ವಿಜಯಪುರ ಫೆ 26 : ಸಮಾಜದ ಸಮಗ್ರ ಅಭಿವೃದ್ಧಿಯ ಚಿಂತಕರು ಸ್ನೇಹ ಗಂಗಾವಾಹಿನಿ ಸಂಘದ ಸಂಸ್ಥಾಪಕರಾದ ದಿವಂಗತ ಎಸ ಎಸ ಆಲಗೂರ ರವರ 99 ನೇ ವರ್ಷದ ಜನ್ಮದಿನಾಚರಣೆಯನ್ನು ದಿನಾಂಕ 02-03-2025 ರವಿವಾರ ವಿಜಯಪುರ ನಗರದ ವಿಕಾಶ ಸ್ಕೂಲ್ ನಲ್ಲಿ ನೇಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪ್ರೋ ಎಸ ಎಸ ಆಲಗೂರ ಮೆಮೊರಿಯಲ್ ಫೌಂಡೇಷನ್ ನವರು ಸಮಾಜದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಾಹಣೆ ಮಾಡುವ ಸಾಮಾಜಿಕ ಅಭಿವೃದ್ಧಿ ಚಿಂತಕರಿಗೆ ಕ್ರೀಯಾ ಚಿಂತಕ ಪ್ರಶಸ್ತಿ ನೀಡಲಿದ್ದು ಈ ಪ್ರಶಸ್ತಿಯನ್ನು ವಿಕಸ ಸ್ಕೂಲ್ ಸಂಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅಕ್ಷರ ಕ್ರಾಂತಿ ಮಾಡಿತ್ತಿರುವ ಎಸ ಜಿ ತೋಣಸಿಹಾಳ ರವರಿಗೆ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನವನ್ನು ಶ್ರೀ ಶಿವಶಂಕರ ಶಿವಬಾಲಪ್ಪ ಡೊಮನಾಳ ನಿವೃತ್ತ ಶಿಕ್ಷಕರು, ಶ್ರಿ ಕೆ ಎಪ ಅಂಕಲಗಿ ಹಿರಿಯ ನ್ಯಾಯವಾದಿಗಳು, ಡಾ.ಪ್ರಲ್ಹಾದ ಬೋವಿ ದಿವ್ಯ ದರ್ಶನ ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಬಾಗಲಕೋಟ,ಬಸವರಾಜ ನಾಯ್ಕೋಡಿ ಅಧ್ಯಕ್ಷರು ಕುವೆಂಪು ವಿದ್ಯಾ ಸಂಸ್ಥೆ ತಾಳಿಕೋಟೆ,ಶ್ರೀ ಚಂದ್ರಶೇಖರ ಮೊಗೇರ ಅಧ್ಯಕ್ಷರು ಜೀವನದೀಪ ಪಬ್ಲಿಕ್ ಸ್ಕೂಲ್ ವಿಜಯಪುರ ಈ ಗಣ್ಯರಿಗೆ ಮಾಡಲಿದ್ದಾರೆ
ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಸಿದ್ದಣ್ಣ ಉತ್ನಾಳ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಅಧ್ಯಾಪಕರಾದ ಎಲ್ ,ಬಿ ಹಿಟ್ಟಿನ,ವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಪ್ರೋ ಎಸ ಎಸ.ಆಲಗೂರ ಮೆಮೋರಿಯಲ್ ಫೌಂಡೇಷನ್ ಸದಸ್ಯರಾದ ಶ್ರೀಮತಿ ಡಾ.ವೀಣಾ ಬ ಯರಗೋಳ ಹೇಳಲ್ಲಿದ್ದಾರೆ. ಮುಖ್ಯ ಅಥಿತಿಗಳಾಗಿ ಯಲ್ಲಪ್ಪ ತಳವಾರ ಪ್ರಭಾರಿ ಪ್ರಾಚಾರ್ಯರು ಸರಕಾರಿ ಪ ಪೂ ಕಾಲೇಜ ಕಮಾಲಾಪು, ಗೌರವ ಉಪಸ್ಥಿತಿ
ಶ್ರೀ ಎಸ ಎಂ ಕಣಬೂರ ನಿವೃತ್ತ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ,
ಸಿ ಎಂ ಪಟೇದಾರ, ಸಂಗಮೇಶ ಬಾದಮಿ, ಶಿವಲಿಂಗಪ್ಪ ಮಸರಬೋ, ಸಿದ್ದಣ್ಣ ಮಹಾಗಾಂವ ಹಿರಿಯ ಪಶು ಪರಿಕ್ಷಾಣಾಧಿಕಾರಿಗಳು ಕಲಬುರಗಿ,ಉಪಸ್ಥಿತವಿರುವರು
ಕಾರ್ಯಕ್ರಮವನ್ನು ಎಸ ಎಸ ಆಲಗೂರ ಮೆಮೋರಿಯಲ್ ಫೌಂಡೇಷನ್ ಅಧ್ಯಕ್ಷತರಾದ ಶ್ರೀಮತಿ ಸರೋಜಿನಿ ಎಸ .ಎಚ.ಗಣಪೂರ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವ್ಹಿ ಎಸ್ ಆಲಗೂರ,ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ಬಸವರಾಜ ಯರಗೋಳ ಸಹ
ಸಂಚಾಲಕರಾದ ಶ್ರಿಮತಿ ಪೂರ್ಣಿಮಾ ನಾಮದಾರ ಶ್ರೀಮತಿ ಶಿಲ್ಪಾರಾಣಿ ಮುನಿ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಅಂಜನ ಕೆ ಹೆಬ್ಬಾಳ ಶ್ರೀ ಮತಿ ಸಾವಿತ್ರಿ ಎನ ಯರಗೋಳ ನೇಡಸಿಕೋಡಲಿದ್ದು ಸಮಾಜದ ಅಭಿವೃದ್ಧಿ ಚಿಂತಕರು ಸಂಘ ಸಂಸ್ಥೆ ಅಧ್ಯಕ್ಷರು ಸದಸ್ಯರು ತಳವಾರ ಸಮಾಜ ಮುಖಂಡರು ಕೋಲಿ ಸಮಾಜದ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸುವಂತೆ ಕೋರಿದ್ದಾರೆ