Monday, February 9, 2026
Homeಜಿಲ್ಲಾ ಸುದ್ದಿಗಳು'ನೀರು ಹಿತ-ಮಿತವಾಗಿ ಬಳಸುವುದು ಮುಖ್ಯ'

‘ನೀರು ಹಿತ-ಮಿತವಾಗಿ ಬಳಸುವುದು ಮುಖ್ಯ’

ಯಂಕಂಚಿ: ‘ನೀರನ್ನು ಹಿತವಾಗಿ ಮತ್ತು ಮಿತವಾಗಿ ಬಳಸುವ ಮೂಲಕ ಎಲ್ಲ ರೈತರಿಗೂ ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದು ಮುಖ್ಯ’ ಎಂದು ಕೃಷ್ಣಾ ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ ಹೇಳಿದರು. ಯಂಕಂಚಿ ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಂದಿನ ದಿನಗಳಲ್ಲಿ ನೀರಿನ ಕ್ರಾಂತಿಯಾಗಬಹುದು. ಆದ್ದರಿಂದ ಸಂಘದ ಕಾರ್ಯದರ್ಶಿಗಳು ಯೋಧರ ರೀತಿಯಲ್ಲಿ ನೀರನ್ನು ಸಮರ್ಪಕವಾಗಿ ತಲುಪಿಸಲು ಹಾಗೂ ಜಾಗೃತಿ ಮೂಡಿಸಲು ಮುಂದಾಗಬೇಕು’ ಎಂದರು, ನೀರು ಬಳಕೆದಾರರ ಸಂಘದ ಯಂಕಂಚಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರತಿನಿಧಿ ಎನ್ ಎಮ್ ನದಾಫ್ ಮಾತನಾಡಿ, ‘ಸಹಕಾರ ಸಂಘಗಳು ರೈತ ಸ್ನೇಹಿಯಾಗಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘಗಳ ಉತ್ತೇಜನ ನೀಡಬೇಕು’ ಎಂದರು. ಸಹಕಾರ ಸಂಘಗಳ ಮುಖ್ಯ ಕಾರ್ಯ-ನಿರ್ವಹಣಾಧಿಕಾರಿ ಭೀಮಣ್ಣ ತಳಗೇರ, ರೈತರ ಸಮಸ್ಯೆಗಳ ಕುರಿತು ಮಾತನಾಡಿದರು.

ಭೂ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ, ಭೀಮನಗೌಡ ಪಾಟೀಲ ಗುಳಬಾಳ, ಸಿದ್ದನಗೌಡ ಪಾಟೀಲ, ತರಬೇತಿದಾರ అబ్దుಲ್ ರಹಿಂ, ಬಲ ಭೀಮ ನಾಯಕ್ , ಎನ್ ಎಮ್ ನದಾಫ್ ಇದ್ದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಂಗಣ್ಣ ಗೌಡಗೇರ್ ಸ್ವಾಗತಿಸಿ, ನಿರೂಪಿಸಿದರು.

ಹೆಚ್ಚಿನ ಸುದ್ದಿ