Thursday, May 21, 2026
Homeಜಿಲ್ಲಾ ಸುದ್ದಿಗಳುಮೊಹಸಿನ ಎ ಆಜಮ್‌ ಸಂಸ್ಥಾಪಕ, ಅಧ್ಯಕ್ಷ ಹಜರತ ಹಸನ ಅಸ್ಕರಿಮಿಯವರಿಂದ ನಜೀರುದ್ದಿನ ತಾಡಪತ್ರಿ ಯವರಿಗೆ ಸನ್ಮಾನ....

ಮೊಹಸಿನ ಎ ಆಜಮ್‌ ಸಂಸ್ಥಾಪಕ, ಅಧ್ಯಕ್ಷ ಹಜರತ ಹಸನ ಅಸ್ಕರಿಮಿಯವರಿಂದ ನಜೀರುದ್ದಿನ ತಾಡಪತ್ರಿ ಯವರಿಗೆ ಸನ್ಮಾನ….

ಮುಂಡಗೋಡ : ಭಾನುವಾರ ಪಟ್ಟಣದ ದರ್ಗಾ ಮೈದಾನದಲ್ಲಿ ನಡೆದ ಮೊಹಸಿನ ಎ ಆಜಮ್‌ ಮಿಶನ್‌ ಕಾನಫರನ್ಸ್‌ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಮಾಣಿಕವಾಗಿ ಸಮಾಜದ ಸೇವೆ ಮಾಡುತ್ತಿರುವರನ್ನು ಹಾಗೂ; ಮೊಹಸಿನ -ಎ- ಆಜಮ್‌ ಮಿಶನ್‌ಕ್ಕೆ ತಮ್ಮ ಸೇವೆ ನೀಡಿದವರಿಗೆ ಮೊಹಸಿನ್‌ ಆಜಮ್‌ ಸದಸ್ಯರು ಗುರುತಿಸಿ ಕೇವಲ ನಾಲ್ಕು ಜನರಿಗೆ ಮೊಹಸಿನ್‌-ಎ-ಆಜಮ್‌ ಮಿಶನ್‌ ಸಂಸ್ಥಾಪಕ ಅಧ್ಯಕ್ಷರಾಗಿರುವ ಹಜರತ ಹಸನ ಅಸ್ಕರಿಮಿಯವರಿಂದ ಹಿದಾ ಅಕ್ಕಿಆಲೂರ, ಶಕೀಲ್‌ ಖಾಜಿ,ನಜೀರು;ದ್ದಿನ ತಾಡಪತ್ರಿ ತೋಸಿಫ್‌ ಸೊನಾರ್‌, ಮುನ್ನಾ ದರ್ಗಾವಾಲೆ ಸನ್ಮಾನಕ್ಕೆ ಒಳಪಟ್ಟವರಾಗಿದ್ದಾರೆ.

ಸನ್ಮಾನಕ್ಕೆ ಒಳಪಟ್ಟವರಲ್ಲಿ ಮುಂಡಗೋಡಿನ ಏಕೈಕ್‌ ಮುಸ್ಲಿಂ ಸಮಾಜದ ವರದಿಗಾರ ನಜೀರುದ್ದಿನ ತಾಡಪತ್ರಿಯವರ ಸೇವೆಯನ್ನು ಮೊಹಸಿನ್‌ ಎ ಆಜಮ್‌ ಹಾಡಿ ಹೊಗಳಿದರು

ತಾಡಪತ್ರಿಯವರು ಎಲ್ಲಾ ಸಮಾಜದವರ ಸಭೆ ಸಮಾರಂಭಗಳ ಕಾರ್ಯಗಳನ್ನು ಪತ್ರಿಕೆಯಲ್ಲಿ ಬರೆಯುತ್ತಾರೆ ಹಾಗೂ ನಮ್ಮ ಸಂಸ್ಥೆಯ ಮೊಹಸಿನ್‌ ಎ ಆಜಮ್‌ ಮಿಶನ್‌ನ ಕೆಲಸ ಕಾರ್ಯಗಳ ಕುರಿತು ಕಾಳಜಿವಹಿಸಿ ಮಿಶನ್‌ ಸಮಾಜಕ್ಕೆ ನೀಡುತ್ತಿರುವ ಕೊಡಗೆಗಳ ಕುರಿತು ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತೆ ಪತ್ರಿಕೆಯಲ್ಲಿ ಬರೆದು ತಿಳಿಸುತ್ತಾರೆ ಅವರಿಗೆ ನಮ್ಮ ಮೊಹಸಿನ ಆಜಮ್‌ ಮಿಶನ್‌ ಗೌರವಿಸಬೇಕೆಂದು ತಿರ್ಮಾನಿಸಿ ಮೊಹಸಿನ ಎ ಅಜಮ್‌ ಮಿಶನ್‌ನ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಿಂದ ಪರವಾನಿಗೆ ಪಡೆದು ಅವರಿಂದಲೇ ಗೌರವಿಸಬೇಕೆಂದು ತಿರ್ಮಾನಿಸಿ ತಾಡಪತ್ರಿಯವರನ್ನು ಗೌರವಿಸಲಾಗುತ್ತಿದೆ ಹಾಫೀಜ್‌ಸಯ್ಯದ ಸರ್ಫಾರಾಜ್‌ ಮಕಾನದಾರ ತುಂಬಿದ ಸಭೆಯಲ್ಲಿ ಹೇಳಿದರು.

ನಮ್ಮ ಮಿಶನ್‌ ಸಂಸ್ಥಾಪಕ ಅಧ್ಯಕ್ಷರಾದ ಹಜರತ ಹಸನ ಅಸ್ಕರಿಮಿಯವರಿಂದ ಸನ್ಮಾನಕ್ಕೆ ಒಳಪಟ್ಟವರಿಗೆ ದೇವರ ಅನುಗ್ರಹ ಇರುತ್ತದೆ. ಅಲ್ಹಾ ಈ ಗೌರವ ಹಜರತ ಹಸನ ಅಸ್ಕರಿಮಿಯವರಿಂದ ನಜೀರುದ್ದಿನ ತಾಡಪತ್ರಿಯವರಿಗೆ ಕೊಡಬೇಕೆಂದು ತಿರ್ಮಾನಿಸಿದ್ದರಿಂದ ತಾಡಪತ್ರಿಯವರು ಗೌರವಕ್ಕೆ ಒಳಪಟ್ಟರು ಎಂದು ಸಭೆಯಲ್ಲಿದ್ದ ಬಹುತೇಕರು ಹೇಳಿದರು

ವರದಿಗಾರರು:ಬಸಯ್ಯ ತೋಟಯ್ಯನವರ

ಹೆಚ್ಚಿನ ಸುದ್ದಿ