
ಬೈಲಹೊಂಗಲ: ನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ದಿನಾಂಕ 04-04-2026 ಶನಿವಾರದಂದು ಹಮ್ಮಿಕೊಂಡಿದ್ದರು ಶ್ರೀ ಹನುಮಾನ ಜನ್ಮೋತ್ಸವವನ್ನು ನಗರದ ವರದಾಂಜನೇಯ ದೇವಸ್ಥಾನ ಉಪ್ಪಿನ ಕೂಟ ಹತ್ತಿರ ಪೂಜೆ ಸಲ್ಲಿಸಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಆಂಜನೇಯ ಜನ್ಮೋತ್ಸವ
ಪ್ರಯುಕ್ತ ಯುವಕರಲ್ಲಿ ಧರ್ಮ ಜಾಗೃತಿಗಾಗಿ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡು ವರದಾಂಜನೇಯ ದೇವಸ್ಥಾನದಿಂದ ಬಜಾರ್ ರೋಡ್ ಮುಖಾಂತರ ಚನ್ನಮ್ಮಾಜಿ ಸಮಾಧಿ ರೋಡ್, ಮಹದೇವ ಸ್ವಾಮೀಜಿ ಮಠದ ಮುಖಾಂತರ ಪುರಸಭೆಯ ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಹತ್ತಿರ ವೀರಾಂಜನೇಯ ದೇವಸ್ಥಾನ, ಹರಳಯ್ಯಕಾಲೋನಿ, ಸೋಮವಾರಪೇಟೆ, ಶಟಗಾರ್ ಚಾಳ ಮಾರುತಿ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಶ್ರೀರಾಮ ಮಂದಿರ ಹಾಗೂ ಗುಡಿ ಓಣಿ ಮಾರುತಿ ದೇವಸ್ಥಾನ ತನಕ ಬೈಕ್ ರ್ಯಾಲಿ ಮಾಡಲಾಯಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ನೀಡಲಾಯಿತು.
ಸಾರ್ವಜನಿಕವಾಗಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು.
ಶ್ರೀ ಆಂಜನೇಯ ಜನ್ಮೋತ್ಸವ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಆಂಜನೇಯ ಭಕ್ತರು ಉಪಸ್ಥಿತರಿದ್ದರು…
ಸಂಪಾದಕರು: ರಾಮಚಂದ್ರಪ್ಪ ಪೂಜೇರ
