Monday, February 9, 2026
HomeUncategorized'ವಿಎಂಸಿಎ ಕಪ್' ಅಂತರ-ಕ್ಲಬ್ ಆಹ್ವಾನ ಕ್ರಿಕೆಟ್ ಸಮರ್ಥ ಕೊಟಬಾಗಿಗೆ 'ಹ್ಯಾಟ್ರಿಕ್' ಸಹಿತ 'ಫೈಫರ್':ಸಿಸಿಕೆಗೆ ಜಯ

‘ವಿಎಂಸಿಎ ಕಪ್’ ಅಂತರ-ಕ್ಲಬ್ ಆಹ್ವಾನ ಕ್ರಿಕೆಟ್ ಸಮರ್ಥ ಕೊಟಬಾಗಿಗೆ ‘ಹ್ಯಾಟ್ರಿಕ್’ ಸಹಿತ ‘ಫೈಫರ್’:ಸಿಸಿಕೆಗೆ ಜಯ

ಹುಬ್ಬಳ್ಳಿ: ಪ್ರತಿಭಾನ್ವಿತ ಲೆಗ್ ಸ್ಪಿನ್ನರ್ ಸಮರ್ಥ ಕೊಟಬಾಗಿ ‘ಹ್ಯಾಟ್ರಿಕ್’ ಸಹಿತ ‘ಫೈಫರ್’ ದಾಖಲಿಸುವುದರೊಂದಿಗೆ ನಗರದ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್ ಎದುರು ‘ಎ’ ಗುಂಪಿನಲ್ಲಿ 192 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿಸಿಕೆ), ಭಾನುವಾರ ಇಲ್ಲಿ ಪ್ರಾರಂಭವಾದ 12 ವರ್ಷದವರೊಳಗಿನ ‘విఎంసిఎ ಕಪ್’ ಅಂತರ-ಕ್ಲಬ್ ಆಹ್ವಾನ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನಾರಂಭ ಕಂಡಿತು.

ಕರ್ನಾಟಕ ಜಿಮಖಾನಾ ಮೈದಾನ ದಲ್ಲಿ ಟಾಸ್ ಸೋತು ಬ್ಯಾಟಿಂಗಿಗಿಳಿಸಲ್ಪಟ್ಟ ಸಿಸಿಕೆ ನಾಯಕ ಸೌರವ ಸಬರದ(80, 87 ಎಸೆತ, 13 ಬೌಂಡರಿ) ಹಾಗೂ ಸನತ್ ಗಾಂವಕರ ಔಟಾಗದೇ 52, 31 ಎಸೆತ, 11 ಬೌಂಡರಿ) ಅರ್ಧ ಶತಕಗಳ ನೆರವಿನಿಂದ ನಿಗದಿತ 25 ಓವರ್‌ಗಳಲ್ಲಿ ಹೃಷಿಕೇಷ ಶೆಟ್ಟಿ ( 36, 41 ಎಸೆತ, 6 ಬೌಂಡರಿ) ವಿಕೆಟ್ ಕಳೆದುಕೊಂಡು 228ರ ಮೊತ್ತ ತಲುಪಿತು. ಉತ್ತರವಾಗಿ ಸಮರ್ಥ ಕೊಟಬಾಗಿ ‘ಹ್ಯಾಟ್ರಿಕ್’ ಸಹಿತ ‘ಫೈಫರ್'(2.1 ಓವರ್‌ಗಳಲ್ಲಿ 3 ರನ್‌ಗಳಿಗೆ 5 ವಿಕೆಟ್) ಮಾರಕ ದಾಳಿಯೆದುರು ನಲುಗಿದ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್ ತಂಡ 12.5 ಓವರ್‌ಗಳಲ್ಲಿ ಕೇವಲ 36ಕ್ಕೆ ಸರ್ವಪತನ ಕಂಡಿತು. ಒಟ್ಟು ಮೂರು ಕ್ಯಾಚ್, ಎರಡು ರನೌಟ್ ಹಾಗೂ ಒಂದು ಸ್ಪಂಪಿಂಗ್ ಮಾಡಿದ ಪ್ರೀತಮ್ ದಫೇದಾರ ವಿಕೆಟ್ ಹಿಂದೆ ಮಿಂಚಿದರು. ಮಧ್ಯಾಹ್ನ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ತೇಜಲ್ ಕ್ರಿಕೆಟ್ ಅಕಾಡೆಮಿ(ಟಿಸಿಎ) ಇಲ್ಲಿಯದೇ ಆದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್‌ಸಿಎ) ಎದುರು 82 ರನ್‌ಗಳ ಜಯ ಸಂಪಾದಿಸಿತು. ಮೂರನೇ ಕ್ರಮಾಂಕದ ಬ್ಯಾಟರ್ ಅಮಯ ಗಂಗೊಳ್ಳಿ(ಔಟಾಗದೇ 107, 74 ಎಸೆತ, 19 ಬೌಂಡರಿ) ಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಟಿಸಿಎ 2 ವಿಕೆಟ್‌ಗಳಿಗೆ 213ರ ಸ್ಕೋರು ತಲುಪಿದರೆ, ಉತ್ತರವಾಗಿ ಎಚ್‌ಸಿಎ 9 ವಿಕೆಟ್‌ಗಳನ್ನು ಕಳೆದುಕೊಂಡು 131 ರನ್ ಮಾತ್ರ ಸಂಪಾದಿಸಿತು.

ವರದಿಗಾರರು : ಹನಮಂತ ಬಿರಾದಾರಪಾಟೀಲ

ಹೆಚ್ಚಿನ ಸುದ್ದಿ