Thursday, July 16, 2026
Homeಕ್ರೀಡೆಪರಿಶಿಷ್ಟ ಜಾತಿಯ 35 ಕ್ರೀಡಾಪಟುಗಳಿಗೆ ₹2.52 ಕೋಟಿ ಮೌಲ್ಯದ ಅತ್ಯಾಧುನಿಕ ಸೈಕಲ್‌ಗಳ ವಿತರಣೆ

ಪರಿಶಿಷ್ಟ ಜಾತಿಯ 35 ಕ್ರೀಡಾಪಟುಗಳಿಗೆ ₹2.52 ಕೋಟಿ ಮೌಲ್ಯದ ಅತ್ಯಾಧುನಿಕ ಸೈಕಲ್‌ಗಳ ವಿತರಣೆ

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ (SCSP), ಕ್ರೀಡಾಪಟುಗಳಿಗೆ ಕ್ರೀಡಾ ಸಾಧನಗಳನ್ನು ಒದಗಿಸುವ ಮೂಲಕ ಕ್ರೀಡಾ ವಲಯದಲ್ಲಿ ಉತ್ತೇಜನ ನೀಡುವ ಮಹತ್ವದ ಕಾರ್ಯಕ್ರಮ ನಡೆಯಿತು.

ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ವಿಜಯಪುರ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ 35 ಮಂದಿ ಪರಿಶಿಷ್ಟ ಜಾತಿಯ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಸೈಕಲ್‌ಗಳನ್ನು ವಿತರಿಸಿದರು.

ಕ್ರೀಡಾ ಪ್ರತಿಭೆಗಳಿಗೆ ಬಲ:
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಕ್ರೀಡಾಪಟುಗಳ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಅವರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಸೈಕಲ್‌ಗಳನ್ನು ವಿತರಿಸಿದೆ.

ಒಟ್ಟು ₹2.52 ಕೋಟಿವೆಚ್ಚದಲ್ಲಿ ಈ ಅತ್ಯಾಧುನಿಕ ಸೈಕಲ್‌ಗಳನ್ನು ಖರೀದಿಸಲಾಗಿದ್ದು, ಇವು ಕ್ರೀಡಾಪಟುಗಳ ಮುಂದಿನ ತರಬೇತಿ ಮತ್ತು ಸಾಧನೆಗೆ ಹೆಚ್ಚಿನ ಬಲ ತುಂಬಲಿವೆ.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ