Wednesday, August 12, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಮುಂದಿನ ಭವಿಷ್ಯಕ್ಕಾಗಿ ಪರಿಸರ ಉಳಿಸಿಕೊಳ್ಳಬೇಕು: ಪರಿಸರ ಅಧಿಕಾರಿ ಬಿ. ಕೆ ಸಂತೋಷ್

ಮುಂದಿನ ಭವಿಷ್ಯಕ್ಕಾಗಿ ಪರಿಸರ ಉಳಿಸಿಕೊಳ್ಳಬೇಕು: ಪರಿಸರ ಅಧಿಕಾರಿ ಬಿ. ಕೆ ಸಂತೋಷ್

ಕಾರವಾರ, ಜೂ.05:- ಪ್ರಕೃತಿಯಿಂದ ಪ್ರೇರೆಣಿತರಾಗಿ ನಾವು ಹವಾಮಾನಕ್ಕಾಗಿ ಮುಂದಿನ ಭವಿಷ್ಯಕ್ಕಾಗಿ ಪರಿಸರ ಉಳಿಸಿಕೊಳ್ಳಬೇಕು, ಪಂಚ ಭೂತಗಳಾದ ವಾಯು, ಬೆಂಕಿ, ವiಣ್ಣು, ಆಕಾಶ, ಭೂಮಿ ಇವುಗಳನ್ನು ಉಳಿಸಲೂ ನಾವು ಸುಸ್ಥೀರಾ ಅಭಿವೃದ್ಧಿ ಆಗಬೇಕು ಎಂದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರ ಬಿ. ಕೆ ಸಂತೋಷ್ ಹೇಳಿದರು.

ಅವರು ಶುಕ್ರವಾರ ಹಿಂದೂ ಪ್ರೌಢ ಶಾಲಾ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಯಿಂದ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕರ ಜೀವನ ಸಾಗಿಸಲು ಪ್ರತಿಯೊಬ್ಬರು ಪರಿಸರ ರಕ್ಷಣೆ ಮಾಡುವುದು ಅವಶ್ಯಕವಾಗಿದ್ದು, ಸರ್ಕಾರ ನಿಷೇಧಿಸಿದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿ, ಮರುಬಳಕೆ ಆಗುವ ವಸ್ತುಗಳನ್ನು ಮಾತ್ರ ಉಪಯೋಗಿಸಿ, ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರ ಪದಾರ್ಥಗಳನ್ನು ಸೇವಿಸದೇ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳ ಸೇವನೆ ಮಾಡಿ ಇದರಿಂದ ಪರಿಸರದ ಮೇಲೆ ಆಗು ವ ಆಘಾತಗಳನ್ನು ತಡೆದು ಪರಿಸರ ಬೆಳೆಸುವಂತವರಾಗಿ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಹಿಂದೂ ಹೈಸ್ಕೂಲ್ ಆವರಣದಲ್ಲಿ ಗಿಡಗಳನ್ನು ನೇಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಹೈಸ್ಕೂಲ್ ಮುಖ್ಯೋದ್ಯಾಪಕ ರೋಹಿದಾಸ ದೇಶಭಂಡಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸದಸ್ಯ ಕಾರ್ಯದರ್ಶಿ ರೋಹನ.ಆರ್.ಬುಜತಿ, ಶ್ರೀಮತಿ ಸುಮತಿ ದಾಂಮ್ಲೆ ಫ್ರೌಢ ಶಾಲೆ ಮುಖ್ಯೋದ್ಯಾಪಕ ಟಿ.ಎಮ್.ಶಮೀಂದ್ರ, ನಗರ ಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತ್ತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯೋಜನಾ ಸಹಾಯಕಿ ಡಾ. ಅಮೃತಾ ಎಸ್.ಶೇಟ್ ಪರಿಸರ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕವಿತಾ ಮೆಸ್ತಾ ಸ್ವಾಗತಿಸಿದರು.
ಹಿಂದೂ ಹೈಸ್ಕೂಲ್ ಶಿಕ್ಷಕಿ ವನಿತಾ ಶೇಟ್ ನಿರೂಪಿಸಿದರು.
ಪ್ರೀಯಾಂಕಾ ವಂದಿಸಿದರು.

ವರದಿಗಾರ : ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ