ಬೆಂಗಳೂರು: ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರು ಹನುಮಂತನಗರ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಶಿವರಾತ್ರಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಮತ್ತು ಶಿಷ್ಯವೃಂದದವರಿಂದ ಶ್ರೀ ಮಂಜುನಾಥ ಚರಿತೆ ನೃತ್ಯ ರೂಪಕ, ಭರತನಾಟ್ಯ ಸಂಗೀತ ಪ್ರದರ್ಶನ ನಡೆಯಿತು. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ನೃತ್ಯ ಕಲಾವಿದರನ್ನು ಸನ್ಮಾನಿಸಿದರು.
ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಡಿ ರಾತ್ರಿ ಭಕ್ತಾದಿಗಳು ಹರ ಹರ ಮಹಾದೇವ ಎಂದು ಜಪ ಮಾಡುತ್ತ ಜಾಗರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಐಬಿಎಂ ಫ್ಯಾಮಿಲಿ ಎಂಬ ಸ್ನೇಹಕ್ಕೂಟದಿಂದ ಭಕ್ತಾದಿಗಳಿಗೆ ಮೂರು ಸಾವಿರಕ್ಕೂ ಹೆಚ್ಚು ಕಾಫಿ ಬಿಸ್ಕೆಟ್ ವಿತರಿಸಿದರು
