ಮಕ್ಕಳ ಕಲಿಕೆಗೆ ಸ್ಮಾರ್ಟ್ ಟಿ.ವಿ. ದಾನ ಮಾಡಿದ ಹಿರಿಯ ದಂಪತಿ

ಸಾಲಗಾಂವ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಲಗಾಂವದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗುವ ಉದ್ದೇಶದಿಂದ ಶ್ರೀಮತಿ ರುದ್ರಮ್ಮ ಹಾಗೂ ಶ್ರೀ ತಿಪ್ಪಣ್ಣ ಭರಮಣ್ಣ ಚಕ್ರಸಾಲಿ ದಂಪತಿ ಶಾಲೆಗೆ ಸ್ಮಾರ್ಟ್ ಟಿ.ವಿ.ಯನ್ನು ದಾನವಾಗಿ ನೀಡಿದರು.
ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತಂತ್ರಜ್ಞಾನದ ನೆರವು ಒದಗಿಸುವ ನಿಟ್ಟಿನಲ್ಲಿ ಹಿರಿಯ ದಂಪತಿಗಳು ನೀಡಿದ ಈ ಕೊಡುಗೆಯನ್ನು ಶಾಲಾ ಶಿಕ್ಷಕ ವೃಂದ ಹಾಗೂ ಎಸ್ಡಿಎಂಸಿ ಸದಸ್ಯರು ಶ್ಲಾಘಿಸಿ, ದಂಪತಿಯನ್ನು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ಗಣಪತಿ ಬಾಳಮ್ಮನವರ, ಗಣ್ಯರಾದ ಮಹಾಂತೇಶ ತಳವಾರ, ಗಣಪತಿ ಎಲಿವಾಳ, ಎಸ್ಡಿಎಂಸಿ ಅಧ್ಯಕ್ಷೆ ಚಂದ್ರಕಲಾ ಎಲಿವಾಳ, ಸಂಜೀವ ಕುಡೇನವರ, ಶಿವಾಜಿ ಬೆಂಡ್ಲಗಟ್ಟಿ, ಪವಿತ್ರಾ ಹಾನಗಲ್, ಎಲ್ವಿಕೆಯ ಡಿಮ್ನಾ ಥೋಮಸ್, ಭರಮಣ್ಣ ಚಕ್ರಸಾಲಿ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನ ಗುರುಗಳಾದ ಬಾಲಚಂದ್ರ ಹೆಗಡೆ ಸ್ವಾಗತಿಸಿದರು. ಪ್ರಕಾಶ ಏಸಪ್ಪನವರ ವಂದಿಸಿದರು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು ಸೇರಿದಂತೆ ವಿವಿಧ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಕ್ಕಳ ಶಿಕ್ಷಣಕ್ಕೆ ತಂತ್ರಜ್ಞಾನವನ್ನು ಜೋಡಿಸುವ ನಿಟ್ಟಿನಲ್ಲಿ ಹಿರಿಯ ದಂಪತಿಗಳ ಸ್ಮಾರ್ಟ್ ಟಿ.ವಿ. ಕೊಡುಗೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.
