Tuesday, August 4, 2026
Homeರಾಜಕೀಯಬಿ.ವೈ. ವಿಜಯೇಂದ್ರರಿಂದ ತಮಿಳುನಾಡು ಸಿಎಂಗೆ ಪತ್ರ: ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ಸಹಕಾರಕ್ಕೆ ಮನವಿ

ಬಿ.ವೈ. ವಿಜಯೇಂದ್ರರಿಂದ ತಮಿಳುನಾಡು ಸಿಎಂಗೆ ಪತ್ರ: ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ಸಹಕಾರಕ್ಕೆ ಮನವಿ

ಬೆಂಗಳೂರು:ತಮಿಳುನಾಡು ಮುಖ್ಯಮಂತ್ರಿ ತಿರುವ್ ಸಿ. ಜೋಸೆಫ್ ವಿಜಯ್ ಅವರಿಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಪತ್ರ ಬರೆಯ2026ರ ಕಾವೇರಿ ಮತ್ತು ಮೇಕೆದಾಟು ವಿವಾದಗಳಿಗೆ ಸಂಬಂಧಿಸಿದಂತೆ ಮಹತ್ವದ ಮನವಿ ಮಾಡಿದ್ದಾರೆ. ಕಾವೇರಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ಉಭಯ ರಾಜ್ಯಗಳ ನಡುವೆ ಸೌಹಾರ್ದಯುತ ಒಮ್ಮತ ಮೂಡಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಐತಿಹಾಸಿಕ ಬಾಂಧವ್ಯ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಶತಮಾನಗಳಿಂದಲೂ ಹಂಚಿಕೆಯ ಇತಿಹಾಸ, ಸಂಸ್ಕೃತಿ ಮತ್ತು ವಾಣಿಜ್ಯ ಸಂಬಂಧವನ್ನು ಹೊಂದಿವೆ. ಕೋಟ್ಯಂತರ ಕನ್ನಡಿಗರು ಮತ್ತು ತಮಿಳರು ಪರಸ್ಪರ ರಾಜ್ಯಗಳಲ್ಲಿ ನೆಲೆಸಿ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ವಿಜಯೇಂದ್ರ ಸ್ಮರಿಸಿದ್ದಾರೆ.

ಮಾರ್ಗದರ್ಶನವಾಗಿ ಹಿರಿಯ ನಾಯಕರ ನಡೆ: ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಎಂ. ಕರುಣಾನಿಧಿ ಅವರು ತೋರಿಸಿದ ರಾಜನೀತಿಜ್ಞತೆ ಹಾಗೂ ಔದಾರ್ಯದ ಮನೋಭಾವವನ್ನು ಮಾದರಿಯಾಗಿಟ್ಟುಕೊಂಡು ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಹಾಗೂ ಜಲಾನಯನ ಪ್ರದೇಶದ ಕುಡಿಯುವ ನೀರು: ಕಾವೇರಿ ನದಿಯು ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಕೋಟ್ಯಂತರ ಕನ್ನಡಿಗರು ಮತ್ತು ತಮಿಳರ ಕುಡಿಯುವ ನೀರಿನ ಪ್ರಮುಖ ಜೀವನಾಡLಗಿದೆ. ಅನಿಶ್ಚಿತ ಮಳೆಯಿಂದಾಗಿ ರೈತರು ಮತ್ತು ನಾಗರಿಕರು ಸಂಕಷ್ಟದಲ್ಲಿದ್ದು, ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.

ಮೇಕೆದಾಟು ಯೋಜನೆಗೆ ಬೆಂಬಲ:ತಮಿಳುನಾಡಿನ ನೀರಿನ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆಯಾಗದಂತೆ, ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಹಕಾರಿಯಾಗುವ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರವು ಸಕಾರಾತ್ಮಕ ಸ್ಪಂದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ ತಮಿಳುನಾಡಿನ ಕಾಳಜಿಗಳನ್ನು ಗೌರವಿಸುವ ಮೂಲಕ ಉಭಯ ರಾಜ್ಯಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಬಿ.ವೈ. ವಿಜಯೇಂದ್ರ ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.

ಹೆಚ್ಚಿನ ಸುದ್ದಿ