Thursday, April 23, 2026
Homeಧಾರ್ಮಿಕಹುಮ್ನಾಬಾದ್ ಟೋಕರೆ ಕೋಳಿ ಸಮಾಜದ ನೂತನ ಪದಾಧಿಕಾರಿಗಳಿಗೆ ಶ್ರೀ ರತ್ನಕಾಂತ್ ಶಿವಯೋಗಿಗಳಿಂದ ಸನ್ಮಾನ ಹಾಗೂ ಆಶೀರ್ವಾದ

ಹುಮ್ನಾಬಾದ್ ಟೋಕರೆ ಕೋಳಿ ಸಮಾಜದ ನೂತನ ಪದಾಧಿಕಾರಿಗಳಿಗೆ ಶ್ರೀ ರತ್ನಕಾಂತ್ ಶಿವಯೋಗಿಗಳಿಂದ ಸನ್ಮಾನ ಹಾಗೂ ಆಶೀರ್ವಾದ

ಹುಮ್ನಾಬಾದ್:z: ಇಲ್ಲಿನ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದಲ್ಲಿ ಶ್ರೀ ರತ್ನಕಾಂತ್ ಶಿವಯೋಗಿಗಳು ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ಅಖಿಲ ಭಾರತೀಯ ಟೋಕರೆ ಕೋಳಿ ಸಮಾಜದ ಹುಮ್ನಾಬಾದ್ ತಾಲೂಕಿನ ಎಲ್ಲಾ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ರತ್ನಕಾಂತ್ ಶಿವಯೋಗಿಗಳು ನೂತನ ಪದಾಧಿಕಾರಿಗಳಿಗೆ ಆಶೀರ್ವದಿಸಿ, ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವಂತೆ ಹಿತನುಡಿಗಳನ್ನು ನುಡಿದರು. ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವುದು ಹೆಮ್ಮೆಯ ವಿಷಯ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಈ ಶುಭ ಸಂದರ್ಭದಲ್ಲಿ ಚನ್ನವೀರ್ ಜಮಾದಾರ್ ಅಣ್ಣಾಜಿ, ತುಕಾರಾಮ್ ಅಣ್ಣಾಜಿ ಹಾಗೂ ಬಸವಕಲ್ಯಾಣ ತಾಲೂಕಿನ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷರಾದ ನಾಗನಾಥ್ ಅಣ್ಣಾಜಿ ಅವರು ಉಪಸ್ಥಿತರಿದ್ದರು.
ತಾಲೂಕಿನ ನೂತನ ಪದಾಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ, ಪ್ರೋತ್ಸಾಹಿಸಿದ ಶ್ರೀ ರತ್ನಕಾಂತ್ ಶಿವಯೋಗಿಗಳು ಹಾಗೂ ಇತರ ಗಣ್ಯರಿಗೆ ಪದಾಧಿಕಾರಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಹೆಚ್ಚಿನ ಸುದ್ದಿ