Sunday, July 26, 2026
Homeಕ್ರೈಂ ಸುದ್ದಿಗಳುಯಾದಗಿರಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಯಾದಗಿರಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಯಾದಗಿರಿ:
ನಗರದ ಮಹಿಳಾ ಠಾಣೆಯಲ್ಲಿ ಗಂಭೀರ ಪ್ರಕರಣವೊಂದು ದಾಖಲಾಗಿದ್ದು, ಯುವತಿಯೊಬ್ಬರ ಮೇಲೆ ಇಬ್ಬರು ಆರೋಪಿಗಳು ಸೇರಿ ಬಲವಂತವಾಗಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.
ದೂರುದಾರಳಾದ ಮಾಳಮ್ಮ (24), ಕೂಲಿ ಕಾರ್ಮಿಕೆಯಾಗಿದ್ದು, ಬಂದಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 3 ರಂದು ಸಂಜೆ ಹೊನಿಗೇರಾ ರಸ್ತೆಯ ಬಳಿಯ ಬಯಲು ಪ್ರದೇಶದಲ್ಲಿ ಘಟನೆ ನಡೆದಿದೆ. ಈ ವೇಳೆ ಬಸಪ್ಪ ಮತ್ತು ರೆಡ್ಡಪ್ಪ ಎಂಬ ಇಬ್ಬರು ಆರೋಪಿಗಳು ಯುವತಿಯನ್ನು ತಡೆದು, ಅವಾಚ್ಯವಾಗಿ ನಿಂದಿಸಿ, ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಘಟನೆ ಕುರಿತು ಯಾರಿಗಾದರೂ ಮಾಹಿತಿ ನೀಡಿದರೆ ಪ್ರಾಣ ಹಾನಿ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದರೆಂದು ಹೇಳಲಾಗಿದೆ.
ಈ ದೂರಿನ ಆಧಾರದಲ್ಲಿ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಪಟ್ಟ ಕಲಂಗಳು ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ.
ಈ ಕುರಿತು ಮಹಿಳಾ ಠಾಣೆಯ ಪಿಎಸ್‌ಐ ಮಂಜುಳಾ ಅವರು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು; ಆರೋಪಿಗಳಿಗಾಗಿ ಹುಡುಕಾಟ.

ಹೆಚ್ಚಿನ ಸುದ್ದಿ