Tuesday, July 14, 2026
Homeಕ್ರೈಂ ಸುದ್ದಿಗಳುಮುಂಬಯಿ ಮೂಲದ ಮದರಸಾ ವಿದ್ಯಾರ್ಥಿಗಳಿಂದ ಮಾರಕಾಸ್ತ್ರಗಳೊಂದಿಗೆ ಆಸೀಡ್ ನಿಂದ 15 ಜನರ ಮೇಲೆ ದಾಳಿ

ಮುಂಬಯಿ ಮೂಲದ ಮದರಸಾ ವಿದ್ಯಾರ್ಥಿಗಳಿಂದ ಮಾರಕಾಸ್ತ್ರಗಳೊಂದಿಗೆ ಆಸೀಡ್ ನಿಂದ 15 ಜನರ ಮೇಲೆ ದಾಳಿ

ಕರ್ತವ್ಯ ನಿರತ ಪೊಲೀಸರ ಮೇಲೂ ಹಲ್ಲೆ: ಕೊತ್ತನೂರು ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ಧ ಎಫ್.ಐ.ಆರ್ ದಾಖಲು

ಬೆಂಗಳೂರು, ಜು.14; ಥಣಿಸಂದ್ರದ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಆವರಣದಲ್ಲಿ ಮುಂಬಯಿ ಮೂಲದ ಮದರಸಾಗೆ ಸೇರಿದ 50 ರಿಂದ 60ಕ್ಕೂ ಅಧಿಕ ಪುಂಡ ವಿದ್ಯಾರ್ಥಿಗಳು ಒಳಗೊಂಡಂತೆ ಹಲವು ಮಂದಿ ನಿನ್ನೆ ಸಂಜೆ ಏಕಾಏಕಿ ಮಹಿಳೆಯರು, ಪೋಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆಸಿಡ್ ಎರಚಿ 15 ಮಂದಿಯ ಮೇಲೆ ದಾಳಿ ಮಾಡಿ ವಿಕೃತವಾಗಿ ಪುಂಡಾಟ ಮೆರೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಆಗಮಿಸಿದ್ದ ಕೊತ್ತನೂರು ಪೋಲೀಸರ ಮೇಲೂ ಹಲ್ಲೆ ನಡೆಸಿದ್ದು, ಶಾಲಾ ಆವರಣ ರಣಾಂಗಣವಾಗಿ ಮಾರ್ಪಟ್ಟಿತ್ತು.
ಶಾಂತಿ ಭಂಗವುಂಟು ಮಾಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ 12 ಪುಂಡರ ವಿರುದ್ಧ ಸ್ವತಃ ಕೊತ್ತನೂರು ಠಾಣೆಯ ಎಎಸ್ಐ ಸತೀಶ್ ಕುಮಾರ್ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಾದ್ ಇಲಿಯಾಸ್, ಮೊಹಮ್ಮದ್ ಶೋಯೆಬ್, ಮೊಹಮ್ಮದ್ ಅಲಿ, ಅಬ್ದುಲ್ ಮತೀನ್, ಸೂಪಿಯಾನ್ ಸಾಬಿರ್, ವಸೀಂ ಅಹಮ್ಮದ್, ಅಬ್ದುಲ್ ಸಮೀರ್, ನೂರ್ ಆಲಮ್, ಪೈರೋಜ್ ಖಾನ್, ಮೊಹಮ್ಮದ್ ಅಖೈರ್ ಹಾಗೂ ಮಹಿಳೆಯರಾದ ಮುಸ್ತಾರಿ. ಅಸ್ನಾತಾಜ್ ಇತರೆ ಮಹಿಳೆ ಮತ್ತು ಪರುಷರು ಹಾಗೂ ಮದರಸಾ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.


ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ ಹೋಬಳಿ, ಥಣಿಸಂದ್ರ ಗ್ರಾಮದ 5.19 ಎಕರೆ ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿರುವ ಕುರಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸದರಿ ಜಮೀನಿಗೆ ಸಂಬಂಧಿಸಿದಂತೆ ಮಸೀಹ ಅಹಮ್ಮದ್ ಪರವಾಗಿ ಇಂಜೆಕ್ಷನ್ ಆದೇಶ ಇದೇ ಜುಲೈ 28 ರವರೆಗೆ ಚಾಲ್ತಿಯಲ್ಲಿದೆ. ಆದರೆ ದಿ ಅಲ್ ಜಾಮೀಯಾ ಮೊಹಮ್ಮದಿಯಾ ಎಜುಕೇಷನ್ ಸೊಸೈಟಿ ಯ ಸಿ.ಇ.ಓ ಆದ ಖಾಲೀದ್ ಮುಷ್ರಫ್ ಮತ್ತು ಅವರ ಸಹೋದರ ಅಬ್ದುಲ್ ರಕೀಬ್ ಮತ್ತು ಆಡಳಿತ ಸಿಬ್ಬಂದಿ ಮತ್ತು ಮದರಸಾ ವಿದ್ಯಾರ್ಥಿಗಳ ಜೊತೆ ಅಕ್ರಮ ಕೂಟ ಸೇರಿಕೊಂಡು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಪಾಯಕಾರಿ ಆಯುಧಗಳಾದ ರಾಡ್, ಸುತ್ತಿಗೆ (ಹ್ಯಾಮರ್), ಗ್ಲಾಸ್ ಪೀಸ್ ಗಳು, ಕಲ್ಲುಗಳನ್ನು ತೆಗೆದುಕೊಂಡು ಬಂದು ಮಸೀಹ ಅಹಮ್ಮದ್ ಸಂಬಂಧಿಕರು ಮತ್ತು ಅವರ ಕೆಲಗಾರರಿಗೆ ಮನ ಬಂದಂತೆ ಬೈದು, ಕೊಲೆ ಬೆದರಿಕೆ ಹಾಕಿ, ತಾವುಗಳ ತಂದಿರುವ ಅಪಾಯಕಾರಿ ವಸ್ತುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದೂರು ದಾಖಲಿಸಿದ್ದಾರೆ.
ಇವರನ್ನು ತಡೆಯಲು ಹೋದರೆ ನಮ್ಮನ್ನು ತಳ್ಳಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮನ ಬಂದಂತೆ ಅಲ್ಲಿಯೇ ಇದ್ದ ಗ್ಲಾಸ್ ಚೂರು ಗಳಿಂದ, ಕಲ್ಲುಗಳಿಂದ ಮತ್ತು ತಾವು ತಂದಿರುವ ಆಯುಧಗಳಿಂದ ಮಸೀಹ ಅಹಮ್ಮದ್ ಕಡೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಅವರ ಪರವಾಗಿದ್ದು, ನಿಮ್ಮನ್ನು ನಂಬಿದರೆ ನಮ್ಮ ಶಾಲೆಯ ಸ್ವತ್ತು ಅವರ ಪಾಲಾಗುತ್ತದೆ. ಅವರನ್ನು ಯಾವುದೇ ಕಾರಣಕ್ಕೆ ಇಲ್ಲಿ ಇರಲು ಬಿಡುವುದಿಲ್ಲ ಅವರೆಲ್ಲರನ್ನು ಹೊಡೆದು ಇಲ್ಲಿಂದ ಹೊರ ಓಡಿಸಬೇಕೆಂದು ಏಕಾಏಕಿ ತಾವು ತಂದಿರುವ ಕಲ್ಲು ರಾಡ್, ಸುತ್ತಿಗೆ, ಒಡೆದಿರುವ ಗ್ಲಾಸಿನ ಪೀಸ್ ಗಳಿಂದ ಅವರೆಲ್ಲರಿಗೂ ಹೊಡೆದು ರಕ್ತಗಾಯ ಮಾಡಿದ್ದಾರೆ. ಅದನ್ನು ತಡೆಯಲು ಮುಂದಾದ ಕರ್ತವ್ಯ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ನಮ್ಮ ಸಮವಸ್ತ್ರದ ನೇಮ್ ಪ್ಲೇಟ್, ಬಟನ್ ಕಿತ್ತು ಹೋಗಿದ್ದು, ಅವರೆಲ್ಲರೂ ಕಾನೂನಿನ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಂತರ ಇವರೆಲ್ಲರೂ ಸೇರಿಕೊಂಡು ಹಿಂದೆ ಇರುವ ಎರಡು ಬಾಗಿಲು ಗಳನ್ನು ಮುರಿದು ಹಾಕಿದ್ದಾರೆ. ನಮ್ಮ ಸಿಬ್ಬಂದಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ದಿ ಅಲ್ ಜಾಮೀಯಾ ಮೊಹಮ್ಮದಿಯಾ ಎಜುಕೇಷನ್ ಸೊಸೈಟಿ ಆಡಳಿತಾಧಿಕಾರಿಗಳು ಜಮೀನು ವ್ಯಾಜ್ಯದ ಗಲಾಟೆಗೆ ಮದರಸಾ ಮಕ್ಕಳನ್ನು ಬಳಸಿಕೊಂಡಿದ್ದಾರೆ. ಸದರಿ ಮದರಸಾದ ಸಿಬ್ಬಂದಿ ಮತ್ತು ಅಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ಈ ಜಮೀನಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಇವರಿಗೆ ಶಾಂತಿ ಭಂಗ ಮಾಡಬಾರಂದೆಂದು ಠಾಣೆಯಲ್ಲಿ ಪಿ.ಎ.ಆರ್ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಮಯದಲ್ಲಿ ವಿಡಿಯೋ ಸಹ ಮಾಡಲಾಗಿದೆ ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ