
ಮುಂಡಗೋಡ್.: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಹೊಂದಿದ್ದರೆ ಪ್ರಜೆಯಾಗುವ ನೀತಿ ಕಥೆಯನ್ನು ಕಳೆದುಕೊಳ್ಳುತ್ತೇವೆ. ದೇಶದ ಪ್ರಜೆಯಾಗಿ ಮತದಾನ ಹಕ್ಕು ಪಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಹಾಗೂ ಉತ್ತರ ಕನ್ನಡ ಜಿಲ್ಲಾ ಎಸ್ ಐ ಆರ್ ಉಸ್ತುವಾರಿ ಭೀಮಣ್ಣ ನಾಯಕ್ ಹೇಳಿದರು. ಮಂಗಳವಾರ ಸಂಜೆ ಪಟ್ಟಣದ ಗಣಪತಿ ದೇವಾಲಯ ಸಭಾಗಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿ ತ್ರಿವ ಪರೀಕ್ಷೆಣೆ( ಎಸ್ಐಆರ್) ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಂಡವಾಳ ಶಾಹಿ ಸರ್ವಾಧಿಕಾರ ಧೋರಣೆಯಿಂದ ಬಿಜೆಪಿ ಹೇಗಾದರೂ ಮಾಡಿ ಅಧಿಕಾರಕ್ಕೆ ಇರುವ ದುರುದ್ದೇಶದಿಂದ ಎಸ್.ಐ.ಆರ್. ಜಾರಿ ಮಾಡಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾದರೆ ಪಕ್ಷಾತೀತವಾಗಿ ಮನೆ ಮನೆಗೆ ತೆರಳಿ ಅರ್ಜಿ ಬರ್ತಿ ಮಾಡಿ ಪಟ್ಟಿಯಿಂದ ಯಾರು ವಂಚಿತರಾಗದಂತೆ ಕಾಂಗ್ರೆಸ್ ಬೂತ್ ಏಜೆಂಟರು ಹಾಗೂ ಕಾರ್ಯಕರ್ತರು ಶ್ರಮಿಸಬೇಕೆಂದು ಹೇಳಿದರು.
ಸ್ವಾತಂತ್ರ ಬಳಿಕ ದೇಶದಲ್ಲಿ ನೀರಾವರಿ.ಆರೋಗ್ಯ ಕ್ಷೇತ್ರ ಸೇರಿದಂತೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸ್ವಾತಂತ್ರ ಮಹತ್ವವಾಗಿದೆ. ಕೇಂದ್ರ ಸರ್ಕಾರದ ವೈಫಲ್ಯದಿಂದ ಜನರು ಮೇಲಾಗುತ್ತಿರುವ ಹೊರೆಯನ್ನು ತಗ್ಗಿಸುವಂಥ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹಲವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು. ಎಲ್ಲಾ ವರ್ಗದ ಜನರು ನೆಮ್ಮದಿಯಿಂದ ಬದುಕಲು ಅನುಕೂಲ ಮಾಡಿಕೊಟ್ಟಿದೆ. ಆದರೂ ಕೂಡ ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ .
ರಾಜ್ಯದಲ್ಲಿ ಬಿಜೆಪಿಯಿಂದ ಸಾಕಷ್ಟು ಜನ ಮುಖ್ಯಮಂತ್ರಿ ಆಗಿ ಹೋಗಿದ್ದಾರೆ. ಯಾವುದಾದರೂ ಒಂದಾದರೂ ಜನಪರವಾದ ಯೋಜನೆ ನೀಡಿದ್ದಾರಾ ಎಂಬುದಕ್ಕೆ ಉತ್ತರಿಸಲಿ ಎಂದು ಅವರು. ಅಧಿಕಾರ ದಾಹದಿಂದ ರಾಜ್ಯದಲ್ಲಿ ಬಿಜೆಪಿ ಸುಳ್ಳಿನ ಸರಮಾಲೆ ಹೆಣೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್ ವಿ ಪಾಟೀಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾವ್ಕರ್. ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಎನ ದುಡಿಸಿ. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್ ಎಂ ನಾಯಕ್. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ವೈ ಬಿ ಬುಜಂಗಿ. ದೇವು ಪಾಟೀಲ್. ಕೆಂಜೋಡಿ ಗಲಬಿ. ಧರ್ಮರಾಜ್ ನಡಿಗೇರಿ. ಸಿದ್ದು ಹಡಪದ ಸಲ್ಮಾನ್ ಶೇರ್ಖಾನಿ ಮುಂತಾದವರು ಉಪಸ್ಥಿತಿ ಇದ್ದರು. ಧರ್ಮರಾಜ್ ನಡಿಗೇರಿ ನಿರೂಪಿಸಿದರು.
ವರದಿಗಾರರು: ಬಸಯ್ಯ ತೋಟಯ್ಯನವರ
