Wednesday, July 22, 2026
Homeಕ್ರೀಡೆಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆ | 9 ಆಟಗಾರರಿಗೆ 2 ಲಕ್ಷ ರೂಪಾಯಿಗೂ...

ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆ | 9 ಆಟಗಾರರಿಗೆ 2 ಲಕ್ಷ ರೂಪಾಯಿಗೂ ಅಧಿಕ ಮೊತ್ತ ,ಸಾಯ್‌ ಪ್ರಸಾದ್‌, ಗಗನ್‌ಗೌಡಗೆ ಅತ್ಯಧಿಕ ಮೊತ್ತ

ಬೆಂಗಳೂರು,ಜು. 19: ಸಾಯ್‌ ಪ್ರಸಾದ್‌ ಮತ್ತು ಗಗನ್‌ ಗೌಡ ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ಗೆ ನಡೆದ ಹರಾಜಿನಲ್ಲಿಅತ್ಯಧಿಕ ಮೊತ್ತ ಪಡೆದ ಆಟಗಾರರು ಎಂಬ ದಾಖಲೆ ಬರೆದಿದ್ದಾರೆ.


ನಗರದ ಕೋರಮಂಗಲ ಕ್ಲಬ್‌ನಲ್ಲಿಅದ್ಧೂರಿಯಾಗಿ ನಡೆದ ಆಟಗಾರರ ಹರಾಜಿನಲ್ಲಿಎಂಟು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಂಡವು. ಸಾಯ್‌ ಪ್ರಸಾದ್‌ ಮತ್ತು ಗಗನ್‌ ಗೌಡ ಅವರನ್ನು ಪಡೆಯಲು ಎಲ್ಲಾಫ್ರಾಂಚೈಸಿಗಳು ಬಿಡ್‌ ಸಲ್ಲಿಸಿದರೂ ಅಂತಿಮವಾಗಿ ಸಾಯ್‌ ಪ್ರಸಾದ್‌ ಅವರನ್ನು 3.60 ಲಕ್ಷ ರೂಪಾಯಿಗೆ ಉತ್ತರ ಕನ್ನಡ ಸ್ಟಾಲಿಯನ್ಸ್‌ ಖರೀದಿಸಿತು. ಇದು ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿಆಟಗಾರನೊಬ್ಬ ಪಡೆದ ಗರಿಷ್ಠ ಮೊತ್ತ. ಗಗನ್‌ ಗೌಡ ಅವರಿಗೂ ಇದೇ ರೀತಿಯ ಬಿಡ್‌ ಸಲ್ಲಿಕೆಯಾಯಿತು. ಅಂತಿಮವಾಗಿ ಹೊಯ್ಸಳ ಎಂಪೈರ್‌ ತಂಡವು 3.20 ಲಕ್ಷ ರೂ. ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು.


ಶುಶೀಲ್‌ ಕಾಂಬ್ರೇಕರ್‌(2.90 ಲಕ್ಷ ರೂ.), ವಿಶ್ವಾಸ್‌ ಎಸ್‌.(2.60 ಲಕ್ಷ ರೂ.), ವಿನೋದ್‌ ನಾಯಕ್‌(2.20 ಲಕ್ಷ ರೂ.) ಕ್ರಮವಾಗಿ ಮಂಗಳೂರು ಇಂಡಿಯನ್ಸ್‌, ವಿಜಯಪುರ ಲಯನ್ಸ್‌ ಮತ್ತು ಉತ್ತರ ಕನ್ನಡ ಸ್ಟಾಲಿಯನ್ಸ್‌ ತಂಡಗಳ ಪಾಲಾದರು. ಇವರಲ್ಲದೆ, ಮನೋಜ್‌ ಗೌಡ, ಅಭಿಷೇಕ್‌ ಎಸ್‌. ಮಹಮ್ಮದ್‌ ಆಫ್ರೀದ್‌ ಮತ್ತು ಆನಂದ್‌ 2 ಲಕ್ಷ ರೂ.ಗಳಿಗೆ ವಿವಿಧ ಫ್ರಾಂಚೈಸಿಗಳಿಗೆ ಬಿಕರಿಯಾಗುವ ಮೂಲಕ ಗಮನ ಸಳೆದರು. ಆಟಗಾರರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ ನಿಗದಿಪಡಿಸಲಾಗಿದ್ದ ಗರಿಷ್ಠ 10 ಲಕ್ಷ ರೂಪಾಯಿಗಳನ್ನು ಸಮರ್ಥವಾಗಿ ಬಳಸಿಕೊಂಡ ಫ್ರಾಂಚೈಸಿಗಳು ಗರಿಷ್ಠ 14 ಆಟಗಾರರನ್ನು ಖರೀದಿಸುವ ಮೂಲಕ ಮುಂಬರುವ ಚೊಚ್ಚಲ ಕೆಕೆಪಿಎಲ್‌ ಟೂರ್ನಿಗೆ ಸಮರ್ಥ ತಂಡಗಳನ್ನು ಕಟ್ಟಿಕೊಂಡರು.
ಐಪಿಎಲ್‌ ಮತ್ತು ಪ್ರೊ ಕಬಡ್ಡಿ ಲೀಗ್‌ ಮಾದರಿಯಲ್ಲಿಯೇ ನಡೆದ ಹರಾಜಿನಲ್ಲಿಎಲ್ಲಾ8 ಫ್ರಾಂಚೈಸಿಗಳ ಮಾಲೀಕರು, ಕೋಚ್‌ಗಳು ಮತ್ತು ಮಾರ್ಗದರ್ಶಕರು ಪಾಲ್ಗೊಂಡು ಆಟಗಾರರನ್ನು ಖರೀದಿಸಲು ತೀವ್ರ ಉತ್ಸಾಹ ತೋರಿದರು. ಗ್ರಾಮೀಣ ಭಾಗದ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಹಾಗೂ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ5 ಎನ್‌ ಸ್ಪೋರ್ಟ್ಸ್ ಪ್ರವೇಟ್‌ ಲಿಮಿಟೆಡ್‌ ಸಹಯೋಗದೊಂದಿಗೆ ಕರ್ನಾಟಕ ಅಮೆಚೂರ್‌ ಕಬಡ್ಡಿ ಸಂಸ್ಥೆ ಇದೇ ಮೊದಲ ಬಾರಿ ರಾಜ್ಯ ಮಟ್ಟದಲ್ಲಿಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ ಆರಂಭಿಸಲು ಯೋಜಿಸಿದೆ.
ಹರಾಜಿನಲ್ಲಿ ಎ ಮತ್ತು ಬಿ ಎಂಬ ಎರಡು ವಿಭಾಗಗಳನ್ನು ವಿಂಗಡಿಸಲಾಗಿತ್ತು ಎ ವಿಭಾಗದಲ್ಲಿಒಟ್ಟು 35 ಎಲೈಟ್‌ ಆಟಗಾರನ್ನು ಖರೀದಿಸಿದರೆ, ಬಿ ವಿಭಾಗದಿಂದ 70 ಆಟಗಾರರನ್ನು ಖರೀದಿಸಲಾಯಿತು. ಅಬ್ದುಲ್‌ ನಾಸೀರ್‌(1.35 ಲಕ್ಷ ರೂ./ ಮೈಸೂರು), ದೇವನಾಥನ್‌(1.15 ಲಕ್ಷ / ಬೆಂಗಳೂರು), ಶ್ರೀನಿವಾಸ್‌(85 ಸಾವಿರ/ ಉತ್ತರ ಕನ್ನಡ), ಶ್ರೇಯಸ್‌(75 ಸಾವಿರ. ಬೆಂಗಳೂರು) ಮತ್ತು ಚಿದಾನಂದ ಸುರೇಶ್‌(75 ಸಾವಿರ ರೂ./ಬಾಗಲಕೋಟೆ) ಬಿ ವಿಭಾಗದಲ್ಲಿಅತ್ಯಧಿಕ ಮೊತ್ತ ಪಡೆದ ಆಟಗಾರರಾಗಿದ್ದಾರೆ.

ಹರಾಜಿನಲ್ಲಿಅತ್ಯಧಿಕ ಮೊತ್ತ ಗಳಿಸಿದವರು
ಆಟಗಾರ ತಂಡ ಮೊತ್ತ
ಸಾಯ್‌ ಪ್ರಸಾದ್‌ ಉತ್ತರ ಕನ್ನಡ ಸ್ಟಾಲಿಯನ್ಸ್‌ 3.60 ಲಕ್ಷ ರೂ.
ಗಗನ್‌ ಗೌಡ ಹೊಯ್ಸಳ ಎಂಪೈರ್‌ 3.20 ಲಕ್ಷ ರೂ.
ಸುಶೀಲ್‌ ಕಾಂಬ್ರೇಕರ್‌ ಮಂಗಳೂರು ಇಂಡಿಯನ್ಸ್‌ 2.90 ಲಕ್ಷ ರೂ.
ವಿಶ್ವಾಸ್‌ ಎಸ್‌. ವಿಜಯಪುರ ಲಯನ್ಸ್‌ 2.60 ಲಕ್ಷ ರೂ.
ವಿನೋದ್‌ ನಾಯಕ್‌ ಉತ್ತರ ಕನ್ನಡ ಸ್ಟಾಲಿಯನ್ಸ್‌ 2.20 ಲಕ್ಷ ರೂ.
ಮನೋಜ್‌ ಗೌಡ ಬೆಳಗಾವಿ ಬುಲ್ಸ್‌ 2.10 ಲಕ್ಷ ರೂ.
ಅಭಿಷೇಕ್‌ ಎಸ್‌. ಚಾಲುಕ್ಯ ಸೇನೆ 2.00 ಲಕ್ಷ ರೂ.
ಮಹಮ್ಮದ್‌ ಆಫ್ರೀದ್‌ ಮಂಗಳೂರು ಇಂಡಿಯನ್ಸ್‌ 2.00 ಲಕ್ಷ ರೂ.
ಆನಂದ್‌ ವಿ. ಚಾಲುಕ್ಯ ಸೇನೆ 2.00 ಲಕ್ಷ ರೂ.

ಹೆಚ್ಚಿನ ಸುದ್ದಿ