Tuesday, February 10, 2026
HomeUncategorizedಕೊಡೇಕಲ್.| ಇಸ್ಪೀಟ್ (ಜೂಜಟ್) ಎರಡು ಕಡೆ ದಾಳಿ 86,960ರೂ. ಪೊಲೀಸ್ ವಶಕ್ಕೆ:...

ಕೊಡೇಕಲ್.| ಇಸ್ಪೀಟ್ (ಜೂಜಟ್) ಎರಡು ಕಡೆ ದಾಳಿ 86,960ರೂ. ಪೊಲೀಸ್ ವಶಕ್ಕೆ: 22 ಮಂದಿ ವಿರುದ್ಧ ಪ್ರಕರಣ.

ಹುಣಸಗಿ : ತಾಲೂಕಿನ ಕೊಡೇಕಲ್ ಗ್ರಾಮದ ಇಸ್ಪೀಟ್ ಆಟ ಆಡುತ್ತಿರುವ ಮಾಹಿತಿ ಪಡೆದ ಅಯ್ಯಪ್ಪ ಪಿ.ಎಸ್.ಐ. ದಾಳಿ.

ಯಾದಗಿರಿ ಜಿಲ್ಲೆಯ ಎಸ್.ಪಿ. ಪೃಥ್ವಿಕ್ ಶಂಕರ್ , ಡಿ.ಎಸ್.ಪಿ ಜಾವೀದ್ ಇನಾಮ್ದಾರ್ ರವರ ಹಾಗೂ ರವಿಕುಮಾರ ಎಸ್.ಎನ್ ಸಿಪಿಐ ಹುಣಸಗಿ ಮಾರ್ಗದರ್ಶನದ ಮೆರೆಗೆ ಅಯ್ಯಪ್ಪ ಪಿ.ಎಸ್.ಐ. ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಕೊಡೇಕಲ್ ಗ್ರಾಮದ ನಿಜಲಿಂಗಪ್ಪ ಗುಡಿ ಹತ್ತಿರ,13 ಜನ ಹಾಗೆ ಸ್ಥಳದಿಂದ ಒಟ್ಟು ನಗದು ಹಣ 58800/- ರೂ. ಮತ್ತು ಕೊಡೇಕಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ 09 ಜನ ಸ್ಥಳದಿಂದ ಒಟ್ಟು ನಗದು ಹಣ 28160/-ರೂ, ಜಪ್ತಿ . ಒಟ್ಟಾರೆಯಾಗಿ 86,960 ಹಣ ಮತ್ತು 22ಜನ ಇಸ್ಪೇಟ್ ಆಡುತ್ತಿರುವರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ನಂ.64 ಹಾಗೂ 65/2025 ಕಲಂ.87 ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ .

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

ಹೆಚ್ಚಿನ ಸುದ್ದಿ