Wednesday, April 15, 2026
Homeಕ್ರೈಂ ಸುದ್ದಿಗಳುಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಕೊಂದ ತಂದೆ : ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ ಸರ್ಕಲ್...

ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಕೊಂದ ತಂದೆ : ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಅಮಾನತು

ಪ್ರೀತಿಸಿದವನನ್ನೇ ಮದುವೆಯಾದಳು ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ತಂದೆ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಕೊಲೆಗಾರರಿಗೆ ನೆರವು ನೀಡಿ, ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ ಸರ್ಕಲ್ ಇನ್ಸ್‌ಪೆಕ್ಟರ್ (CI) ಅವರನ್ನು ಅಮಾನತುಗೊಳಿಸಲಾಗಿದೆ.

22 ವರ್ಷದ ಚೌಡೇಶ್ವರಿ ಎಂಬ ಯುವತಿ, ತನ್ನ ಪೋಷಕರ ವಿರೋಧದ ನಡುವೆಯೂ ತಾನು ಪ್ರೀತಿಸಿದ ಯುವಕನೊಂದಿಗೆ ಮಾರ್ಚ್ 4 ರಂದು ಮದುವೆಯಾಗಿದ್ದಳು. ಮಗಳ ನಡೆಗೆ ಆಕ್ರೋಶಗೊಂಡ ಪೋಷಕರು ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ತನಿಖೆ ಮಾಡಿದ್ದ ಪೊಲೀಸರು ಪ್ರೇಮಿಗಳನ್ನು ಪತ್ತೆ ಹಚ್ಚಿದ್ದರು.. ಯುವತಿಗೆ ರಕ್ಷಣೆ ನೀಡುವ ಬದಲು, ಇನ್ಸ್‌ಪೆಕ್ಟ‌ರ್ ಬೆದರಿಕೆ ಹಾಕಿ ಬಲವಂತವಾಗಿ ಆಕೆಯ ಪೋಷಕರ ಜೊತೆ ಕಳಿಸಿಕೊಟ್ಟಿದ್ದರು.

ಪೋಷಕರ ಮನೆಗೆ ಮರಳಿದ ಮೂರೇ ದಿನಗಳಲ್ಲಿ ಅಂದರೆ ಮಾರ್ಚ್ 18 ರಂದು ಚೌಡೇಶ್ವರಿ ಶವವಾಗಿ ಪತ್ತೆಯಾಗಿದ್ದಳು. ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬದವರು ಕಥೆ ಕಟ್ಟಿದ್ದರು.. ಆದರೆ, ಚೌಡೇಶ್ವರಿ ನಿದ್ರಿಸುತ್ತಿದ್ದಾಗ ಆಕೆಯ ಮುಖಕ್ಕೆ ದಿಂಬಿನಿಂದ ಒತ್ತಿ ಉಸಿರುಗಟ್ಟಿಸಿ ತಂದೆ ಚಂದ್ರ ಕೊಲೆ ಮಾಡಿದ್ದ.

ಕೊಲೆಯನ್ನು ಆತ್ಮಹತ್ಯೆ ಎಂದು ಸರ್ಕಲ್ ಇನ್ಸ್ಪೆಕ್ಟರ್, ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಹಂತಕರನ್ನು ರಕ್ಷಿಸಲು ಮುಂದಾಗಿದ್ದರು ಎನ್ನಲಾಗಿದೆ.

ಸದ್ಯ ಕೊ*ಲೆ ಆರೋಪದ ಮೇಲೆ ತಂದೆ ಚಂದ್ರ ಮತ್ತು ಮತ್ತೊಬ್ಬ ಸಂಬಂಧಿಯನ್ನು ಬಂಧಿಸಲಾಗಿದೆ.

ಹೆಚ್ಚಿನ ಸುದ್ದಿ