Saturday, September 26, 2026
Homeಜಿಲ್ಲಾ ಸುದ್ದಿಗಳುಕರ್ನಾಟಕ ಆಡಳಿತ ಸೇವೆಗೆ ಸೇರಿದ ಶ್ರೀಮತಿ ಪ್ರಭಾವತಿ ಫಕೀರ್‌ಪುರ್: ಧಾರವಾಡ ಜಿಲ್ಲೆಯ ಉಪವಿಭಾಗಾಧಿಕಾರಿ ಸೇವೆ

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಶ್ರೀಮತಿ ಪ್ರಭಾವತಿ ಫಕೀರ್‌ಪುರ್: ಧಾರವಾಡ ಜಿಲ್ಲೆಯ ಉಪವಿಭಾಗಾಧಿಕಾರಿ ಸೇವೆ

ಧಾರವಾಡ: ಕರ್ನಾಟಕ ಆಡಳಿತ ಸೇವೆಗೆ ಸೇರಿದ ಶ್ರೀಮತಿ ಪ್ರಭಾವತಿ ಫಕೀರ್‌ಪುರ್, ಕೆ.ಎ.ಎಸ್ (ಕಿರಿಯ ಶ್ರೇಣಿ), ಆಯುಕ್ತರು, ಕಿತ್ತೂರು ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ವಿಭಾಗಾಧಿಕಾರಿ, ಧಾರವಾಡ ಉಪವಿಭಾಗ, ಧಾರವಾಡ – ಶ್ರೀ ಶಾಲಂ ಹುಸೇನ್ ಕೆ.ಎ.ಎಸ್ ಇವರ ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ.

ಶ್ರೀಮತಿ ಪ್ರಭಾವತಿ ಫಕೀರ್‌ಪುರ್, ಕೆ.ಎ.ಎಸ್ (ಕಿರಿಯ ಶ್ರೇಣಿ) ಇವರನ್ನು ಕಾರ್ಯದರ್ಶಿ, ಯಲ್ಲಮ್ಮ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ಹುದ್ದೆಯಲ್ಲಿ ಕ.ನಾ.ಸೇ.ನಿ ನಿಯಮ 68ರಡಿ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ವರದಿಗಾರರು: ಗೌರಿಶಂಕರ ಹೆಗಡೆ

ಹೆಚ್ಚಿನ ಸುದ್ದಿ