Monday, August 10, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡನಾಳೆ ಉಳವಿಯಲ್ಲಿ ಪಂಚಮಸಾಲಿ ಹೋರಾಟಗಳ ಮೀಸಲಾತಿ ಸಂಕಲ್ಪ ಸಭೆ..

ನಾಳೆ ಉಳವಿಯಲ್ಲಿ ಪಂಚಮಸಾಲಿ ಹೋರಾಟಗಳ ಮೀಸಲಾತಿ ಸಂಕಲ್ಪ ಸಭೆ..

ಮುಂಡಗೋಡ : ವೀರಶೈವ ಲಿಂಗಾಯತ ಪಂಚಮಸಾಲಿ ಹಾಗೂ ಒಳಪಂಗಡಗಳಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಕಳೆದ 6 ವರ್ಷಗಳಿಂದ ಹೋರಾಟ ನಡೆದುಕೊಂಡು ಬರುತ್ತದೆ.

ನೀಟ್. ಜೆಇಇ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಉದ್ಯೋಗದ ವಿಷಯದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಮೀಸಲಾತಿ ಕಲ್ಪಿಸಿಕೊಡಿ ಎಂದು ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಮುಂಡಗೋಡ್ ಪರಿವಿಕ್ಷಣ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ. ಪಂಚಮಸಾಲಿ ಲಿಂಗಾಯಿತ ಸಮುದಾಯದ 2ಎ ಮೀಸಲಾತಿ ಕುರಿತು ರೂಪರೇಷ ಸಿದ್ಧಿಪಡಿಸಲು ಉಳವಿಯಲ್ಲಿ ನಡೆಯುವ ಮೀಸಲಾತಿ ಸಂಕಲ್ಪ ಕಾರ್ಯಕ್ರಮ ಕುರಿತು ಮಾತನಾಡಿದರು. ಬರುವ ರವಿವಾರ ಜೂನ್ 14 ಉಳವಿಯಲ್ಲಿ ಪಂಚಮಸಾಲಿ ಹೋರಾಟಗಳ ಕುರಿತು ರೂಪರೇಷ ಸಿದ್ಧಿಪಡಿಸಲು ಸಮಾಜದ ಜನರನ್ನು ಸಂಘಟಿಸಲು. ಹೋರಾಟದ ಕುರಿತು ಜನಾಭಿಪ್ರಾಯಕ್ಕಾಗಿ ಮೀಸಲಾತಿ ಸಂಕಲ್ಪವನ್ನು ನಡೆಸಲಾಗುತ್ತಿದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿಗಳು ತಿಳಿಸಿದರು.

ಪತ್ರಿಕಾಗೋಷ್ಠಿ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ವಿ ಎಸ್ ಪಾಟೀಲ್. ತಾಲೂಕ ಅಧ್ಯಕ್ಷರಾದ ಬಸವರಾಜ್ ವಿ.ಪಾಟೀಲ್ ಸಂಗಪ್ಪ ಕೋಳೂರು . ಬಸಪ್ಪ ಗಲಬಿ ಎಸ್ ಬಿ ಹೂಗಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿಗಾರರು :ಬ‌ಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ