Thursday, February 12, 2026
Homeಟಾಪ್ ನ್ಯೂಸ್ಕೋಲಿ-ಕಬ್ಬಲಿಗ-ಬೆಸ್ತರ್ ಎಸ್.ಟಿ. ಪಟ್ಟಿಯಲ್ಲಿ ಸೇರಿಸುವ ಕುರಿತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕರ...

ಕೋಲಿ-ಕಬ್ಬಲಿಗ-ಬೆಸ್ತರ್ ಎಸ್.ಟಿ. ಪಟ್ಟಿಯಲ್ಲಿ ಸೇರಿಸುವ ಕುರಿತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕರ ಜೊತೆ ಸಭೆ…

ಮೈಸೂರು: ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಅವರು ಕೋಲಿ-ಕಬ್ಬಲಿಗ-ಬೆಸ್ತರ್ ಎಸ್.ಟಿ. ಪಟ್ಟಿಯಲ್ಲಿ ಸೇರಿಸುವ ಕುರಿತು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕರಾದ ಶ್ರೀಮತಿ ಗಿರಿಜಾಂಬ ಹೆಚ್.ಎಸ್, ಡಾ. ಮಂಜುನಾಥ, ರಿಸರ್ಚ್ ಇನ್ವೆಸ್ಟಿಗೆಟರ್, ಶ್ರೀ ನಾಗರತ್ನ ಎಂ.ವಿ. ವ್ಯವಸ್ಥಾಪಕರು ಅವರೊಂದಿಗೆ ಸಭೆ ನಡೆಸಿದರು*.

1996 ರಲ್ಲಿ ವಿಠ್ಠಲ ಹೇರೂರರವರು ಕಲಬುರ್ಗಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಮಾಡಿದ ಹೋರಾಟದ ಫಲವಾಗಿ ಕೋಲಿ-ಕಬ್ಬಲಿಗ ಸಮಾಜವನ್ನು ST ಪಟ್ಟಿಯಲ್ಲಿ ಸೇರಿಸುವ ಫೈಲ್ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಯಿತು. ಸರಿಯಾದ ದಾಖಲೆಗಳು ಇಲ್ಲದೆ ಕಾರಣ 29 ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಫೈಲ್ ಓಡಾಟ ಆಗಿದೆ. ಗಂಗಾಮತ ಮತ್ತು ಅದರ ಪರ್ಯಾಯ ಪದಗಳ ಫೈಲ್ RGI ಅವರಿಂದ ದಿ:30-10-2023 ರಂದು ರಾಜ್ಯ ಸರ್ಕಾರಕ್ಕೆ ವಾಪಸ್ ಬಂದಿದೆ. 1956 ರಲ್ಲಿಯೇ ಕೋಲಿ, ಕಬ್ಬಲಿಗ ಮತ್ತು ಇದರ ಪರ್ಯಾಯ ಪದಗಳಾದ ಟೋಕ್ರೆ ಕೋಲಿ, ಕೋಲಿ ಡೋರ್, ಕೋಯಾ ಪದಗಳು ST ಪಟ್ಟಿಯಲ್ಲಿ ಕೇಂದ್ರ ಸರ್ಕಾರ ‌ಸೇರಿಸಿತ್ತು. ಅದು 1976 ರಲ್ಲಿ ST ಪಟ್ಟಿ ಪರಿಷ್ಕರಣೆ ಮಾಡಿದಾಗಲೂ ಮುಂದುವರೆಯಿತು.

ವಿಧಾನ ಪರಿಷತ್ ಸದಸ್ಯರು ಬ್ರಿಟಿಷರ ಕಾಲದ 103 ರಿಪೋರ್ಟ್‌ಗಳ ದಾಖಲೆಗಳನ್ನು ಸಂಗ್ರಹಿಸಿದ್ದನ್ನು ಮತ್ತು ಕೋಲಿ-ಕಬ್ಬಲಿಗ-ಬೆಸ್ತರ್ ಪರ್ಯಾಯ ಪದಗಳಿಗೆ ಬುಡಕಟ್ಟು ಗುಣ ಲಕ್ಷಣ ಉಲ್ಲೇಖ ಇರುವ ಕುರಿತು ಚರ್ಚಿಸಿದರು


ಹಾಗೂ ತಾವು ಸಿದ್ಧಪಡಿಸಿದ 230 ಪುಟಗಳ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಬ್ರಿಟಿಷರ ಕಾಲದ 103 ರಿಪೋರ್ಟ್‌ಗಳ 1100 ಪುಟಗಳ (4 ಸಂಪುಟಗಳು) ದಾಖಲೆಗಳನ್ನು ಉಪ ನಿರ್ದೇಶಕರಿಗೆ ನೀಡಿದರು. ಈ ಸಭೆಯಲ್ಲಿ ಕೋಲಿ-ಕಬ್ಬಲಿಗ-ಬೆಸ್ತರ್ ಪರ್ಯಾಯ ಪದಗಳನ್ನು ಟೋಕ್ರೆ ಕೋಲಿ, ಕೋಲಿ ಡೋರ್, ಕೋಯಾ ಪದಗಳ ಬಿಟ್ಟು ಹೋದ ಪರ್ಯಾಯ ಪದಗಳು ಎಂದು ST ಫೈಲ್ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಬಗ್ಗೆ ಬುಡಕಟ್ಟು ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಸಭೆಯ ಚಿತ್ರಗಳು

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ