ ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಆದರೆ, ಇದರ ನಿಜವಾದ ಕೀರ್ತಿ ದೇಶದ ವಿದ್ಯಾರ್ಥಿ ಸಮೂಹಕ್ಕೆ ಸಲ್ಲಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಧ್ಯಮ ಸಂಪರ್ಕ:
ದೀಪಕ್ ಗೌಡ: 96060 06555
ಪುನೀತ್ ಎ.ಆರ್.: 7349393474
