Friday, September 25, 2026
HomeUncategorizedಚನ್ನಮ್ಮನ ಕಿತ್ತೂರಿನ ಅಗ್ನಿಶಾಮಕ ಇಲಾಖೆ ಕಛೇರಿಗೆ ಹೋಗಲು-ಬರಲು ನಿತ್ಯ ಕೆಸರಿನಲ್ಲಿ ಓಡಾಟ; ರಸ್ತೆ ಕಾಣದ ಅಗ್ನಿಶಾಮಕ...

ಚನ್ನಮ್ಮನ ಕಿತ್ತೂರಿನ ಅಗ್ನಿಶಾಮಕ ಇಲಾಖೆ ಕಛೇರಿಗೆ ಹೋಗಲು-ಬರಲು ನಿತ್ಯ ಕೆಸರಿನಲ್ಲಿ ಓಡಾಟ; ರಸ್ತೆ ಕಾಣದ ಅಗ್ನಿಶಾಮಕ ಇಲಾಖೆ

ಚನ್ನಮ್ಮನ ಕಿತ್ತೂರು: ಕಿತ್ತೂರು ಪಟ್ಟಣದಲ್ಲಿ ಅಗ್ನಿಶಾಮಕ ಇಲಾಖೆಯ ಕಛೇರಿ ಕಟ್ಟಡವಿದ್ದು ಆ ಕಛೇರಿಗೆ ತೆರಳಲು ಒಳ್ಳೆಯ ರಸ್ತೆ ಇಲ್ಲದಂತಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ಆ ಕಟ್ಟಡಕ್ಕೆ ಹೋಗಲು ಡಾಂಬರು ಅಥವಾ ಸಿಸಿ ರಸ್ತೆ ಇಲ್ಲ, ಅಲ್ಲಿಗೆ ಹೋಗಲು ಅಗ್ನಿಶಾಮಕ ಇಲಾಖೆ ಕೆಸರಿನ ರಸ್ತೆ ನಿರ್ಮಾಣ ಮಾಡಿದ ಹಾಗೆ ಇದೆ ಅನಿಸುತ್ತಿದೆ..

ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ವಾಹನಗಳು ನಿತ್ಯ ಈ ಕೆಸರಿನ ರಸ್ತೆಯಲ್ಲಿ ದಿನನಿತ್ಯ ಸಂಚಾರ ಮಾಡಬೇಕು. ಅಗ್ನಿಶಾಮಕ ಕಟ್ಟಡಕ್ಕೆ ಹೋಗಲು ಡಾಂಬರು ಅಥವಾ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಕಿತ್ತೂರಿನ ಪ್ರಜ್ಞಾವಂತ ಯುವಕರು ಹೇಳುತ್ತಿದ್ದಾರೆ.

ಕಿತ್ತೂರಿನ ಜನತೆ ಹೇಳುವ ಪ್ರಕಾರ ಅಗ್ನಿಶಾಮಕ ಇಲಾಖೆ ಕಿತ್ತೂರು ಬಂದು ಹಲವು ವರ್ಷಗಳೇ ಕಳೆದರೂ ಇನ್ನೂ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿದ್ದಾರೆ.


ಈಗಲಾದರೂ ಸಂಬಂಧ ಪಟ್ಟವರು ಅಗ್ನಿಶಾಮಕ ಇಲಾಖೆಗೆ ಹೋಗಲು ಒಳ್ಳೆಯ ರಸ್ತೆ ನಿರ್ಮಾಣ ಮಾಡಬೇಕು ಎಂದು ಕಿತ್ತೂರಿನ ಪ್ರಜ್ಞಾವಂತರು ತಿಳಿಸಿದ್ದಾರೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ