Monday, July 6, 2026
Homeಜಿಲ್ಲಾ ಸುದ್ದಿಗಳುಕುರಿಹಾಳದಲ್ಲಿ ಸಡಗರದಿಂದ ಜನ್ಮದಿನಾಚರಣೆ ಮತ್ತು 'ಜಲಾಶಯ ಸಂಕಲ್ಪ ಸಮಾಗಮ' ಆಮಂತ್ರಣ ಪತ್ರಿಕೆ ಬಿಡುಗಡೆ

ಕುರಿಹಾಳದಲ್ಲಿ ಸಡಗರದಿಂದ ಜನ್ಮದಿನಾಚರಣೆ ಮತ್ತು ‘ಜಲಾಶಯ ಸಂಕಲ್ಪ ಸಮಾಗಮ’ ಆಮಂತ್ರಣ ಪತ್ರಿಕೆ ಬಿಡುಗಡೆ

ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ಕುರಿಹಾಳ ಗ್ರಾಮದಲ್ಲಿ ಮಾಜಿ ಸಚಿವ ಶ್ರೀ ಕೆ. ಶಿವನಗೌಡ ನಾಯಕ ಅವರ ಜನ್ಮದಿನವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ, ಸಮಗ್ರ ನೀರಾವರಿ ಯೋಜನೆಗಾಗಿ ಮತ್ತು ತಿಂತಣಿ ಬ್ರಿಜ್ ಬಳಿ ಜಲಾಶಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ
‘ಜಲಾಶಯ ಸಂಕಲ್ಪ ಸಮಾಗಮ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗ್ರಾಮದ ಮುಖಂಡರಿಗೆ ನೀಡಿ ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಶೇಖರಗೌಡ ಮಾಗನೂರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಭಾಗವಹಿಸಿದ್ದ ಮುಖಂಡರು ಹಾಗೂ ಗ್ರಾಮಸ್ಥರು ಜಲಾಶಯ ನಿರ್ಮಾಣದ ಕುರಿತಾದ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ನೀರಾವರಿ ಯೋಜನೆಯು ಕ್ಷೇತ್ರದ ರೈತರ ಪಾಲಿಗೆ ವರದಾನವಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷರಾದ ಶ್ರೀ ಬಿ.ಎನ್. ವಿಶ್ವನಾಥನಾಯಕ, ವಿಜಯಕುಮಾರ್ ಮಗದಂಪುರ, ಮಲ್ಲುನಾಯಕ, ಭಗವಂತ ಸಿಂಗ್ ಠಾಕೂರ್, ಶಿವನಗೌಡ ಮಾಲಿ ಪಾಟೀಲ, ರಾಜಪ್ಪಗೌಡ ಪೊಲೀಸ್ ಪಾಟೀಲ, ಬಸವರಾಜಪ್ಪ ಪೂಜಾರಿ, ಹನುಮರೆಡ್ಡಿಗೌಡ ಬುದೂರು, ಅಯ್ಯಪ್ಪಗೌಡ ಬುದೂರು ಸೇರಿದಂತೆ ಗ್ರಾಮದ ಅನೇಕ ಪ್ರಮುಖ ಮುಖಂಡರು, ಗಣ್ಯರು ಹಾಗೂ ಶ್ರೀ ಶಿವನಗೌಡ ನಾಯಕರ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ