ಮುಂಡಗೋಡ: ಈ ದಿನ ದಿನಾಂಕ:-02/06/2026 ರಂದು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿ ಬ್ಲೂಹಿಲ್ ಹೊಟೇಲ ಹತ್ತಿರ ಆರೋಪಿತನಾದ ಇಸ್ಮಾಯಿಲ್ ತಂದೆ ಬಾಬುಸಾಬ ಜಮಖಂಡಿ ಪ್ರಾಯ-40 ವರ್ಷ ವೃತ್ತಿ-ವ್ಯಾಪಾರ ಜಾತಿ-ಮುಸ್ಲಿಂ ಸಾ।। ಹಳ್ಳೂರ ಓಣಿ, ಮುಂಡಗೋಡ ಈತನು ಹಳದಿ ಬಣ್ಣದ ಬ್ಯಾಗನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ಆರೋಪಿತನನ್ನು ಬಂದಿಸಲಾಗಿದೆ.
ದಾಳಿಯ ವೇಳೆ ಸುಮಾರು ರೂ 25,000/- ಬೆಲೆ ಬಾಳುವ 436 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು ರೂ 30,000/- ಬೆಲೆಯ ಬೈಕ್ ಒಟ್ಟು ಅಂದಾಜು 55,000/- ರೂ ಬೆಲೆಯ ಸ್ವತ್ತು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶ್ರೀ ದೀಪನ್ ಎಮ್.ಎನ್, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ, ಕಾರವಾರ, ಶ್ರೀ ಕೃಷ್ಣಮೂರ್ತಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ, ಶ್ರೀಮತಿ ಗೀತಾ. ಪಾಟೀಲ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪ ವಿಭಾಗ, ಶಿರಸಿ ರವರ ಮಾರ್ಗದರ್ಶನದಲ್ಲಿ ಅಕ್ರಮ ಗಾಂಜಾವನ್ನು ಮಾರಾಟ ಮಾಡುವ ಆರೋಪಿತರನ್ನು ಬಂಧಿಸುವಲ್ಲಿ ಶ್ರೀ ರಮೇಶ ಹಾನಾಪುರ ಪಿ.ಐ ಮುಂಡಗೋಡ ಪೊಲೀಸ್ ಠಾಣೆ, ಶ್ರೀ ಮಂಜುನಾಥ ಗೌಡರ ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ, ಶ್ರೀ ಕಾಸಿಮಸಾ ವಾಗಣಗೇರಿ, ಪ್ರೋ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಸಿದ್ಧಲಿಂಗೇಶ. ಎಸ್. ಬಿ ಸಿ.ಹೆಚ್.ಸಿ-1645, ಅಣ್ಣಪ್ಪ ಬುಡಿಗೇರ ಸಿ.ಪಿ.ಸಿ-1074, ಕೆಂಚಪ್ಪ ಜಾಲಿಕಟ್ಟಿ ಸಿ.ಪಿ.ಸಿ-1323, ಮುತ್ತು ಭೋವಿ, ಸಿ.ಪಿ.ಸಿ-1100, ಸಂಜು ರಾಠೋಡ, ಸಿ.ಪಿ.ಸಿ-1984, ಮಂಜುನಾಥ ಓಣಿಕೇರಿ, ಸಿ.ಪಿ.ಸಿ-606, ಹಾಗೂ ಬಸವರಾಜ ಒಡೆಯರ, ಸಿ.ಪಿ.ಸಿ-444 ಮುಂಡಗೋಡ ಪೊಲೀಸ್ ಠಾಣೆರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ವರದಿ: ಬಸಯ್ಯ ತೋಟಯ್ಯನವರ
ಸಂಪಾದಕರು: ರಾಮಚಂದ್ರಪ್ಪ ಪೂಜೇರ
