
ಪತ್ರಿಕಾ ಪ್ರಕಟಣೆಸಾಹಿತಿ ರಮೇಶ್ ಶಂಕರಪ್ಪ ಮಾರನಾಳ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಜುಲೈ 12ರಂದುಕಲಬುರಗಿ, ಜುಲೈ 12: ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಕಲಬುರಗಿ ಹಾಗೂ ನಿಹಾರಿಕಾ ಪಬ್ಲಿಕೇಷನ್ಸ್, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ರಮೇಶ್ ಶಂಕರಪ್ಪ ಮಾರನಾಳ ಅವರ ‘ಭಾವಧಾರೆ’ (ಕವನ ಸಂಕಲನ), ‘ನಾನೊಂದು ಹೆಣ್ಣಾಗಿ’ (ಕಥಾ ಸಂಕಲನ) ಹಾಗೂ ‘ಶ್ರಮದ ಶಿಲ್ಪಿಗಳು’ (ಕವನ ಸಂಕಲನ) ಕೃತಿಗಳ ಲೋಕಾರ್ಪಣೆ ಸಮಾರಂಭ ಜುಲೈ 12, 2026ರಂದು ಸಂಜೆ 4.00 ಗಂಟೆಗೆ ನಗರದ ಕನ್ನಡ ಭವನ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಕಲಬುರಗಿಯಲ್ಲಿ ನೆರವೇರಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರುದ್ರೇಶ್ ಎಸ್., ಮುಖ್ಯಸ್ಥರು, ಅಜೀಮ್ ಪ್ರೇಮ್ಜಿ ಫೌಂಡೇಶನ್, ಕರ್ನಾಟಕ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶ್ರೀ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಕಲಬುರಗಿ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿಗಳಾದ ಶ್ರೀ ಎ. ಕೆ. ರಾಮೇಶ್ವರ ಅವರು ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.ಪ್ರಾಸ್ತಾವಿಕ ನುಡಿಯನ್ನು ಶ್ರೀಮತಿ ರಾಜಶ್ರೀ ನಾಯಕ್, ಪ್ರಾಂಶುಪಾಲರು, ಅಜೀಮ್ ಪ್ರೇಮ್ಜಿ ಶಾಲೆ, ಕಲಬುರಗಿ ಅವರು ಮಂಡಿಸಲಿದ್ದಾರೆ.ಬಿಡುಗಡೆಯಾಗಲಿರುವ ಕೃತಿಗಳ ಕುರಿತು ಹಿರಿಯ ಪತ್ರಕರ್ತರಾದ ಶ್ರೀ ಪ್ರಭಾಕರ್ ಜೋಶಿ, ಹಿರಿಯ ಸಾಹಿತಿಗಳಾದ ಶ್ರೀಮತಿ ಸಂಧ್ಯಾ ಹೊನಗುಂಟಿಕರ್ ಹಾಗೂ ಶ್ರೀ ಗವಿಸಿದ್ದಪ್ಪ ಹೆಚ್. ಪಾಟೀಲ್ ಅವರು ಪರಿಚಯಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀ ನಾನಾಗೌಡ ನಡುವಿನಮನಿ, ಅಧ್ಯಕ್ಷರು, ಬ್ರಿಲಿಯನ್ ಶಿಕ್ಷಣ ಸಂಸ್ಥೆ, ತಾಳಿಕೋಟಿ, ಶ್ರೀ ಗ್ಲಾಡ್ಸನ್ ಇ., ಜಿಲ್ಲಾ ಮುಖ್ಯಸ್ಥರು, ಅಜೀಮ್ ಪ್ರೇಮ್ಜಿ ಫೌಂಡೇಶನ್, ಕಲಬುರಗಿ, ಶ್ರೀ ಬಾಸು ಚವ್ಹಾಣ, ಡಿವೈಎಸ್ಪಿ, ಜೆಸ್ಕಾಂ ಜಾಗೃತ ದಳ, ಕಲಬುರಗಿ, ಶ್ರೀ ಅನಿಲ್ ಎಸ್. ಅಂಗಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬೊಮ್ಮನಹಳ್ಳಿ, ಡಾ. ಬಸವರಾಜ ಚವ್ಹಾಣ, ಜಿಲ್ಲಾಧ್ಯಕ್ಷರು, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ, ವಿಜಯಪುರ, ಶ್ರೀ ಪ್ರಭು ಚೆನ್ನೂರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹೊಸನಳ್ಳಿ ಗ್ರಾಮ, ತಾಳಿಕೋಟೆ ಹಾಗೂ ಶ್ರೀ ರವಿಕುಮಾರ್ ಶಹಪೂರಕರ್, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ. ಶ್ರೀ ರಾಜು ಎಸ್ ರಾಠೋಡ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಮಾರನಾಳ ತಾಂಡ, ಶ್ರೀ ರೇವಣಸಿದ್ದಪ್ಪ ಬುoಯ್ಯರ್ ಅವರು ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಶಿಕ್ಷಕರು, ಶಿಕ್ಷಣತಜ್ಞರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಲೇಖಕರ ಸಾಹಿತ್ಯ ಪಯಣಕ್ಕೆ ಸಾಕ್ಷಿಯಾಗಲಿದ್ದಾರೆ. ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಕಲಬುರಗಿ ಹಾಗೂ ನಿಹಾರಿಕಾ ಪಬ್ಲಿಕೇಷನ್ಸ್, ಕಲಬುರಗಿ ಆಯೋಜಕರು ಮನವಿ ಮಾಡಿದ್ದಾರೆ.
ಜಿಲ್ಲಾ ವರದಿಗಾರರು : ಶಿವು ರಾಠೋಡ
