Monday, February 9, 2026
HomeUncategorized೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ವತಿಯಿಂದ ಮಲ್ಲಿಕಾರ್ಜುನ ಹೊಸಮನಿಗೆ ಸನ್ಮಾನ

೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ವತಿಯಿಂದ ಮಲ್ಲಿಕಾರ್ಜುನ ಹೊಸಮನಿಗೆ ಸನ್ಮಾನ

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ನಗರದ ತಹಸೀಲ್ ಕಾರ್ಯಾಲಯಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಕನ್ನಡ ಸೇನಾ ತಾಲೂಕು ಘಟಕ ಕನ್ನಡ ಧ್ವಜ ಸ್ತಂಬದಲ್ಲಿ ಕನ್ನಡ ಸೇನೆ ಸುರಪುರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ ಕವಡಿಮಟ್ಟಿ ನೇತೃತ್ವದಲ್ಲಿ ಧ್ವಜಾರೋಹಣ ಮಾಡಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಭಾಗನಾಥ ಗುತ್ತೇದಾರ್ ಮಾತನಾಡುತ್ತಾ ನಮ್ಮ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿಯವರ ನೇತೃತ್ವದಲ್ಲಿ ಸುಮಾರು ವರ್ಷಗಳಿಂದ ಕನ್ನಡ ನಾಡು,ನುಡಿ,ನೆಲ,ಜಲ,ಪರವಾಗಿ ಯಾದಗಿರಿ ಜಿಲ್ಲೆ ಅಷ್ಟೇ ಅಲ್ಲದೆ ಬೆಂಗಳೂರು ನಗರದಲ್ಲಿ ನಡಿತಕ್ಕಂತ ಯಾವುದೇ ಕಾರ್ಯಕ್ರಮವಾಗಲಿ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮಕ್ಕೆ ಹೋಗಿ ರಾಜ್ಯ ಪದಾಧಿಕಾರಿಗಳ ಜೊತೆ ಗುರುತಿಸಿಕೊಂಡು ಸುರಪುರ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಕನ್ನಡ ಸೇನೆ ಸಂಘಟನೆಯನ್ನು ತಳದಿಂದ ಕಟ್ಟುವಂತ ಕೆಲಸ‌ಮಾಡಿರುವಂತ ಮಲ್ಲಿಕಾರ್ಜುನ ಹೊಸಮನಿಯವರಿಗೆ ಇಂದು ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸುರಪುರ ತಾಲೂಕು ಆಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮಕ್ಕೆ  ಆಹ್ವಾನ ನೀಡಿ ಸನ್ಮಾನ ಮಾಡಿದಕ್ಕಾಗಿ ತಾಲೂಕು ಆಡಳಿತಕ್ಕೆ ಮೊಟ್ಟಮೊದಲನೇಯದಾಗಿ ನಮ್ಮ ಕನ್ನಡ ಸೇನೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಕನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ತ್ಯಾಗ,ಬಲಿದಾನ ಮಾಡಿದಂತ ಮಹಾನ್ ನಾಯಕರನ್ನು ನಾವೆಲ್ಲರೂ ಸ್ಮರಿಸೋಣ ಎಂದರು.
ನಂತರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ ಮಾತನಾಡುತ್ತಾ ಸುಮಾರು ವರ್ಷಗಳಿಂದ ಕನ್ನಡ ಸೇನೆ ಸಂಘಟನೆಯ ಮೂಲಕ ಹಕವಾರು ಹೋರಾಟಗಳಲ್ಲಿ ಭಾಗವಹಿಸಿದ್ದೇನೆ.
ಅತೀ ಶೀಘ್ರದಲ್ಲೇ ನಮ್ಮ ಕನ್ನಡ ಸೇನೆ ತಾಲೂಕು ಘಟಕ ವತಿಯಿಂದ ನಮ್ಮ ಕನ್ನಡ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಬೇಕೆಂದು ಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ರವೀಂದ್ರ ಬಡಗ್,ಕೃಷ್ಣಪ್ಪ ನಾಯಕ,ದೇವು ನಾಯಕ,ತಿಪ್ಪಣ್ಣ ಭಜಂತ್ರಿ, ಭೀಮನಗೌಡ ಸಂಘಟನೆಯ ವಿದ್ಯಾರ್ಥಿ ಘಟಕ ಅಧ್ಯಕ್ಷ ಸಾಹೇಬಗೌಡ ಜಾಲವಾದಿ,ಗ್ರಾಮೀಣ ಘಟಕ ಅಧ್ಯಕ್ಷ ದೇವು ಮಾಲಗತ್ತಿ ರುಕ್ಮಾಪುರ,ಶಿವು ಹಿರೇಮಠ ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ.*

ಹೆಚ್ಚಿನ ಸುದ್ದಿ