Sunday, March 22, 2026
Homeಕ್ರೈಂ ಸುದ್ದಿಗಳು75ರ ಹರೆಯದಲ್ಲೂ ತೀರದ ತೀಟೆ: ಸೊಸೆಯನ್ನೂ ಬಿಡದ 'ಕಾಮೋಸ್ಮಾದಿ' ತಂದೆ; ಮರ್ಯಾದೆಗೆ ಅಂಜಿ ಮಗನೇ ಕೊಟ್ಟ...

75ರ ಹರೆಯದಲ್ಲೂ ತೀರದ ತೀಟೆ: ಸೊಸೆಯನ್ನೂ ಬಿಡದ ‘ಕಾಮೋಸ್ಮಾದಿ’ ತಂದೆ; ಮರ್ಯಾದೆಗೆ ಅಂಜಿ ಮಗನೇ ಕೊಟ್ಟ ಫಿನಿಶಿಂಗ್!

ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ಆ ವೃದ್ಧನ ಕೊಲೆ ಪ್ರಕರಣ ಈಗ ಇಡೀ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದೆ. ಆರಂಭದಲ್ಲಿ ಇದೊಂದು ಆಸ್ತಿಗಾಗಿ ನಡೆದ ಕೊಲೆ ಇರಬಹುದು ಅಂದುಕೊಂಡಿದ್ದ ಪೊಲೀಸರಿಗೆ, ತನಿಖೆ ಆಳಕ್ಕಿಳಿದಂತೆ ಸಿಕ್ಕ ಸತ್ಯಗಳು ಮಾತ್ರ ‘ಕ್ರೈಂ ಸಿನಿಮಾ’ವನ್ನೂ ಮೀರಿಸುವಂತಿವೆ.
😱 ವಯಸ್ಸು ಎಪ್ಪತ್ತೈದು… ಬುದ್ಧಿ ಮಾತ್ರ ಕೆಟ್ಟದ್ದು!
ಕೊಲೆಯಾದವನು ಪಂಪಣ್ಣ ಸಜ್ಜನ ಎಂಬ 74 ವರ್ಷದ ವೃದ್ಧ. ವಯಸ್ಸಾದ ಮೇಲೆ ದೈವ-ಭಕ್ತಿ ಅಂತ ಇರಬೇಕಾದ ಮನುಷ್ಯ, ಕಾಮದ ಅಮಲೇರಿ ಕುಳಿತಿದ್ದ. ಕೈಯಲ್ಲಿ ಕಾಸಿದೆ, ಒಟ್ಟು 48 ಎಕರೆ ಜಮೀನಿದೆ ಅನ್ನೋ ಅಹಂಕಾರದಲ್ಲಿ ಇವನು ಮಾಡಬಾರದ ಕೆಲಸಗಳನ್ನೆಲ್ಲ ಮಾಡ್ತಿದ್ದ. ಊರಲ್ಲಿ ಮೂವರು ಗಂಡು ಮಕ್ಕಳಿದ್ದರೂ, ಅವರ ಜೊತೆ ಇರದೆ ಹೊಲದಲ್ಲೇ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದ.
8 ವರ್ಷಗಳ ಹಿಂದೆ ಹೆಂಡತಿ ತೀರಿಹೋದ ಮೇಲೆ ಇವನ ಅಸಲಿ ಆಟ ಶುರುವಾಗಿತ್ತು. ಎಣ್ಣೆ ಏಟಿನಲ್ಲಿ ತೇಲುತ್ತಿದ್ದ ಈತ, ಹಣದ ಆಮಿಷ ಒಡ್ಡಿ ಸಿಕ್ಕಸಿಕ್ಕ ಹೆಂಗಸರನ್ನ ತನ್ನ ಹೊಲದ ಶೆಡ್‌ಗೆ ಕರಿಸಿಕೊಳ್ಳುತ್ತಿದ್ದ. ಕೇವಲ ಪರಸ್ತ್ರೀಯರಷ್ಟೇ ಅಲ್ಲ, ಜಮೀನಿಗೆ ಕೂಲಿ ಕೆಲಸಕ್ಕೆ ಬರುವ ಮಹಿಳೆಯರಿಗೂ ತೊಂದರೆ ಕೊಡ್ತಿದ್ದ. ಇಷ್ಟಕ್ಕೇ ನಿಲ್ಲದ ಇವನ ಕಾಮದ ಹಸಿವು, ಕೊನೆಗೆ ತನ್ನ ಸ್ವಂತ ಸೊಸೆಯ ಮೇಲೂ ಬಿತ್ತು. ಮಗನ ಹೆಂಡತಿಯನ್ನೇ ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದು ಈ ಪ್ರಕರಣದ ಅತಿ ದೊಡ್ಡ ಟ್ವಿಸ್ಟ್!
📱 ಮೊಬೈಲ್ ಒಳಗೆ ಇತ್ತು ‘ಬಾಂಬ್’!
ಪೊಲೀಸರು ತನಿಖೆ ಆರಂಭಿಸಿದಾಗ ಮೊದಲು ಅನುಮಾನ ಬಂದಿದ್ದು ಆಸ್ತಿ ವಿಚಾರಕ್ಕೆ. ಆದರೆ, ಯಾವಾಗ ಪಂಪಣ್ಣನ ಮೊಬೈಲ್ ಪೊಲೀಸರ ಕೈಗೆ ಸಿಕ್ಕಿತೋ, ಇಡೀ ಪ್ರಕರಣದ ದಿಕ್ಕೇ ಬದಲಾಯಿತು.
ಅಶ್ಲೀಲ ಫೋಟೋಗಳ ರಾಶಿ: ಮೊಬೈಲ್ ತುಂಬಾ ಬೇರೆ ಬೇರೆ ಮಹಿಳೆಯರ ಜೊತೆಗಿನ ಅಶ್ಲೀಲ ಫೋಟೋಗಳಿದ್ದವು.
ಆಸ್ತಿ ದರ್ಬಾರ್: ಮಕ್ಕಳಿಗೆ ತಲಾ 4 ಎಕರೆ ಹಂಚಿ, ಬಾಕಿ 36 ಎಕರೆಯನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಆ 36 ಎಕರೆಯಿಂದ ಬರುವ ಆದಾಯವನ್ನೆಲ್ಲ ಇವನು ಇಂಥದ್ದೇ ‘ಶೋಕಿ’ಗಳಿಗೆ ಖರ್ಚು ಮಾಡುತ್ತಿದ್ದ.
💰 ಮರ್ಯಾದೆ ಉಳಿಸಿಕೊಳ್ಳಲು ‘2 ಲಕ್ಷ’ ಸುಪಾರಿ!
ತನ್ನ ಹೆಂಡತಿಯ ಜೊತೆ ತಂದೆಯೇ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನುವ ಕಹಿ ಸತ್ಯ ಮಗ ನರಸರೆಡ್ಡಿಗೆ ಗೊತ್ತಾದಾಗ ಆತ ರೊಚ್ಚಿಗೆದ್ದಿದ್ದಾನೆ. “ಇವನು ಹೀಗೆ ಇದ್ದರೆ ಊರಲ್ಲಿ ತಲೆ ಎತ್ತಿ ಓಡಾಡಲು ಆಗಲ್ಲ, ವಂಶದ ಮರ್ಯಾದೆ ಮಣ್ಣು ಪಾಲಾಗುತ್ತದೆ” ಎಂದು ನಿರ್ಧರಿಸಿ, ತನ್ನ ತಂದೆಯನ್ನೇ ಮುಗಿಸಲು ಪ್ಲ್ಯಾನ್ ಮಾಡಿದ.
ತಿರುಪತಿ ಮೂಲದ ನಾಲ್ವರು ಹಂತಕರಾದ ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಣ ಎಂಬುವವರಿಗೆ 2 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದ. ಅದರಂತೆ ಮಾರ್ಚ್ 12ರ ಕತ್ತಲಲ್ಲಿ ಈ ಕಿರಾತಕರು ಪಂಪಣ್ಣನ ಕಥೆ ಮುಗಿಸಿದ್ದಾರೆ. ವಿಶೇಷ ಅಂದ್ರೆ, ಕೊಲೆ ಮಾಡಿಸಿ ಮರುದಿನ ಮಗನೇ ಪೊಲೀಸ್ ಠಾಣೆಗೆ ಹೋಗಿ “ನನ್ನ ತಂದೆಯನ್ನು ಯಾರೋ ಕೊಂದಿದ್ದಾರೆ” ಅಂತ ಕಣ್ಣೀರು ಹಾಕಿ ದೂರು ನೀಡಿದ್ದ!
⛓️ ಪೊಲೀಸರ ಬಲೆಗೆ ಬಿದ್ದ ‘ಮಗ’ ಮತ್ತು ಗ್ಯಾಂಗ್
ವಡಗೇರಾ ಪೊಲೀಸರು ಸತತ 4 ದಿನಗಳ ಕಾಲ ತನಿಖೆ ನಡೆಸಿ, ಕೊನೆಗೂ ಹಂತಕರನ್ನು ಅರೆಸ್ಟ್ ಮಾಡಿದ್ದಾರೆ. ಹಂತಕರನ್ನು ವಿಚಾರಿಸಿದಾಗ ಮಗನೇ ಸುಪಾರಿ ಕೊಟ್ಟಿರುವ ವಿಷಯ ಬಯಲಾಗಿದೆ. ವಯಸ್ಸಾದ ಮೇಲೆ ಬುದ್ಧಿ ಕಲಿಯಬೇಕಾದ ತಂದೆ ಕಾಮದ ದಾರಿಯಲ್ಲಿ ಹೋಗಿ ಬಲಿಯಾದರೆ, ಮರ್ಯಾದೆಗೆ ಹೆದರಿದ ಮಗ ಈಗ ಜೈಲು ಪಾಲಾಗಿದ್ದಾನೆ.

ಹೆಚ್ಚಿನ ಸುದ್ದಿ