
ವಿಜಯಪುರ: ಜಿಲ್ಲೆಯ ಕಾಸಿನಕುಂಟೆ ಗ್ರಾಮದ ಕುಮಾರಿ: ರೇಣುಕಾ ಮೇಟಿ ಹಾಗೂ ಕಾಳಗಿ ಗ್ರಾಮದ ಬಸ್ಸವ್ವ್ ಮಾದರ ಅವರಿಗೆ ಮನೆ ಹಸ್ತಾಂತರ ಮಾಡಲಾಯಿತು ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯಕ ರವರು ನೆರವೇರಿಸಿ ಮಾತೃ ಶ್ರೀ ಹೇಮಾವತಿ ಅಮ್ಮನವರು ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗದ ಕನಿಷ್ಠ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳಲು ಸಾಮರ್ಥ್ಯ ವಿಲ್ಲದ ಸುಮಾರು 18000 ಜನರಿಗೆ ಪ್ರತಿ ತಿಂಗಳು ಮಾಶಾಸನವನ್ನು ನೀಡುತ್ತಿದ್ದು ಅಲ್ಲದೆ ವಾಸವಿರಲು ಮನೆ ಇಲ್ಲದ ಫಲಾನುಭವಿಗಳಿಗೆ ಯೋಜನೆಯಿಂದ ವಾತ್ಸಲ್ಯ ಮನೆಯನ್ನು ರಚನೆ ಮಾಡಿ ನೀಡುತ್ತಿದ್ದು ಇದುವರೆಗೆ ಸುಮಾರು ಜಿಲ್ಲೆಯಲ್ಲಿ 25 ಮನೆ ರಚನೆ ಮಾಡಿ ಕೊಡಲಾಗಿದೆ ತಾಲೂಕಿನಲ್ಲಿ 92 ಮಾಶಾಸನ ಫಲಾನುಭವಿಗಳಿಗೆ ತಿಂಗಳಿಗೆ 1000 ದಂತೆ ನೀಡುತ್ತಿದೆ ಅದರಂತೆ ತಮ್ಮನ್ನು ಯಾರು ನೋಡಿಕೊಳ್ಳಲು ಇಲ್ಲದೆ ಇರುವ ಕುಮಾರಿ: ರೇಣುಕಾ ಮೇಟಿ ಅವರಿಗೆ ರೂ 135,000 ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದ್ದು ಜೀವನದ ಉಳಿದ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತಾಗಲಿ ಎಂದು ತಿಳಿಸುತ್ತಾ ರೇಣುಕಾಮೇಟಿ ಅವರಿಗೆ ಊರಿನ ಎಲ್ಲರೂ ಸಹಾಯ ಸಹಕಾರ ನೀಡಬೇಕೆಂದರು ಅಲ್ಲದೆ ಯೋಜನೆಯ ವತಿಯಿಂದ ನಡೆಯುವ ಅನೇಕ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ದಲ್ಲಿ ಉಪಸ್ಥಿತರಿರುವ ವಿಜಯಪುರ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ಶ್ರೀಶೈಲ್ ದೊಡ್ಮನಿ ಅವರು ಮಾತನಾಡುತ್ತಾ ಆಡು ಮಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡದೇ ಇರುವ ಕಾರ್ಯಕ್ರಮಗಳಿಲ್ಲ. ಸಮಾಜದ ಆಶಕ್ತರಿಗೆ ಯೋಜನೆಯ ಕಾರ್ಯಕರ್ತರ ಮೂಲಕ ಸೇವಾ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ ಎಂದು ತಿಳಿಸಿದರು ಮತ್ತು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ, ಯೋಜನಾಧಿಕಾರಿ ಶ್ರೀ ಶಿವಾನಂದ ಪಿ ರವರು ಊರಿನ ಮುಖಂಡರು ವಲಯದ ಮೇಲ್ವಿಚಾರಕರಾದ ಜಗದೀಶ್ ಕೃಷಿ ಮೇಲ್ವಿಚಾರಕ ದೇವೇಂದ್ರ ಜ್ಞಾನವಿಕಾಸ ಸಮನ್ವಧಿಕಾರಿಗಳು ಸುಜಾತ ನಾಯಕ್ ಸೇವಾ ಪ್ರತಿನಿಧಿ ಸಂಗೀತ ಸಂಘದ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು
ಸಂಪಾದಕರು : ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)
