Monday, April 6, 2026
Homeಅಪಘಾತಬೈಕ್ ಅಪಘಾತಕ್ಕೆ ಕ್ಷಿಪ್ರ ಸ್ಪಂದನೆ: 112 ಸಿಬ್ಬಂದಿಯಿಂದ ಗಾಯಾಳುಗಳಿಗೆ ಜೀವ ರಕ್ಷಣೆ

ಬೈಕ್ ಅಪಘಾತಕ್ಕೆ ಕ್ಷಿಪ್ರ ಸ್ಪಂದನೆ: 112 ಸಿಬ್ಬಂದಿಯಿಂದ ಗಾಯಾಳುಗಳಿಗೆ ಜೀವ ರಕ್ಷಣೆ

ಬಸವನ ಬಾಗೇವಾಡಿ: ಏಪ್ರಿಲ್ 4, 2026ರಂದು ರಾಮನಹಟ್ಟಿ ಕ್ರಾಸ್ ಸಮೀಪ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕೆಲವರು ಗಾಯಗೊಂಡ ಘಟನೆ ನಡೆದಿದೆ.
ಈ ಕುರಿತು 112 ತುರ್ತು ಸಹಾಯವಾಣಿಗೆ ಕರೆ ಬಂದ ತಕ್ಷಣವೇ, ಕರ್ತವ್ಯದಲ್ಲಿದ್ದ 112 ತುರ್ತು ವಾಹನದ ಅಧಿಕಾರಿ ಹಾಗೂ ಸಿಬ್ಬಂದಿ ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆಗೆ ನೆರವಾದರು.
ಅಪಘಾತಕ್ಕೊಳಗಾದ ವಾಹನಗಳನ್ನು ನಂತರ ಬಸವನ ಬಾಗೇವಾಡಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತುರ್ತು ಸಂದರ್ಭಗಳಲ್ಲಿ 112 ಸೇವೆಯ ತ್ವರಿತ ಸ್ಪಂದನೆ ಮತ್ತೊಮ್ಮೆ ಜೀವ ರಕ್ಷಕವಾಗಿ ಪರಿಣಮಿಸಿದೆ.

ಹೆಚ್ಚಿನ ಸುದ್ದಿ