

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ನಾಯಕ, ಮಹಾನ್ ದೇಶಭಕ್ತ ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್ ಅವರ 143ನೇ ಜನ್ಮದಿನೋತ್ಸವವನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ವಿಜೃಂಭಣೆಯಿಂದ ಆಚರಿಸಿದರು.
ಯಲಹಂಕ ಉಪನಗರದ ವೀರ ಸಾವರ್ಕರ್ ಸೇತುವೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಸಾವರ್ಕರ್ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸಿ ನಮನ ಸಲ್ಲಿಸಿದರು.
ಶಾಸಕ ವಿಶ್ವನಾಥ್ ಅವರು ಮಾತನಾಡಿ, “ಸ್ವಾತಂತ್ರ್ಯವೀರ ಸಾವರ್ಕರ್ ಅವರು ‘ಹಿಂದೂತ್ವ’ದ ಮೂಲಕ ರಾಷ್ಟ್ರೀಯತೆಯ ಬೀಜ ಬಿತ್ತಿದ ಮಹಾನ್ ಚಿಂತಕರು. ಅವರ ತ್ಯಾಗ, ದೇಶಭಕ್ತಿ ಮತ್ತು ಅಖಂಡ ಭಾರತದ ಕನಸು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ. ಕಾಂಗ್ರೆಸ್ ಸರ್ಕಾರ ಸಾವರ್ಕರ್ ಅವರನ್ನು ಅಪಮಾನಿಸುತ್ತಿರುವುದನ್ನು ದೇಶದ ಜನತೆ ಕ್ಷಮಿಸುವುದಿಲ್ಲ” ಎಂದು ಹೇಳಿದರು.
ಯಲಹಂಕ ಮಂಡಲ ಯುವ ಮುಖಂಡ ಅಲೋಕ್ ವಿಶ್ವನಾಥ್ ರವರ ನೇತೃತ್ವದಲ್ಲಿ ಅಧ್ಯಕ್ಷ ಮುನಿರಾಜು, ಮಂಡಲ ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್, ಎಸ್.ಎನ್.ರಾಜಣ್ಣ ,
ವಸಂತ್ ವೈ.ಜಿ., ಯುವ ಮೋರ್ಚಾ ಅಧ್ಯಕ್ಷ ಕಿರಣ್, ಬಿಜೆಪಿ ಯುವ ಮೋರ್ಚಾ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. “ಭಾರತೀಯ ಜನತಾ ಪಾರ್ಟಿ, ಯಲಹಂಕ ನಗರ ಮಂಡಲ ಯುವ ಮೋರ್ಚಾ” ಬ್ಯಾನರ್ ಹಿಡಿದು ಕಾರ್ಯಕರ್ತರು ಮೆರವಣಿಗೆ ನಡೆಸಿ, ಸಾವರ್ಕರ್ ಅವರ ಘೋಷಣೆಗಳನ್ನು ಕೂಗಿದರು.
