Friday, March 27, 2026
HomeUncategorizedಶಬರಿಮಲೆ ದೇವಸ್ಥಾನದ ವಾರ್ಷಿಕ ಯಾತ್ರೆ ಇಂದಿನಿಂದ ಆರಂಭ: ಪಂಪಾ ತೀರದಲ್ಲಿ ಭಕ್ತರ ದಂಡು.

ಶಬರಿಮಲೆ ದೇವಸ್ಥಾನದ ವಾರ್ಷಿಕ ಯಾತ್ರೆ ಇಂದಿನಿಂದ ಆರಂಭ: ಪಂಪಾ ತೀರದಲ್ಲಿ ಭಕ್ತರ ದಂಡು.

ಶಬರಿಮಲೆ ದೇವಸ್ಥಾನದ ವಾರ್ಷಿಕ ಯಾತ್ರೆ ಇಂದಿನಿಂದ ಆರಂಭ: ಪಂಪಾ ತೀರದಲ್ಲಿ ಭಕ್ತರ ದಂಡು ದೇಶದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲೊಂದಾದ ಶಬರಿಮಲೆಯ ದೇಗುಲ ಇಂದು ತೆರೆಯಲಿದ್ದು,ಮಂಡಳ ಪೂಜೆ ಪ್ರಾರಂಭವಾಗಲಿದೆ.ಭಕ್ತಾದಿಗಳು ಮಧ್ಯಾಹ್ನ 1.00 ಗಂಟೆಯಿಂದ ಪಂಪಾ ನದಿಯಿಂದ ಶಬರಿಮಲೆ ಯಾತ್ರೆ ಪ್ರಾರಂಭಿಸಬಹುದಾಗಿದೆ. ಆನ್‌ಲೈನ್ ಮೂಲಕ ಮುಂಗಡ ಬುಕಿಂಗ್ ಸೌಲಭ್ಯ ನೀಡಲಾಗಿದೆ. ನವೆಂಬ‌ರ್ ತಿಂಗಳ ಬುಕಿಂಗ್ ಭರ್ತಿಯಾಗಿದೆ. ಕೇವಲ ನ.30 ರ ಕೆಲವು ಸ್ಲಾಟ್ ಗಳು ಮಾತ್ರ ಲಭ್ಯವಿದೆ. ಡಿಸೆಂಬರ್ ತಿಂಗಳಲ್ಲಿ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಸರದಿಯಲ್ಲಿದ್ದಾರೆ. ಈಗಾಗಲೇ ಮುಂಗಡ ಬುಕಿಂಗ್ ಮಾಡಿರುವ ಭಕ್ತರು ಒಂದು ವೇಳೆ ತಮ್ಮ ಪ್ರಯಾಣ ರದ್ದಾದರೆ ಅಥವಾ ಮುಂದೂಡಿಕೆಯಾದರೆ ತಮ್ಮ ಸ್ಲಾಟ್ ಕ್ಯಾನ್ಸಲ್ ಮಾಡಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ.ನೇರವಾಗಿ ದರ್ಶನಕ್ಕೆ ಬರುವ ಭಕ್ತರು ತಮ್ಮ ಆಧಾರ್ ಕಾಡ್, ವೋಟರ್ ಐಡಿ ಅಥವಾ ಪಾಸ್ ಪೋರ್ಟ್ ಗುರುತಿನ ಚೀಟಿಯ ನಕಲು ತರಬೇಕು. ಪಂಪಾ ನದಿಯ ಬಳಿ 7 ಸಾವಿರ ಯಾತ್ರಿಕರಿಗೆ ಹಾಗೂ ನೀಲಕ್ಕಲ್ ಬಳಿ 8 ಸಾವಿರ ಯಾತ್ರಿಕರಿಗೆ ವಾಸ್ತವ್ಯದ ಅನುಕೂಲ ಕಲ್ಪಿಸಲಾಗಿದೆ.

ಹೆಚ್ಚಿನ ಸುದ್ದಿ