Monday, December 23, 2024
Homeರಾಜಕೀಯಸಿದ್ದರಾಮಯ್ಯ ರಾಜೀನಾಮೆ ಒತ್ತಡದ ಮಧ್ಯೆಯೇ ಕೇಳಿ ಬಂತು ಹೊಸ ಸಿಎಂ ಅಭ್ಯರ್ಥಿ ಹೆಸರು!ಹೈಕಮಾಂಡ್ ಒಲವು ಇವರ...

ಸಿದ್ದರಾಮಯ್ಯ ರಾಜೀನಾಮೆ ಒತ್ತಡದ ಮಧ್ಯೆಯೇ ಕೇಳಿ ಬಂತು ಹೊಸ ಸಿಎಂ ಅಭ್ಯರ್ಥಿ ಹೆಸರು!ಹೈಕಮಾಂಡ್ ಒಲವು ಇವರ ಕಡೆಗೇ !

ಸಿದ್ದರಾಮಯ್ಯ ರಾಜೀನಾಮೆ ಒತ್ತಡದ ಮಧ್ಯೆಯೇ ಕೇಳಿ ಬಂತು ಹೊಸ ಸಿಎಂ ಅಭ್ಯರ್ಥಿ ಹೆಸರು!ಹೈಕಮಾಂಡ್ ಒಲವು ಇವರ ಕಡೆಗೇ !ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂಗೆ ಶಾಕ್ ಮೇಲೆ ಶಾಕ್ . ಹೈಕೋರ್ಟ್ ಆದೇಶವನ್ನ ಜನಪ್ರತಿನಿಧಿಗಳ ನ್ಯಾಯಾಲಯ ಎತ್ತಿಹಿಡಿದಿದೆ.ಲೋಕಾಯುಕ್ತ ತನಿಖೆಗೂ ಆದೇಶ ಹೊರಡಿಸಿದೆ.ಸರ್ಕಾರ ಹಾಗೂ ರಾಜಭವನ ಸಮರದಲ್ಲಿ ಗವರ್ನರ್ ಮೇಲುಗೈ ಸಾಧಿಸಿದಂತಾಗಿದೆ.ಎಫ್‌ಐಆರ್‌ ದಾಖಲಿಸುವಂತೆ ಮೈಸೂರು ಲೋಕಾಯುಕ್ತ ಎಸ್‌ಪಿಗೆ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ತೀರ್ಪು ನೀಡಿದ್ದಾರೆ.ಸಿಆರ್‌ಪಿಸಿ ಸೆಕ್ಷನ್‌ 156/3 ರ ಅಡಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ.ಕೋರ್ಟ್ ಆದೇಶ ಅನ್ವಯ ಹಾಗೂ ಲೋಕಾಯುಕ್ತ ಎಡಿಜಿಪಿ ಮನೀಷ್‌ ಕರ್ಬಿಕರ್‌ ಸೂಚನೆ ಮೇರೆಗೆ ಮೈಸೂರಿನ ಲೋಕಾಯುಕ್ತ ಎಸ್‌ಪಿ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲು ಮಾಡಲಿದ್ದಾರೆ.ಇವೆಲ್ಲದರ ಮಧ್ಯೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವ ಕೂಗು ಜೋರಾಗ ತೊಡಗಿದೆ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಯೂ ಏಳುತ್ತದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ರಾಜ್ಯದ ಚುಕ್ಕಾಣಿ ಹಿಡಿಯುವ ನಾಯಕನ ಹೆಸರು ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.ಸಭೆಯಲ್ಲಿ ನಡೆದ ಮಾತುಕತೆ ಬಗ್ಗೆ ಪರಮೇಶ್ವರ್ ತುಟಿ ಬಿಚ್ಚಿಲ್ಲ.ಆದರೆ ಮೂಡಾ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣದ ಆರೋಪದ ಮೇಲೆ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಏರುವ ನಾಯಕ ಯಾರು ಎನ್ನುವ ಪ್ರಶ್ನೆ ಇದೀಗ ಎದ್ದಿದೆ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಸಂದರ್ಭ ಎದುರಾದರೆ ಆ ಸ್ಥಾನವನ್ನು ಅಲಂಕರಿಸುವ ನಾಯಕನ ಹೆಸರು ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆರಂಭದಲ್ಲಿ ಈ ಸ್ಥಾನಕ್ಕೆ ಪರಿಗಣಿಸಲಾಗಿತ್ತಾದರೂ, ಇತ್ತೀಚೆಗೆ ಅವರ ಕುಟುಂಬದವರು ನಿರ್ವಹಿಸುತ್ತಿರುವ ಟ್ರಸ್ಟ್‌ಗೆ ಕೆಐಎಡಿಬಿ ನಿವೇಶನ ಹಂಚಿಕೆಯಾಗಿದೆ ಎನ್ನುವ ವಿವಾದದ ಕರಿನೆರಳು ಖರ್ಗೆ ಮೇಲಿದೆ. ಎಂ.ಬಿ.ಪಾಟೀಲ್ ಗೂ ಭೂ ಸಂಬಂಧಿತ ಸಮಸ್ಯೆ ತಡೆಯಾಗಬಹುದು.ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಈ ಹುದ್ದೆಯನ್ನು ಅಲಂಕರಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.ಆದರೆ ಅವರನ್ನು ಈ ಸ್ಥಾನಕ್ಕೆ ಪರಿಗಣಿಸುವುದು ಕಷ್ಟ ಎನ್ನಲಾಗಿದೆ.ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ 2013ರಲ್ಲಿ ಅನಿರೀಕ್ಷಿತ ಸೋಲು ಕಂಡ ನಂತರ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಯಿತು.ಇದೀಗ ಎಲ್ಲಾ ಸಾಧ್ಯತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿದರೆ ಮೊದಲು ಕೇಳಿ ಬರುವ ಹೆಸರು ಜಿ. ಪರಮೇಶ್ವರ್.

ಹೆಚ್ಚಿನ ಸುದ್ದಿ