Monday, February 9, 2026
Homeಜಿಲ್ಲಾ ಸುದ್ದಿಗಳುಶಾಸಕರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ. 1983 ರಿಂದ 1993ರ ಸಾಲಿನ ಶಾಲೆಯ...

ಶಾಸಕರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ. 1983 ರಿಂದ 1993ರ ಸಾಲಿನ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನದ ಕಾರ್ಯಕ್ರಮ ಜರುಗಿತು…

ಕೂಪ್ಪಳ: ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಗರದಲ್ಲಿ ಡಿಸೆಂಬರ್ 28 ರಂದು 10.00 ಗಂಟೆಗೆ 1983 ರಿಂದ 1993ರ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು ಶಾಲೆಯ ಗುರು ಬಳಗಕ್ಕೆ ಗೌರವವನ್ನು ಸಲ್ಲಿಸುವ ಮೂಲಕ ಶಿಕ್ಷಣ ಮತ್ತು ಶಿಕ್ಷಕರ ಮಹತ್ವದ ಬಗ್ಗೆ ಯುವ ಪೀಳಿಗೆಗೆ ತಿಳಿಸಲಾಯಿತು.

ಅಗಲಿದ ಗುರು ವೃಂದಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗಣ್ಯ-ಮಾನ್ಯರು ಮತ್ತು ಗುರುಹಿರಿಯರು ಚಾಲನೆ ನೀಡಿದರು.

ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನದಲ್ಲಿ ನಮ್ಮನ್ನಗಲಿದ ಗುರುಗಳಿಗೆ ಹಾಗೂ ಸ್ನೇಹ ಬಳಗಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣವಾಗಿ ನಮನ ಸಲ್ಲಿಸಿ ಹಾಗೂ ಒಂದು ನಿಮಿಷದ ಮೌನಚರಣೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಕೊರಲಾಯಿತು, ಮುಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೇರವೆರಿಸಲಾಯಿತು..

ಹಳೆಯ ವಿದ್ಯಾರ್ಥಿಗಳು ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಮತ್ತು ಗುರು ವಂದನೆ ಸಲ್ಲಿಸಿದರು, ನಗರದ ಸಾರ್ವಜನಿಕರು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮವು ವಿಶೇಷಗೊಳಿಸಿದರು
ಹಳೆಯ ವಿದ್ಯಾರ್ಥಿಗಳು ತಮ್ಮ ಹಳೆಯ ಶಾಲಾ ದಿನಗಳ ನೆನಪುಗಳನ್ನು ಮುಖ್ಯ ವೇದಿಕೆಯ ಮೇಲೆ ಹಂಚಿಕೊಂಡರು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ