ಮೂಡಲಗಿ : ತಾಲೂಕಿನ ಖಾನಟ್ಟಿ ಗ್ರಾಮದ ಸರ್ಕಾರಿ
ಪ್ರೌಢಶಾಲೆಯಲ್ಲಿ 2005-06 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ರವಿವಾರ ದಿ.23 ರಂದು ಮುಂಜಾನೆ 9:30 ಕ್ಕೆ ಆಯೋಜಿಸಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ವಿಶೇಷ ಸ್ಥಾನಮಾನವಿದೆ ಆಧ್ಯಾತ್ಮಿಕ ಗುರು ಗುರುಗಳಾಗಲಿ, ಲೌಕಿಕ ಶಿಕ್ಷಣ ನೀಡಿದ ಗುರುಗಳಾಗಲಿ ವರ್ಣಮಾತ್ರಂ ಕಲಿಸಿದಾತಂ ಗುರು ಎಂಬಂತೆ ಒಂದು ಅಕ್ಷರ ಕಲಿಸಿದರು ಗುರುಗಳೇ, ಅಂತಹ ಗುರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಬಿ ತುಪ್ಪದ ನಿವೃತ್ತ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಗುರ್ಲಾಪುರ, ಉದ್ಘಾಟನೆಯನ್ನು ಎಂ.ಆರ್ ಮುಂಜಿ ಕ್ಷೇತ್ರ ಶಿಕ್ಷಣಾಧಿಕಾರಿ ಅಥಣಿ, ಮುಖ್ಯ ಅತಿಥಿಗಳಾಗಿ ಪಿ.ಬಿ ಹಿರೇಮಠ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಲಗಿ, ಆರ್.ಪಿ ಮಠದ ಜಿಲ್ಲಾ ಉಪ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಚಿಕ್ಕೋಡಿ, ಎಸ್.ಎಂ ಗುಗ್ಗರಿ ನಿವೃತ್ತ ಮುಖ್ಯೋಪಾಧ್ಯಾಯರು ಖಾನಟ್ಟಿ, ಆರ್.ಎಸ್ ಹುನ್ನೂರ ಮುಖ್ಯೋಪಾಧ್ಯಾಯರು ಸರ್ಕಾರಿ ಪ್ರೌಢಶಾಲೆ ಖಾನಟ್ಟಿ, ವಿಶೇಷ ಗೌರವಾನ್ವಿತರಾಗಿ 2005-06 ನೇ ಸಾಲಿನ ಎಸ್.ಎಸ್.ಎಲ್.ಸಿ ಬಳಗಕ್ಕೆ ಶಿಕ್ಷಣ ನೀಡಿದ ಎಲ್ಲ ಗುರುವೃಂದ ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗಿಯಾಗುವರು.
ವರದಿಗಾರರು : ಹನಮಂತ ಬಿರಾದಾರಪಾಟೀಲ
