ಮುಂಡಗೋಡ:
ಮುಂಡಗೋಡ ನಗರದ ಅಧಿದೇವತೆಯಾದ ಶ್ರೀ ದ್ಯಾಮವ್ವ ದೇವಿಯ ರಥೋತ್ಸವ ಹಾಗೂ ನಗರದ ಹಳೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಾರಿಕಾಂಬ ದೇವಿಯ ರಥೋತ್ಸವ ಶ್ರದ್ಧಾ-ಭಕ್ತಿಯಿಂದ, ಸಂಭ್ರಮ-ಸಡಗರದಿಂದ ಜರುಗಿತು. ದೇವಿಯ ನಾಮಸ್ಮರಣೆ, ಜಯಘೋಷಣೆಗಳೊಂದಿಗೆ ನಡೆದ ರಥೋತ್ಸವದಲ್ಲಿ ಎಲ್ಲ ಸಮುದಾಯಗಳ ಭಕ್ತರು ಉತ್ಸಾಹದಿಂದ ಭಾಗವಹಿಸಿದರು.
ರಥೋತ್ಸವದ ವೇಳೆ “ಅಮ್ಮನವರೇ ಕಾಪಾಡು”, “ಜೈ ದ್ಯಾಮವ್ವ”, “ಜೈ ಮಾರಿಕಾಂಬ” ಎಂಬ ಘೋಷಣೆಗಳು ಮೊಳಗಿದವು. ದೇವಿಯ ದರ್ಶನ ಪಡೆದ ಭಕ್ತರು ತಮ್ಮ ಕುಟುಂಬಕ್ಕೆ ಸುಖ-ಶಾಂತಿ, ಆರೋಗ್ಯ-ಆಯುಷ್ಯ, ನೆಮ್ಮದಿ ಹಾಗೂ ಸಹೋದರತ್ವ-ಪ್ರೀತಿ-ಮಮತೆಯ ಜೀವನ ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.
ರಥೋತ್ಸವದ ಪ್ರಯುಕ್ತ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಹೂವು-ತೋರಣಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳ, ಭಜನೆ, ಪೂಜೆ-ಪುನಸ್ಕಾರಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ವಿಶೇಷ ಕಳೆ ತುಂಬಿತ್ತು.
ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕಿನ ಪ್ರಮುಖ ಗಣ್ಯರು, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಮಿಟಿಗಳ ಪದಾಧಿಕಾರಿಗಳು, ಸಾರ್ವಜನಿಕರು ರಥವನ್ನು ಎಳೆಯುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಭವ್ಯ ಚಾಲನೆ ನೀಡಿದರು. ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಮುಂಡಗೋಡ ನಗರ ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.
ವರದಿ: ಸೋಮಶೇಖರ ಲಮಾಣಿ
