ಲಿಂಗಸುಗೂರು, ಸೆ.21:ದಸರಾ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಭಕ್ತಿ, ಭಾವನೆ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಮಹಾಲಯಾ ಅಮಾವಾಸ್ಯೆಯಂದು ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರ ಇರುವ ತುಳಜಾ ಭವಾನಿ ದೇವಾಲಯದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರು ನಾಡದೇವತೆ ಭವಾನಿ ಮೂರ್ತಿಯನ್ನು ವೈದಿಕ ಮಂತ್ರೋಚ್ಚಾರಣೆ ನಡುವೆ ಭಕ್ತಿಭಾವದಿಂದ ಪ್ರತಿಷ್ಠಾಪನೆ ಮಾಡಿದರು.ಬೆಳಗಿನ ಜಾವವೇ ಭಕ್ತರ ಓಡಾಟದಿಂದ ದೇವಸ್ಥಾನ ಸುತ್ತಮುತ್ತ ಪ್ರದೇಶವೇ ಮೆರಗು ತಳೆದಿತ್ತು. ಸಮಾಜದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೊಸ ಉಡುಪು ತೊಟ್ಟು ಧಾರ್ಮಿಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಭವಾನಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಭಕ್ತರು ತಾವು ತಂದ ಹಾರ, ತಂಬಿಟ್ಟು, ತೆಂಗಿನಕಾಯಿ ಅರ್ಪಿಸಿ ಭಕ್ತಿಭಾವ ತೋರಿದರು.ಸಮಾಜದ ಹಿರಿಯ ಮುಖಂಡ ಕಿಶನರಾವು ಚವ್ಹಾಣ ಮಾತನಾಡಿ – “ನಾಡದೇವತೆ ಭವಾನಿ ದೇವಿಯ ಪ್ರತಿಷ್ಠಾಪನೆಯು ನಮ್ಮ ಸಮುದಾಯ ಮಾತ್ರವಲ್ಲದೆ, ಇಡೀ ಪಟ್ಟಣದ ಜನತೆಗೆ ಒಗ್ಗಟ್ಟಿನ ಸಂಕೇತವಾಗಿದೆ. ದಸರಾ ಹಬ್ಬವು ಸತ್ಯದ ಜಯ, ಧರ್ಮದ ಗೆಲುವನ್ನು ಪ್ರತಿಪಾದಿಸುವ ಹಬ್ಬ. ಎಲ್ಲರೂ ಸೇರಿ ಸಮಾಜದಲ್ಲಿ ಶಾಂತಿ, ಭ್ರಾತೃತ್ವ ಬೆಳೆಸಿಕೊಳ್ಳಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರಾದ ಅಧ್ಯಕ್ಷ ದಶರಥರಾವು ಮಿರಜಕರ, ಉಪಾಧ್ಯಕ್ಷ ಶ್ರೀನಿವಾಸ ಬುಸಾರೆ, ಖಜಾಂಚಿ ದೇವರಾಜ ಛತ್ರಭಂದ, ಕಾರ್ಯದರ್ಶಿ ಆನಂದರಾವು ಚವ್ಹಾಣ, ಸಹಕಾರ್ಯದರ್ಶಿ ನಾರಾಯಣರಾವು ಬುಸಾರೆ, ಶಾಮ ಚವ್ಹಾಣ, ರಾಘವೇಂದ್ರ ಚವ್ಹಾಣ, ಅಶೋಕ ಚವ್ಹಾಣ, ತುಕಾರಾಮ, ಸುಭಾಸ ಬುಸಾರೆ, ಹನುಮಂತರಾವು ಮಿರಜಕರ, ರಾಜಶೇಖರ, ರಾಜೇಶ್, ಮಧುಸೂದನ, ವೆಂಕಟೇಶ್, ರಂಗನಾಥ, ಶಂಕರ, ವಿಠಲ, ರಾಹುಲ್, ವಿನಯ, ವಿಕಾಸ, ವಿಜಯ, ಮಂಜುನಾಥ, ಅಂಬಾಜಿ ಹಾಗೂ ಸಮಾಜದ ಮಹಿಳೆಯರಲ್ಲಿ ಉಮಾಬಾಯಿ, ಸುಂದರಬಾಯಿ, ರತ್ನಭಾಯಿ, ರಾಜೇಶ್ವರಿ, ಜಯಶ್ರೀ, ಸಹನಾ, ಶಿಲ್ಪಾ, ಸ್ವಪ್ನ, ನಂದಿನಿ, ಸೌಮ್ಯ ಸೇರಿದಂತೆ ಅನೇಕರ ಉಪಸ್ಥಿತಿ ಗಮನಾರ್ಹವಾಗಿತ್ತು.ಅರ್ಚಕರಾದ ತಿರುಮಲರಾವು ಹಾಗೂ ಕೃಷ್ಣ ವೈದಿಕ ಮಂತ್ರೋಚ್ಚಾರಣೆ ನೆರವೇರಿಸಿದರು. ಭಕ್ತಾದಿಗಳ ಭಾರಿ ಭಾಗವಹಿಸುವಿಕೆಯಿಂದ ಹಬ್ಬದ ಸಂಭ್ರಮ ಇನ್ನಷ್ಟು ವಿಸ್ತಾರಗೊಂಡಿತು.
ವರದಿ :-ವಿಠ್ಠಲ್ ಮಟ್ಟೂರ.
