Saturday, August 22, 2026
HomeUncategorizedಟಿಬೆಟಿಯನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ಸಾವು ..! ಎರಡು ತಿಂಗಳಲ್ಲಿ ಎರಡು ಹೆಣ...

ಟಿಬೆಟಿಯನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ಸಾವು ..! ಎರಡು ತಿಂಗಳಲ್ಲಿ ಎರಡು ಹೆಣ ..! ಕಾರ್ಮಿಕರ ಭದ್ರತೆಗೆ ಬಗ್ಗೆ ಗಂಭೀರ ಪ್ರಶ್ನೆ…!

ಮುಂಡಗೋಡ :ತಾಲೂಕಿನ ಟಿಬೆಟಿಯನ್ನು ಕಾಲನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಯುವ ಕಟ್ಟಡ ಕಾರ್ಮಿಕನೊಬ್ಬ ದಾ ರುಣ್ಯವಾಗಿ ಸಾವನ್ನುಪ್ಪಿರುವ ಘಟನೆ ನಡೆದಿದೆ. .
ಮೃತ ಯುವಕನನ್ನು ಬಸಾಪುರ ಗ್ರಾಮದ ಸಂದೇಶ್ ನಾಗರಾಜ್ ಚಲವಾದಿ (23) ಎಂದು ಗುರುತಿಸಲಾಗಿದೆ. ಲಾಮಾ ಕ್ಯಾಂಪ್ ನಂಬರ್ -1 ರಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ……


ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .


ಎರಡು ತಿಂಗಳಲ್ಲಿ ಎರಡು ಹೆಣ…..! ಟಿಬೆಟಿಯನ್ ಕಾಲೋನಿಯಲ್ಲಿ ಕಟ್ಟಡದ ನಿರ್ಮಾಣ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದ್ದಾವೆ. ನಿತ್ಯವೂ ನೂರಾರು ಕಟ್ಟಡ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾ ಎಂಬ ಪ್ರಶ್ನೆಗೆ ಇಂದಿಗೆ ಮತ್ತೆ ಎದುರಾಗಿದೆ.

ಇದೇ ಟಿಮಿಟಿಯನ್ ಕಾಲನಿಯಲ್ಲಿ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ನೊಬ್ಬ ಮೃತ ಪಟ್ಟಿರುವುದು ಇತ್ತೀಚಿನ ಅವಧಿಯಲ್ಲಿ ಎರಡನೇ ಪ್ರಕರಣ ಎನ್ನಲಾಗಿದ್ದು. ಕಾರ್ಮಿಕರ ಸುರಕ್ಷತೆಗೆ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳ ಗಂಭೀರವಾಗಿ ಗಮನಹರಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಬಹು ಮಹಡಿ ಕಟ್ಟಡಗಳು….. ಸುರಕ್ಷತಾ ಕ್ರಮಗಳೇನು ?…
ಟಿಬೆಟಿಯನ್ನ ಕಾಲೋನಿಯಲ್ಲಿ ದಿನ ದಿನಕ್ಕೆ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಇಂತಹ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುಮತಿ, ಕಟ್ಟಡ ನಿರ್ಮಾಣ ನಿಯಮಗಳ ಪಾಲನೆ ಹಾಗೂ ಕಾರ್ಮಿಕರ ಸುರಕ್ಷಿತ ಕ್ರಮಗಳು ಸಮಪರ್ಕವಾಗಿ ಜಾರಿಯಾಗುತ್ತಿವೆಯಾ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಿಗೆ ಸೇಫ್ಟಿ ಬೆಲ್ಟ್ ಹೆಲ್ಮೆಟ್. ಸುರಕ್ಷಿತ ಜಾಲ ಸೇರಿದಂತೆ ಅಗತ್ಯ ಸುರಕ್ಷಿತ ಪರಿಕರಗಳನ್ನು ಒದಗಿಸುವುದು ಅತ್ಯಗತ್ಯ. ಆದರೆ ಇವುಗಳ ಪಾಲನೆ ಕುರಿತು ಹಲವು ಆರೋಪಗಳು ಕೇಳಿ ಬರುತ್ತಿವೆ .


ಬಡ ಕುಟುಂಬಗಳ ಆಧಾರವಾಗಿರುವ ಕಟ್ಟಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ? ಅನ್ನುವ ಪ್ರಶ್ನೆ ಎದ್ದಿದೆ . ..


ಮತ್ತೊಂದು ದುರ್ಘಟನೆ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಟಿಬೆಟಿಯನ್ನ ಕಾಲೋನಿಯಲ್ಲಿನ ಕಟ್ಟಡ ಕಾಮಗಾರಿಗಳ ಸುರಕ್ಷಿತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತದೆ..

ವರದಿ ಬಿ ಎಸ್ ತೋಟಯ್ಯನವರ ಮುಂಡಗೋಡ್

ಹೆಚ್ಚಿನ ಸುದ್ದಿ