ಚನ್ನಮ್ಮನ ಕಿತ್ತೂರು:- ಆರೋಗ್ಯವಂತ ಬದುಕಿಗೆ ಯೋಗವೇ ಉತ್ತಮ ಔಷಧಿಯಾಗಿದ್ದು ಪ್ರತಿಯೊಬ್ಬರು ದಿನ ನಿತ್ಯ ಯೋಗ ಮಾಡುವ ಹವ್ಯಾಸ ಬೆಳೆಸೊಕೊಳ್ಳಬೇಕೆಂದು ಕಿತ್ತೂರಿನ ಗ್ರೇಡ ಒನ್ ತಹಶೀಲ್ದಾರ ಶ್ರೀ ಕಲಗೌಡ ಪಾಟೀಲ ಮನವಿ ಮಾಡಿದರು. ಅವರು ಕಿತ್ತೂರಿನ ಕೋಟೆಯ ಆವರಣದಲ್ಲಿ ಇಂದು ಮುಂಜಾನೆ ತಾಲೂಕಾ ಆಡಳಿತ ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 12 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯ ಮಾತಿನೊಂದಿಗೆ ಮಕ್ಕಳಿಂದ ವೃದ್ಧರಿಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಾಯಕವಾಗಿದೆ ಎಂದು ತಿಳಿಸಿದರು.
ಕ್ಯುರೇಟರ್ ಶ್ರೀ ರಾಘವೇಂದ್ರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ಸಿ.ವಾಯ್.ತುಬಾಕಿ ಪ್ರಾಸ್ತಾವಿಕ ನುಡಿಗಳಲ್ಲಿ ಯೋಗವು ಯೌವನ ಭರಿತ ಬದುಕಿಗೆ ಯಾವ ರೀತಿ ಸಹಾಯಕವಾಗಿದೆ ಎಂಬುದರ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಪಾರ ಜನತೆಗೆ ಕಿತ್ತೂರಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಪ್ರಶಾಂತ ರಾಮನಟ್ಟಿ ಮತ್ತು ಕುಮಾರಿ ಕೃತಿ ರಾಘವೇಂದ್ರ ಯೋಗ ತರಬೇತಿಯನ್ನು ನೀಡಿ ಪ್ರತಿ ಆಸನದ ಮಹತ್ವ ತಿಳಿಸಿದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ವಂದಿಸಿದರು. ಸಿಪಿಐ ಶ್ರೀ ಶಿವಾನಂದ ಗುಡುಗನಟ್ಟಿ, ಪಿ.ಎಸ್.ಐ ಶ್ರೀ ಭರತ ಎಸ್, ಅರಣ್ಯ ಅಧಿಕಾರಿ ಶ್ರೀ ಸಿದ್ದಪ್ಪ ಖೋತ, ತಹಶೀಲದಾರ, ಲೋಕೋಪಯೋಗಿ ಕೃಷಿ, ಶಿಕ್ಷಣ ಮತ್ತು ಟ್ರೆಜರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ,ಮುಖ್ಯ ಶಿಕ್ಷಕರಾದ ಶ್ರೀ ಮಹೇಶ ಚನ್ನಂಗಿ,ಶ್ರೀ ಬಸವರಾಜ ಬಿದರಿ,ಆರ್.ಜಿ.ಎಸ್ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು, ವಸ್ತು ಸಂಗ್ರಹಾಲಯದ ಸಿಬ್ಬಂದಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಇತರರು



” ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ” ಎಂಬ ವಿಶೇಷ ಘೋಷ ವಾಕ್ಯದಡಿ ನಡೆದ ಸಾಮೂಹಿಕ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಇತ್ತೀಚೆಗೆ ಗ್ರೇಡ ಒನ್ ತಹಶೀಲ್ದಾರರಾಗಿ ಬಡ್ತಿ ಹೊಂದಿದ ಶ್ರೀ ಕಲಗೌಡ ಪಾಟೀಲ ಮತ್ತು ಯೋಗ ತರಬೇತಿ ನೀಡಿದ ಶ್ರೀ ಪ್ರಶಾಂತ ರಾಮನಟ್ಟಿ ಇವರುಗಳನ್ನು ಗೌರವಿಸಲಾಯಿತು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ
