Thursday, May 28, 2026
Homeಜಿಲ್ಲಾ ಸುದ್ದಿಗಳುಪತ್ನಿ ಮನೆಯಲ್ಲಿದ್ದಾಗಲೇ ನೇಣಿಗೆ ಶರಣು - ಬೆಳಗಾವಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆತ್ಮಹ*ತ್ಯೆ..!!!

ಪತ್ನಿ ಮನೆಯಲ್ಲಿದ್ದಾಗಲೇ ನೇಣಿಗೆ ಶರಣು – ಬೆಳಗಾವಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆತ್ಮಹ*ತ್ಯೆ..!!!

ಬೆಳಗಾವಿ: ರಾಜ್ಯ ಮೀಸಲು ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಶೈಲ ಚೌಗಲೆ (37) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾದ ಘಟನೆ ಬೆಳಗಾವಿಯ ಚನ್ನಮ್ಮ ನಗರದಲ್ಲಿ ನಡೆದಿದೆ.

ಪತ್ನಿ ಮನೆಯಲ್ಲಿದ್ದಾಗಲೇ ರೂಮ್ ಬಾಗಿಲು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅನುಮಾನಗೊಂಡ ಪತ್ನಿ ತಕ್ಷಣವೇ ಮೀಸಲು ಪಡೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಧೀನ ಸಿಬ್ಬಂದಿ ರೂಮ್ ಬಾಗಿಲು ಮುರಿದು ಶ್ರೀಶೈಲ ಚೌಗಲೆ ಅವರನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲೇ ಅವರು ಮೃ*ತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಪ್ರಸ್ತುತ ಬೆಳಗಾವಿ ಹೊರವಲಯದ ಕಂಗ್ರಾಳಿ ಪಿಟಿಎಸ್‌ನಲ್ಲಿ ಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ ಚೌಗಲೆ ಆತ್ಮಹ*ತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃ*ತದೇಹವನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಬೆಳಗಾವಿ ಉದ್ಯಮಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿ