ಶಿಗ್ಗಾಂವಿ: ಶಾಸಕ ಯಾಸೀರ್ ಅಹಮ್ಮದ್ ಖಾನ್ ಪಠಾಣ್ ಅವರ 45ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರವು ಅಭೂತಪೂರ್ವ ಯಶಸ್ಸು ಕಂಡಿದ್ದು, ಒಟ್ಟು 737 ಯುನಿಟ್ ರಕ್ತ ಸಂಗ್ರಹವಾಗಿದೆ.


ಹುಟ್ಟುಹಬ್ಬವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತಗೊಳಿಸದೆ ಸಮಾಜಮುಖಿಯಾಗಿ ಆಚರಿಸುವ ಉದ್ದೇಶದಿಂದ “ಒಂದು ರಕ್ತದಾನ – ಅನೇಕ ಜೀವಗಳ ಜೀವದಾನ” ಹಾಗೂ “ರಕ್ತದಾನ ಮಾಡಿ ಜೀವ ಉಳಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ಈ ಬೃಹತ್ ಶಿಬಿರವನ್ನು ಆಯೋಜಿಸಲಾಗಿತ್ತು.
ಕ್ಷೇತ್ರದ ವಿವಿಧ ಗ್ರಾಮ ಹಾಗೂ ಪಟ್ಟಣಗಳಿಂದ ಸಾರ್ವಜನಿಕರು ಮತ್ತು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.
ಪ್ರದೇಶವಾರು ರಕ್ತ ಸಂಗ್ರಹದ ವಿವರ (ಯುನಿಟ್ಗಳಲ್ಲಿ):
ಹೂತನಹಳ್ಳಿ:150, ಸವಣೂರು: 108, ಶಿಗ್ಗಾಂವಿ: 105, ತಡಸ: 105, ಧುಂಡಶಿ: 76, ಹುಲಗೂರ: 76
,ಹುರಳಿಕುಪ್ಪಿ: 67, ಕಾರಡಗಿ: 50 ಪ್ರಕಾರದಲ್ಲಿ ಆಯಾ ಭಾಗದ ಕಾಂಗ್ರೇಸ ಮುಖಂಡರು ಸದಸ್ಯ ಕಾರ್ಯದರ್ಶಿಗಳ ಸಂಯೋಗದಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ವರದಿಗಾರರು: ಸೋಮಶೇಖರ ಲಮಾಣಿ
