ಮುಂಡಗೋಡ:ಇಲ್ಲಿನ ಪೊಲೀಸ್ ಠಾಣೆಯ ನೂತನ ಸಿಪಿಐ ರಮೇಶ ಹಾನಪುರ ಅಧಿಕಾರ ಸ್ವೀಕರಿಸಿ ಹದಿನೈದು ದಿನಗಳಲ್ಲೇ ಪೊಲೀಸ್ ಠಾಣೆಯ ಚಿತ್ರಣವನ್ನೇ ಬದಲಾಯಿಸುವ ಮೂಲಕ ಜನಮನ ಗೆದ್ದಿದ್ದಾರೆ.




ನಾನು ಮೂಲತಃ ಕಲಘಟಗಿ ತಾಲೂಕಿನವನು. ಚಿತ್ರಕಲೆ ನನ್ನ ಉದ್ಯೋಗ. ನಾವು ಹೆಚ್ಚಾಗಿ ಶಾಲಾ-ಕಾಲೇಜುಗಳಲ್ಲಿ ಚಿತ್ರಗಳನ್ನು ಬಿಡಿಸುತ್ತೇವೆ. ಈ ಹಿಂದೆ ಯಲ್ಲಾಪುರ ಪೊಲೀಸ್ ಠಾಣೆಯ ಕಾಂಪೌಂಡ್ ಮೇಲೆ ಸಂಚಾರಿ ನಿಯಮ, ಸೈಬರ್ ವಂಚನೆ ಸೇರಿದಂತೆ ಇನ್ನಿತರ ಜಾಗೃತಿ ಚಿತ್ರಗಳನ್ನು ಮೂಡಿಸಿದ್ದೇವೆ. ಇದೀಗ ಇಲ್ಲಿನ ಠಾಣೆಗೆ ಬಂದಿದ್ದು ಇನ್ನು ಏಳೆಂಟು ದಿನಗಳಲ್ಲಿ ಚಿತ್ರಕಲೆ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಚಿತ್ರ ಕಲಾವಿದ ಜ್ಞಾನೇಶ್ವರ ಗೌಡ ಹೇಳಿದರು.
ತಾಲೂಕಿಗೆ ಬಂದು ಹದಿನೈದು ಇಪ್ಪತ್ತು ದಿನದಲ್ಲಿಯೇ ಸಿಪಿಐ ತಾವು ಜನಸ್ನೇಹಿ ಅಧಿಕಾರಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇಂತಹ ಪ್ರಾಮಾಣಿಕ ಹಾಗೂ ಖಡಕ್ ಅಧಿಕಾರಿ ಅವಶ್ಯಕತೆ ತಾಲೂಕಿಗೆ ಇತ್ತು. ಶಾಸಕ ಶಿವರಾಮ್ ಹೆಬ್ಬಾರ ಅವರು ದಕ್ಷ ಅಧಿಕಾರಿಯನ್ನು ಕೊಟ್ಟಿದ್ದಕ್ಕೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಿಪಿಐ ರಮೇಶ ಹಾನಪುರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ನೊಂದವರಿಗೆ ನ್ಯಾಯ ಸಿಗುವಂತಾಗಲಿ ಎಂದು ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಕಿರಣ ಶೇರಖಾನೆ ಹೇಳಿದರು.
ವರದಿಗಾರರು: ಬಸಯ್ಯ ತೋಟಯ್ಯನವರ
