Wednesday, August 26, 2026
Homeರಾಜಕೀಯವಿದ್ಯಾವಂತರು ಜಾತಿ ವ್ಯವಸ್ಥೆ ಮೈಗೂಡಿಸಿಕೊಳ್ಳುವುದು ದುರದೃಷ್ಟಕರ : ಸಿದ್ದರಾಮಯ್ಯ

ವಿದ್ಯಾವಂತರು ಜಾತಿ ವ್ಯವಸ್ಥೆ ಮೈಗೂಡಿಸಿಕೊಳ್ಳುವುದು ದುರದೃಷ್ಟಕರ : ಸಿದ್ದರಾಮಯ್ಯ

ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ಶೂದ್ರ ಸೇವಾ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಭಾಷಣ.

ಜಾತಿ ವ್ಯವಸ್ಥೆ ಮೂಲಕ ಯಾರನ್ನೂ ಕೀಳಾಗಿ ಕಾಣಬಾರದು.

ಚತುವರ್ಣ ವ್ಯವಸ್ಥೆಯನ್ನು ಮನುವಾದಿಗಳು ಈ ದೇಶದಲ್ಲಿ ಉದ್ದೇಶಪೂರ್ವಕಾಗಿ ಸೃಷ್ಟಿ ಮಾಡಿದರು.

ಜಾತಿ ವ್ಯವಸ್ಥೆ ಹೋಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣ ಆಗಬೇಕು. ಶೂದ್ರ ವರ್ಗ ಅನೇಕ ವರ್ಷಗಳ ಕಾಲ ಅಕ್ಷರ ಸಂಸ್ಕೃತಿ, ಅವಕಾಶಗಳಿಂದ ದೂರ ಇತ್ತು.

ಶೂದ್ರ ವರ್ಗದವರು ಮೇಲ್ವರ್ಗದವರ ಜೊತೆ ಸ್ಪರ್ಧೆ ಮಾಡುವುದು ಅಸಾಧ್ಯ. ಅಕ್ಷರ ವಂಚಿತರಿಗೆ ಅಕ್ಷರ ಕಲಿತವರಿಂದ ಸೋಲಾಗುವುದು ಸಾಮಾನ್ಯ.

ನಮ್ಮಲ್ಲಿನ ಭಿನ್ನಾಭಿಪ್ರಾಯಗಳ ಪರಿಣಾಮ ಬ್ರಿಟಿಷರು ನಮ್ಮನ್ನು ಆಳಿದರು. ಹೀಗಾಗಿ ಭಿನ್ನಾಭಿಪ್ರಾಯ ಮರೆತು ಎಲ್ಲ ವರ್ಗಗಳು ಒಂದಾಗಬೇಕು.

ಅಸಮಾನತೆ ತೊಲಗಿ ಸಮ‌ ಸಮಾಜ ನಿರ್ಮಾಣ ಆಗಬೇಕು ಎಂಬುದು ಸಂವಿಧಾನದ ಆಶಯ. ಬುದ್ಧ, ಬಸವ, ಅಂಬೇಡ್ಕರ್ ಅವರು ಹೇಳಿದ್ದೂ ಇದನ್ನೇ.

ಪಟ್ಟಭದ್ರ ಹಿತಾಸಕ್ತಿಗಳು ನಮ್ಮನ್ನು ಒಂದಾಗಲು ಬಿಡುವುದಿಲ್ಲ. ಜಾತಿ ಹೋಗಬೇಕಾದರೆ ವಿದ್ಯಾವಂತರು ವೈಜ್ಞಾನಿಕವಾಗಿ ಆಲೋಚನೆ ಮಾಡುವುದನ್ನು ಕಲಿಯಬೇಕು.

ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ಬಂತು. ಆದರೆ, ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇದಕ್ಕೆ ವಿದ್ಯಾವಂತರೂ ಕಾರಣ. ವಿದ್ಯಾವಂತರಲ್ಲಿ ಬಹುಪಾಲು ಈಗಲೂ ಮೌಢ್ಯ, ಕಂದಾಚಾರಗಳನ್ನ ಪಾಲನೆ ಮಾಡುತ್ತಾರೆ.

ಇಂದಿನ ಪೀಳಿಗೆ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳದಿದ್ದರೆ ಸಮಾನತೆಯ ಸಮಾಜ ನಿರ್ಮಾಣ ಅಸಾಧ್ಯ. ಜಾತಿ ವ್ಯವಸ್ಥೆಯೂ ಹೋಗದು.

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಅಸಮಾನತೆ ನಿವಾರಣೆಗೆ ಸಹಾಯಕ. ವ್ಯವಸ್ಥೆ ಬದಲಾವಣೆಗೆ ಎಲ್ಲರ ಪ್ರಯತ್ನ ಅಗತ್ಯ. ಇದಕ್ಕೆ ಸಮಯವೂ ಬೇಕು. ಸರಿಯಾದ ಮಾರ್ಗದಲ್ಲಿ ಹೋದಾಗ ಪ್ರಯತ್ನಕ್ಕೆ ಯಶ ಸಿಗುತ್ತದೆ.

ಸಂಘದ ಅಧ್ಯಕ್ಷ, ಶೂದ್ರ ಪತ್ರಿಕೆ ಸಂಪಾದಕ ರಾಮೇಗೌಡ, ಸಂಚಾಲಕ ಮುರಳೀದರ ಹಾಲಪ್ಪ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ