Wednesday, August 12, 2026
Homeಜಿಲ್ಲಾ ಸುದ್ದಿಗಳುತುಮಕೂರು: ಹೊಸ ಬಡಾವಣೆ ಪೊಲೀಸ್‌ ಠಾಣೆಯ ಮಹಿಳಾ PSI ನಾಪತ್ತೆ; ಮಗಳಿಂದ ದೂರು ದಾಖಲು..

ತುಮಕೂರು: ಹೊಸ ಬಡಾವಣೆ ಪೊಲೀಸ್‌ ಠಾಣೆಯ ಮಹಿಳಾ PSI ನಾಪತ್ತೆ; ಮಗಳಿಂದ ದೂರು ದಾಖಲು..

ತುಮಕೂರು: ತುಮಕೂರಿನ ಹೊಸ ಬಡಾವಣೆ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಗಳಮ್ಮ ಅವರು ಕಾಣೆಯಾಗಿದ್ದಾರೆ.

ಪಿಎಸ್‌ಐ ಮಂಗಳಮ್ಮ ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಮಗಳು, ಪತ್ತೆಯಾಗದಿದ್ದಾಗ ಹೊಸ ಬಡಾವಣೆ ಠಾಣೆಗೆ ತೆರಳಿ, ತಾಯಿ, ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.

ಏಪ್ರಿಲ್ 3 ರಂದು ಡಿವೈಎಸ್‌ಪಿ ಕಚೇರಿಯಲ್ಲಿ ಸಭೆಗೆ ಮಂಗಳಮ್ಮ ಬಂದಿದ್ದರು. ಈ ವೇಳೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ, ಸಮವಸ್ತ್ರ ಬದಲಿಸಿ, ಸಿವಿಲ್‌ ಡ್ರೆಸ್‌ನಲ್ಲಿ ಹೊರಗೆ ತೆರಳಿದ್ದರು. ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇದರಿಂದ ಆತಂಕಗೊಂಡ ಮಗಳು, ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ಮಂಗಳಮ್ಮ ಅವರ ಪುತ್ರಿಗೆ ಡಿವೋರ್ಸ್ ಆಗಿತ್ತು. ಕೆಲ ದಿನಗಳಿಂದ ತಾಯಿ, ಮಗಳು ಒಟ್ಟಿಗೆ ವಾಸವಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ, ಮನನೊಂದು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾದ ಪಿಎಸ್‌ಐಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ