Friday, May 8, 2026
Homeಧಾರ್ಮಿಕಶ್ರೀ ಜಟಿಂಗರಾಯ ದೇವಸ್ಥಾನದ ಉದ್ಘಾಟನೆ: ಮುಖಂಡ ಬಸನಗೌಡ ಪಾಟೀಲ ಯಡಿಯಾಪುರ ಅವರಿಗೆ ಆಹ್ವಾನ

ಶ್ರೀ ಜಟಿಂಗರಾಯ ದೇವಸ್ಥಾನದ ಉದ್ಘಾಟನೆ: ಮುಖಂಡ ಬಸನಗೌಡ ಪಾಟೀಲ ಯಡಿಯಾಪುರ ಅವರಿಗೆ ಆಹ್ವಾನ

ದೇವರ ಹಿಪ್ಪರಗಿ: ತಾಲೂಕಿನ ನಾಗರಾಳ ಡೋಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಜಟಿಂಗರಾಯ ದೇವಸ್ಥಾನದ ಉದ್ಘಾಟನಾ ಸಮಾರಂಭವು ದಿನಾಂಕ 30-04-2026 ರಂದು ಅದ್ದೂರಿಯಾಗಿ ನೆರವೇರಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೋರಿ ಗ್ರಾಮದ ಭಕ್ತ ಮಂಡಳಿ ಹಾಗೂ ಮುಖಂಡರು ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಅವರಿಗೆ ಆಹ್ವಾನ ನೀಡಿದರು.
ಗ್ರಾಮದ ಪೂಜ್ಯ ಸ್ವಾಮೀಜಿಗಳ ನೇತೃತ್ವದಲ್ಲಿ, ಹಿರಿಯರು ಹಾಗೂ ಯುವಕರು ಮುಖಂಡರ ನಿವಾಸಕ್ಕೆ ತೆರಳಿ ಆಹ್ವಾನ ಪತ್ರಿಕೆ ನೀಡುವ ಮೂಲಕ ಗೌರವಪೂರ್ವಕವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪೂಜ್ಯ ಸ್ವಾಮೀಜಿಯವರಿಗೆ ಭಕ್ತಿಯಿಂದ ಸನ್ಮಾನಿಸಿ ಆಶೀರ್ವಾದ ಪಡೆದರು.
ಆಹ್ವಾನ ಸ್ವೀಕರಿಸಿದ ಬಸನಗೌಡ ಪಾಟೀಲ ಅವರು ಮಾತನಾಡಿ, “ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುತ್ತವೆ. ನಾಗರಾಳ ಡೋಣ ಗ್ರಾಮದ ಶ್ರೀ ಜಟಿಂಗರಾಯ ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ತಾವು ಖಂಡಿತವಾಗಿಯೂ ಆಗಮಿಸಿ ದೈವದ ಕೃಪೆಗೆ ಪಾತ್ರರಾಗುವುದಾಗಿ” ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಳ ಡೋಣ ಗ್ರಾಮದ ಗ್ರಾಮಸ್ಥರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ