Sunday, September 27, 2026
Homeಜಿಲ್ಲಾ ಸುದ್ದಿಗಳುಲಿಂಗಸೂಗೂರು ಕಾಂಗ್ರೆಸ್ ಕಾರ್ಯಾಲಯದಲ್ಲಿ ಭೂತ್ ಮಟ್ಟದ ಸಭೆ

ಲಿಂಗಸೂಗೂರು ಕಾಂಗ್ರೆಸ್ ಕಾರ್ಯಾಲಯದಲ್ಲಿ ಭೂತ್ ಮಟ್ಟದ ಸಭೆ

ಲಿಂಗಸೂಗೂರು: ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ.ಎಸ್. ಹೂಲಗೇರಿ ಅವರ ಅಧ್ಯಕ್ಷತೆಯಲ್ಲಿ ಭೂತ್ ಮಟ್ಟದ ಕಾಂಗ್ರೆಸ್ BLA2 ಹಾಗೂ ನಾಮನಿರ್ದೇಶನ ಸದಸ್ಯರ ಸಭೆ ನಡೆಯಿತು.


ಸಭೆಯಲ್ಲಿ ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ನಾಯಕ, ಮುದಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಉಪಸ್ಥಿತರಿದ್ದರು. ಮತದಾರರ ಪಟ್ಟಿಯ ಪರಿಶೀಲನೆ, ಅಕ್ರಮ ಮತದಾರರ ಗುರುತింపు, ನಾಮನಿರ್ದೇಶನ ಸದಸ್ಯರ ಜವಾಬ್ದಾರಿ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಿವಣ್ಣ ನಾಯಕ ಕೋಠಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ಜೆಲ್ಲಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ್ ರಫಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಜಿಲ್ಲಾ ಕಾಂಗ್ರೆಸ್ ಪದವೀಧರ ವಿಭಾಗ ಅಧ್ಯಕ್ಷ ಸಂಜೀವಪ್ಪ ಚಲುವಾದಿ, ಹಿರಿಯ ಮುಖಂಡ ತಮ್ಮಣ್ಣ ಗುತ್ತೆದಾರ ಉಪಸ್ಥಿತರಿದ್ದರು.
ಇದಲ್ಲದೆ ಮುಂಚೂಣಿ ಘಟಕಗಳ ಅಧ್ಯಕ್ಷರಾದ ಸಂತೋಷ ಸೊಪ್ಪಿಮಠ, ಖಾಜಹುಸೇನ ಪೂಲೆವಾಲ, ಉಮೇಶ್ ಹುನ್ನಕುಂಟಿ, ಸಂಗಮೇಶ ನಾಯಕ, ಅರುಣ ಯರದಿಹಾಳ, ಮೌನೇಶ ಪೂಜಾರಿ, ಅಬ್ದುಲ್ ಖದೀರ್ ಪಾನವಾಲೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮಿ ದೇಸಾಯಿ, ಪಕ್ಷದ ಹಿರಿಯ ಮುಖಂಡರು ಹಾಗೂ ನಾಮನಿರ್ದೇಶನ ಸದಸ್ಯರು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ