Saturday, June 27, 2026
Homeಉದ್ಯೋಗಸ್ವಾವಲಂಬಿ ಸಾರಥಿ ಯೋಜನೆ: ವಾಣಿಜ್ಯ ವಾಹನ ಖರೀದಿಗೆ ಸಿಗಲಿದೆ 75% ಸಹಾಯಧನ! ಯಾರೆಲ್ಲಾ ಅರ್ಹರು? ಅರ್ಜಿ...

ಸ್ವಾವಲಂಬಿ ಸಾರಥಿ ಯೋಜನೆ: ವಾಣಿಜ್ಯ ವಾಹನ ಖರೀದಿಗೆ ಸಿಗಲಿದೆ 75% ಸಹಾಯಧನ! ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ಹಿಂದುಳಿದ ಸಮುದಾಯದ ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೊಳಿಸಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಸಮುದಾಯದ ನಿರುದ್ಯೋಗಿ ಯುವಕ/ಯುವತಿಯರಿಗೆ ವಾಣಿಜ್ಯ ಉದ್ದೇಶಕ್ಕಾಗಿ ವಾಹನಗಳನ್ನು ಖರಿಸಲು ಹಾಗೂ ಹೊಸ ಉದ್ಯಮವನ್ನು ಸ್ಥಾಪಿಸಲು ಸಬ್ಸಿಡಿ ದರದಲ್ಲಿ ಗರಿಷ್ಠ 4 ಲಕ್ಷ ರೂ. ವರೆಗೂ ಸಾಲ ಸೌಲಭ್ಯ ದೊರೆಯಲಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಸಮುದಾಯದ ಅಭಿವೃದ್ಧಿ ನಿಗಮ ಮೂಲಕ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ.

ಸೂಚ್ಯಂಕ
ಏನಿದು ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆ?
ಸ್ವಾವಲಂಬಿ ಸಾರಥಿ ಯೋಜನೆಯ ಮಾರ್ಗಸೂಚಿಗಳು
ಫಲಾನುಭವಿಗಳಿಗೆ ಅರ್ಹತಾ ಮಾನದಂಡಗಳು
ಸ್ವಾವಲಂಬಿ ಸಾರಥಿ ಯೋಜನೆಯ ಸಬ್ಸಿಡಿ ವಿವರ
ಯೋಜನೆಯಡಿ ದೊರೆಯುವ ಸಬ್ಸಿಡಿ ವಿವರಗಳು ಇಂತಿವೆ
ಅರ್ಜಿ ಸಲ್ಲಿಸುವುದು ಹೇಗೆ?
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಯೋಜನೆಯಡಿ ಏನೆಲ್ಲಾ ಸೌಲಭ್ಯ ಲಭ್ಯ?
ಸಾಲ ಮಂಜೂರಾತಿಯ ವಿಧಾನ:
ಸಾಲ ವಿತರಣೆ ಮತ್ತು ಘಟಕ ತಪಾಸಣೆ:
ಸಾಲದ ಮರುಪಾವತಿ ವಿಧಾನ
ಸ್ವಾವಲಂಬಿ ಸಾರಥಿ ಯೋಜನೆಯ ಗುಣಲಕ್ಷಣಗಳು
ಪ್ರಶ್ನೋತ್ತರಗಳು

ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಸೌಲಭ್ಯ ಪಡೆಯತಕ್ಕದ್ದು.
ಈ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದು.
ಈ ಯೋಜನೆಯಲ್ಲಿ ಮಂಗಳಮುಖಿಯರಿಗೂ ಸಹ ಆದ್ಯತೆ ನೀಡುವುದು.
ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು.

ಸ್ವಾವಲಂಬಿ ಸಾರಥಿ ಯೋಜನೆ
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿದಾರರು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸತಕ್ಕದ್ದು.
ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ಸೇರಿರಬೇಕು ಹಾಗೂ ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರು/ಕಂದಾಯ ಅಧಿಕಾರಿಗಳಿಂದ ನಿಗಧಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಗಳು ನೀಡಿದ ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ.
ಲಘು ವಾಹನ ಚಾಲನಾ ಪರವಾನಗಿಯ ದೃಢೀಕೃತ ಪ್ರತಿ.
ಅರ್ಜಿದಾರರ ಪಾಸ್‌ ಪೋರ್ಟ್‌ ಅಳತೆಯ ಇತ್ತೀಚಿನ ಭಾವಚಿತ್ರ.
ಅರ್ಜಿದಾರರು ನಿರುದ್ಯೋಗಿ ಆಗಿರಬೇಕು. (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).
ಯೋಜನೆಯಡಿ ಏನೆಲ್ಲಾ ಸೌಲಭ್ಯ ಲಭ್ಯ?
ಸಹಾಯಧನ: ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಲ್ಲಿ ಸ್ವ-ಉದ್ಯೋಗವನ್ನು ಉತ್ತೇಜಿಸಲು ಸರಕು ಸಾಗಾಣಿಕೆ ವಾಹನ ಖರೀದಿ ಉದ್ದೇಶದ ಜೊತೆಗೆ ಸಾರಿಗೆ ವಾಹನ, ಟ್ರ್ಯಾಕ್ಟ್‌ರ್ ಹಾಗೂ ಇತರೆ ವ್ಯಾಪಾರ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ಶೇ.70 ರಷ್ಟು ಅಥವಾ ಗರಿಷ್ಠ ರೂ.4.00 ಲಕ್ಷಗಳ ಸಹಾಯಧನವಾಗಿದ್ದು, ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ರಿಯಾಯಿತಿ: ಸಹಾಯದ ಗರಿಷ್ಠ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ. ಗರಿಷ್ಠ ರೂ.3.50 ಲಕ್ಷಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್‌ಗಳು ಮಂಜೂರು ಮಾಡುತ್ತವೆ.
ಮೀಸಲಾತಿ: ಈ ಯೋಜನೆಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರವರ್ಗ-1 ಮತ್ತು 2ಎ ಗೆ ಶೇ.85 ರಷ್ಟು ಪ್ರವರ್ಗ-3ಎ ಮತ್ತು 3ಬಿ ಗೆ ಶೇ.15ರಷ್ಟು ಮೀಸಲಾತಿ ನಿಗದಿಪಡಿಸಿದೆ. ಇನ್ನುಳಿದನಿಗಮಗಳಲ್ಲಿ ಆಯಾ ನಿಗಮದ ವ್ಯಾಪ್ತಿಗೆ ಬರುವ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡತಕ್ಕದ್ದು.

ಸಾಲ ಮಂಜೂರಾತಿಯ ವಿಧಾನ:

ನಿಗಮಗಳಿಂದ ಈ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿದಾರರಿಂದ ಸೇವಾ ಸಿಂಧು ಪೋರ್ಟಲ್‌ ಮುಖಾಂತರ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗುತ್ತದೆ. ಜಿಲ್ಲಾ ವ್ಯವಸ್ಥಾಪಕರು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಮಾನ್ಯ ಶಾಸಕರು/ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇವರುಗಳ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯ ಮುಂದೆ ಮಂಡಿಸಿ, ಆಯಾ ಜಿಲ್ಲೆಗೆ/ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಗುರಿಯಂತೆ ಆಯ್ಕೆ ಸಮಿತಿಯ ಮೂಲಕ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ವಾಹನ ಖರೀದಿಸುವ ದರಪಟ್ಟಿಯೊಂದಿಗೆ ಸಾಲ ಮಂಜೂರಾತಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.

ಸದರಿ ಬ್ಯಾಂಕ್‌ ಶಾಖೆಯವರು ಈ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರಾತಿಗೆ ಪರಿಗಣಿಸಿ ಸಾಲ ಮಂಜೂರು ಮಾಡಿ, ನಿಗಮಗಳಿಂದ ಸಹಾಯಧನ ಬಿಡುಗಡೆಗೆ ಕೋರಿರುವ ಪ್ರಸ್ತಾವನೆಗಳನ್ನು ಮಂಜೂರಾತಿ ಪತ್ರ/ಕ್ಲೈಮ್‌ ಪತ್ರದೊಂದಿಗೆ ಆನ್‌ ಲೈನ್‌ ನಲ್ಲಿ ಜಿಲ್ಲಾ ವ್ಯವಸ್ಥಾಪಕರಿಗೆ ಕಳುಹಿಸುತ್ತಾರೆ.

ಸಾಲ ವಿತರಣೆ ಮತ್ತು ಘಟಕ ತಪಾಸಣೆ:

ಜಿಲ್ಲಾ ವ್ಯವಸ್ಥಾಪಕರು ಆನ್‌ ಲೈನ್‌ ನಲ್ಲಿ ಸ್ವೀಕರಿಸಿರುವ ದಾಖಲೆಗಳನ್ನು ವಿಸ್ವಾಸ್‌ ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಿ L-1, L-2, L-3 ಆದ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸುವುದು. ಕೇಂದ್ರ ಕಛೇರಿಯಲ್ಲಿ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಿದ ಬ್ಯಾಂಕ್‌ ಶಾಖೆಗೆ ಫಲಾನುಭವಿಯು ವಾಹನ ಖರೀದಿಸಿದ ಬಗ್ಗೆ ಆರ್.ಸಿ.ಪುಸ್ತಕ, ಟ್ಯಾಕ್ಸ್‌ ಪಾವತಿ ರಸೀದಿ/ವಿಮಾ ಪಾವತಿ ರಸೀದಿ ಇತ್ಯಾದಿ ದಾಖಲೆಗಳ ಪ್ರತಿಗಳನ್ನು ಒದಗಿಸಿದ ನಂತರ ಅರ್ಜಿದಾರರ ಆಧಾರ್‌ ಸಂಯೋಜನಿತ ಬ್ಯಾಂಕ್‌ ಖಾತೆಗೆ DBT(Direct Benefit Transfer) ಮೂಲಕ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ.

ವಾಹನ ಸರಬರಾಜುದಾರರು ವಾಹನವನ್ನು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಸ್ವಾವಲಂಬಿ ಸಾರಥಿ/ಟ್ಯಾಕ್ಸಿ ಉದ್ದೇಶಕ್ಕೆ Yellow Board ಗೆ ನೋಂದಾಯಿಸಿ ವಿತರಿಸಲಾಗುತ್ತದೆ.

ಬ್ಯಾಂಕ್‌ ಸೂಚನೆ ಮೇರೆಗೆ ನೋಂದಣಿ ವೆಚ್ಚ/ವಿಮಾ ಮೊತ್ತವನ್ನು ಫಲಾನುಭವಿಯು ಭರಿಸಬೇಕು. ವಿಮೆಯನ್ನು ಫಲಾನುಭವಿಯು ಪ್ರತಿ ವರ್ಷ ಪರಿಷ್ಕರಿಸಬೇಕು.

ಈ ಯೋಜನೆಯಲ್ಲಿ ಖರೀದಿಸಿದ ವಾಹನವನ್ನು ಸಾಲ ತೀರುವಳಿ ಆಗುವವರೆಗೂ ಮಾರಾಟ ಮಾಡಲು ಅಥವಾ ಟ್ಯಾಕ್ಸಿಯಿಂದ Yellow Board ಸ್ವಂತಕ್ಕೆ (White Board) ಬದಲಿಸಲು ಅವಕಾಶ ಇರುವುದಿಲ್ಲ.

ಸಾಲದ ಮರುಪಾವತಿ ವಿಧಾನ

ಈ ಯೋಜನೆಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬ್ಯಾಂಕ್‌ ಶಾಖೆಯವರು ನಿಗದಿಪಡಿಸಿದ ಕಂತುಗಳನ್ವಯ ಅಸಲು ಮತ್ತು ಬಡ್ಡಿಯನ್ನು ಫಲಾನುಭವಿಗಳು ಬ್ಯಾಂಕ್ ಗಳಿಗೆ ಮರುಪಾವತಿಸಬೇಕು.

ಈ ಯೋಜನೆ ಅನುಷ್ಠಾನಕ್ಕೆ ಕಾಲಕಾಲಕ್ಕೆ ಅಗತ್ಯವಿರುವ ತಿದ್ದುಪಡಿ/ಮಾರ್ಪಾಡು ಅಥವಾ ಸೇರ್ಪಡೆ ಇತ್ಯಾದಿಗಳನ್ನು ಮಾಡಲು ನಿರ್ದೇಶಕ ಮಂಡಳಿಯು ಅಧಿಕಾರ ಹೊಂದಿರುತ್ತದೆ. ಹಾಲಿ ನಿಯಮಗಳಡಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಉದ್ಭವವಾಗುವ ಸಂಶಯಗಳನ್ನು ನಿವಾರಿಸಲು/ಸ್ಷಷ್ಠೀಕರಣ ನೀಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ಹೊಂದಿರುತ್ತಾರೆ.

ಸ್ವಾವಲಂಬಿ ಸಾರಥಿ ಯೋಜನೆಯ ಗುಣಲಕ್ಷಣಗಳು

ಗುಣಲಕ್ಷಣಗಳು ವಿವರ
ಯೋಜನೆ ಹೆಸರು ಸ್ವಾವಲಂಬಿ ಸಾರಥಿ ಯೋಜನೆ
ಪ್ರಯೋಜನಗಳು ವಾಹನದ ಖರೀದಿಯ ಮೇಲೆ ಸಬ್ಸಿಡಿ
ಫಲಾನುಭವಿಗಳು ಅಲ್ಪಸಂಖ್ಯಾತರು, ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ
ನೋಡಲ್‌ ಇಲಾಖೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ಅಧಿಕೃತ ವೆಬ್‌ಸೈಟ್‌ https://kmdconline.karnataka.gov.in/Portal/login

ಪ್ರಶ್ನೋತ್ತರಗಳು

ಸ್ವಾವಲಂಬಿ ಸಾರಥಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ/ಪಂಗಡ, ಒಬಿಸಿ, ವೀರಶೈವ-ಲಿಂಗಾಯತ, ಒಕ್ಕಲಿಗ, ಇತ್ಯಾದಿ ಸಮುದಾಯದವರು ಅರ್ಜಿ ಸಲ್ಲಿಸಬಹದು.
ಸ್ವಾವಲಂಬಿ ಸಾರಥಿ ಯೋಜನೆಯ ಗರಿಷ್ಠ ಸಬ್ಸಿಡಿ ಎಷ್ಟು?4 ಲಕ್ಷ ರೂ. (ಪರಿಶಿಷ್ಟ ಜಾತಿ/ಪಂಗಡ), 3 ಲಕ್ಷ ರೂ.(ಅಲ್ಪಸಂಖ್ಯಾತರು, ಒಬಿಸಿ), 75,000 ರೂ. (ಆಟೋರಿಕ್ಷಾ).
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?ಆನ್‌ಲೈನ್‌ನಲ್ಲಿ https://kmdconline.karnataka.gov.in/ ಅಥವಾ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಬ್ಸಿಡಿಯಿಂದ ದೊರೆತ ವಾಹನವನ್ನು ಮಾರಾಟ ಮಾಡಬಹುದೇ? ಈ ಯೋಜನೆಯಲ್ಲಿ ಖರೀದಿಸಿದ ವಾಹನವನ್ನು ಸಾಲ ತೀರುವಳಿ ಆಗುವವರೆಗೂ ಮಾರಾಟ ಮಾಡಲು ಅಥವಾ ಟ್ಯಾಕ್ಸಿಯಿಂದ Yellow Board ಸ್ವಂತಕ್ಕೆ (White Board) ಬದಲಿಸಲು ಅವಕಾಶ ಇರುವುದಿಲ್ಲ.
ಸಾಲ ಪಡೆಯಲು ಮಹಿಳೆಯರಿಗೆ ಆದ್ಯತೆ ಇದೆಯೇ?ಹೌದು, ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಆದ್ಯತೆ ಇದೆ.

ಹೆಚ್ಚಿನ ಸುದ್ದಿ