

ಹಾವೇರಿ: ಹಾವೇರಿಯಲ್ಲಿ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ಆರು ನೆನಪಿನ ದ್ವಾರಗಳು ಮತ್ತು ಒಂದು ಪ್ರಧಾನ ವೇದಿಕೆ ಕಂಡು ಬಂದವು.
ದ್ವಾರರಗಳಿಗೆ ಈ ಕೆಳಗಿನವರ ಹೆಸರುಗಳು ಕಂಡುಬಂದವು ದಿ.ಶ್ರೀಮತಿ. ತೀರಕವ್ವ ಹನಮಂತಪ್ಪ ಹರಿಜನ ಸಾ. ಕಾಲ್ವೇ ಕಲ್ಲಾಪುರ ತಾ. ಹಾನಗಲ್ ಮತ್ತು ದಿ. ತಿಪ್ಪಣ್ಣ ನಿಂಗಪ್ಪ ಕಡೇಮನಿ ಸಾ.ನಾಗನೂರ್ ಹಾವೇರಿ ಇವರ ನೆನಪಿನ ದ್ವಾರವನ್ನು ಮಾಜಿ ಶಾಸಕರಾದ ಶ್ರೀ. ವಿ.ಎಸ್. ಪಾಟೀಲರವರು ದಿ. ಶ್ರೀ. ತಿಪ್ಪಣ್ಣ ಕಡೇಮನಿಯವರ ನೆನಪಿನ ದ್ವಾರ ಗಣ್ಯರು ಉದ್ಘಾಟನೆ ಮಾಡಿದರು
ಗಣ್ಯರು ಮಾತನಾಡುತ್ತಾ ಮುಂಡಗೋಡ ತಾಲೂಕಿನ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಮುಂಡಗೋಡದ ಪ್ರಾಂಶುಪಾಲರಾದ ಶ್ರೀ. ಜಿ. ಟಿ ಕಡೇಮನಿಯವರ ತಂದೆಯವರ ನೆನಪಿನ ದ್ವಾರ ಇದೊಂದು ಒಳ್ಳೆಯ ಕಾರ್ಯ ತಂದೆಯ ನೆನದು ಅವರ ಹೆಸರಿನಲ್ಲಿ ನೆನಪಿನ ದ್ವಾರ ನಿರ್ಮಾಣ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಕನ್ನಡ ಕಹಳೆ ಹಾವೇರಿಯ ಸಮ್ಮೇಳನದಲ್ಲಿ ಮೊಳಗಿಸುವ ಸಂಭ್ರಮ ಕನ್ನಡ ಭಾಷೆಯ ವಿಜೃಂಭಣೆ ನಡೆಯುತ್ತಿದ್ದು ಹಿರಿಯರ ನೆನಪಿನ ದ್ವಾರ ಸುಂದರವಾಗಿ ಅಲಂಕೃತಗೊಂಡಿದೆ ಸಮ್ಮೇಳನಕ್ಕೆ ಶುಭಾಶಯಗಳು ಎಂದರು*

ನೆನಪಿನ ದ್ವಾರದ ಮುಂಭಾಗದಲ್ಲಿ ಶ್ರೀ.ಮತಿ. ಗಂಗವ್ವ. ಕೊಂ. ತಿಪ್ಪಣ್ಣ ಕಡೇಮನಿ, ಮಗನಾದ ಶ್ರೀ. ಜಿ. ಟಿ. ಕಡೇಮನಿ, ಹಾಗೂ ಶ್ರೀಮತಿ.ಲಕ್ಷ್ಮಿ. ಕಡೇಮನಿ, ಕು. ವಿಜತಾ, ಕು.ಕಾರ್ತಿಕ್, ಹಾಗೂ ಶ್ರೀ. ಶಿವಾನಂದ. ಕಡೇಮನಿ, ಕುಟುಂಬದವರು ಹರ್ಷ ವ್ಯಕ್ತ ಪಡಿಸಿದರು.
ಹಾವೇರಿ ಸಮ್ಮೇಳನವು ಒಂದು ಮಾದರಿಯಾಗಿತ್ತು ವಿವಿಧ ಜಿಲ್ಲೆಗಳಿಂದ ಸಾಧಕರು ಆಗಮಿಸಿದ್ದರು ಇಂತಹ ಕಾರ್ಯಕ್ರಮದಲ್ಲಿ ನಮ್ಮ ತಂದೆಯವರ ನೆನಪಿನ ದ್ವಾರ ಮಾಡಲು ಅವಕಾಶ ನೀಡಿದ್ದಕ್ಕೆ ಬಹಳ ಖುಷಿಯಾಗಿದೆ. ಎಂದು ಪ್ರಾಂಶುಪಾಲರು, ಸ. ಪ. ಪೂ.ಮಹಾವಿದ್ಯಾಲಯ ಮುಂಡಗೋಡದ ಶ್ರೀ. ಜಿ. ಟಿ. ಕಡೇಮನಿಯವರು ತಿಳಿಸಿದರು.
ವರದಿಗಾರರು: ಬಸಯ್ಯ ತೋಟಯ್ಯನವರ
