ಧಾರವಾಡ: ಶ್ರೀ. ಸಿದ್ದರಾಮೇಶ್ವರ ಶಿಕ್ಷಣ ಕಾರ್ಯದರ್ಶಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಗಿರಿಜಾ ಹಿರೇಮಠ ಮತ್ತು ಕುಮಾರಯ್ಯ ಹಿರೇಮಠ ದಂಪತಿಯ ಹಿರಿಯ ಪುತ್ರನಾದ ವಚನ ಹಿರೇಮಠ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 97 ಶೇ ಪಡೆದುಕೊಂಡು ಯಶಸ್ಸಿನ ನಗೆ ಬಿರಿದ್ದಾನೆ. ಈತನು ಸರ್ಕಾರಿ ಆದರ್ಶ ಪ್ರೌಢಶಾಲೆಯಲ್ಲಿ ವಿದ್ಯಾಭಾಸ ಮಾಡಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯರು ಶಿಕ್ಷಕರು ಹಾಗೂ ಸ್ನೇಹಿತರು ಶುಭಾಶಯಗಳನ್ನು ಕೋರಿದ್ದಾರೆ. ನಮ್ಮ ಪರಮಪೂಜ್ಯ ಶ್ರೀಗಳ ಆಶೀರ್ವಾದ ಹಾಗೂ ತಂದೆ-ತಾಯಿಗಳ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದೇನೆ ಎಂದು ವಚನ ತಿಳಿಸಿದ್ದಾರೆ.
